ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಅಮೆರಿಕಾದಲ್ಲಿಯೂ ಗೌರವ ಸಿಕ್ಕಿದೆ.ಅಮೆರಿಕಾದ ನಾರ್ತ್ ಕರೋಲಿನಾ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲಾಗುತ್ತಿದೆ. ಇದು ಕನ್ನಡಿಗರಿಗೊಬ್ಬರಿಗೆ ಸಿಕ್ಕ ಬಹುದೊಡ್ಡ ಸನ್ಮಾನ.
ಕಳೆದ ಮೇ 12ರಂದು ಅಮೆರಿಕದ ಉತ್ತರ ಕರೊಲಿನಾದ ಷಾರ್ಲೆಟ್ ನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡಿದ ವಿಜಯ್‍ಪ್ರಕಾಶ್ ಅಲ್ಲಿನ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದರು. ಅಪಾರ ಸಂಖ್ಯೆಯ ಅನಿವಾಸಿ ಭಾರತೀಯರಲ್ಲದೆ ಅಮೆರಿಕನ್ನರೂ ಕೂಡ ಆಗಮಿಸಿದ್ದ ಅಲ್ಲಿನ ಮೇಯರ್ ವಿಲಿಯಮ್ ಸಿ ಡಶ್ ಕೂಡ ಭಾಗವಹಿಸಿದ್ದರು.
ಗಾಯಕ ವಿಜಯ ಪ್ರಕಾಶ್ ಅವರ ಆ ಕಂಠಸಿರಿಗೆ ಮಾರುಹೋದ ಅಲ್ಲಿನ ಚುನಾಯಿತ ಪ್ರತಿನಿಧಿ ವಿಲಿಯಮ್, ವಿಜಯ್ ಪ್ರಕಾಶ್ ಅವರ ಬಗ್ಗೆ ಹಾಗೂ ಅವರ ಸಂಗೀತ ಸಾಧನೆಯ ಬಗ್ಗೆ ತಿಳಿದುಕೊಂಡಿದ್ದಾರೆ.
ಷಾರ್ಲೆಟ್ ನಗರವನ್ನೇ ಸಂಗೀತದ ಅಲೆಯಲ್ಲಿ ತೇಲಿಸಿದ್ದ ವಿಜಯ್ ಪ್ರಕಾಶ್ ಅವರಿಗೆ ಆ ದಿನವನ್ನು ಮೀಸಲಿಡಲು ಸ್ಥಳೀಯ ಆಡಳಿತ ಮಂಡಳಿಯ ಜೊತೆ ಮೇಯರ್ ವಿಲಿಯಂ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇದೀಗ 2019ರ ಮೇ 12 ವಿಜಯ್ ಪ್ರಕಾಶ್ ಡೇ ಎಂದು ಷಾರ್ಲೆಟ್ ನಗರದ ಸರ್ಕಾರಿ ದಾಖಲೆಯಲ್ಲಿ ನಮೂದಿಸಲಾಗಿದೆ. ಪ್ರತಿವರ್ಷ ಈ ದಿನವನ್ನು ವಿಜಯಪ್ರಕಾಶ್ ಡೇ ಎಂದು ಆಚರಿಸಲು ನಾರ್ತ್ ಕರೊಲಿನಾದ ಷಾರ್ಲೆಟ್ ನಗರದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…