Featured

ಮೆಕ್ಸಿಕೊ  : ಜೈಲಿನ ಮೇಲೆ ದಾಳಿ – 14 ಮಂದಿ ದಾರುಣ ಸಾವು, 24 ಖೈದಿಗಳು ಪರಾರಿ – Vishwanews24

ಮೆಕ್ಸಿಕೊ  : ಜೈಲಿನ ಮೇಲೆ ದಾಳಿ – 14 ಮಂದಿ ದಾರುಣ ಸಾವು, 24 ಖೈದಿಗಳು ಪರಾರಿ

ಮೆಕ್ಸಿಕೊ ಸಿಟಿ: ಕಾರಾಗೃಹದ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಹತ್ತು ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ಹತರಾದ ಘಟನೆ ಮೆಕ್ಸಿಕೊದ ಟೆಕ್ಸಾಸ್ನ ಎಲ್ ಪಾಸೊ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್ ಜುರೆಜ್ ಎಂಬಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರಾಗೃಹದ ಬಳಿಗೆ ಬಂದ ಹಲವು ಶಸ್ತ್ರಸಜ್ಜಿತ ವಾಹನಗಳಲ್ಲಿ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮೆಕ್ಸಿಕನ್ ಸೈನಿಕರು ಮತ್ತು ಪೊಲೀಸರು ಜೈಲನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚಿಹೋವಾ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಆಗಸ್ಟ್ ನಲ್ಲಿ, ಇದೇ ಜೈಲಿನೊಳಗಿನ ಗಲಭೆ ನಡೆದಿದ್ದು, ಜೈಲಿನಲ್ಲಿದ್ದ ಇಬ್ಬರು ಕೈದಿಗಳನ್ನು ಗುಂಪೊಂದು ಕೊಂದು ಹಾಕಿತ್ತು. ನಂತರ ಜುರೆಜ್ ಪಟ್ಟಣದ ಬೀದಿಗಳಿಗೂ ಹಿಂಸಾಚಾರ ಹಬ್ಬಿತ್ತು. ಹತ್ಯೆ ಮಾಡಿದ್ದ ಗುಂಪು ಜುರೆಜ್ ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಿದ್ದು, 11 ಜನರು ಮೃತಪಟ್ಟಿದ್ದರು.

ಭಾನುವಾರದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರದ ಘಟನೆಯಲ್ಲಿ ಪೊಲೀಸರು ಇಬ್ಬರು ಬಂದೂಕುಧಾರಿಗಳನ್ನೂ ಕೊಂದಿದ್ದಾರೆ. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು 24 ಕೈದಿಗಳು ಪರಾರಿಯಾಗಿದ್ದಾರೆ.

Vishwa News 24

Recent Posts

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

56 minutes ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 hour ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 hours ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

2 hours ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

3 hours ago