ಮೂಡುಬಿದಿರೆ: ಮೈಸೂರಿನಲ್ಲಿ ಕಂಬಳ ಆಯೋಜಿಸುವ ಸಂಬಂಧ ಇದುವರೆಗೆ ಜಿಲ್ಲಾ ಕಂಬಳ ಸಮಿತಿಗಾಗಲಿ ಅಥವಾ ರಾಜ್ಯ ಕಂಬಳ ಅಸೋಸಿಯೇಷನ್‌ಗಾಗಲಿ ಯಾವುದೇ ಅಧಿಕೃತ ಲಿಖಿತ ಆಹ್ವಾನ ಇಲ್ಲವೇ ಪತ್ರ ಬಂದಿಲ್ಲ. ಅಧಿಕೃತ ಪ್ರಸ್ತಾವನೆ ಬಂದ ನಂತರವೇ ವಿಶೇಷ ಸಭೆ ಕರೆದು, ಕೋಣಗಳನ್ನು ಕರೆದೊಯ್ಯುವ ಹಾಗೂ ಸಹಕಾರ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಮೂಡುಬಿದಿರೆಯ ಕಡಲಕೆರೆ ಸೃಷ್ಟಿ ಗಾರ್ಡನ್ನಲ್ಲಿ ಮಂಗಳವಾರ (ಸೆಪ್ಟೆಂಬರ್ 8ರಂದು) ನಡೆದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಜಂಟಿ ಮಹತ್ವದ ಸಮಾಲೋಚನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
ಅಧಿಕೃತ ಪತ್ರ ಬಂದ ಬಳಿಕ ಪ್ರತ್ಯೇಕ ಸಭೆ: ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಕೇವಲ ಅನಧಿಕೃತ ಚರ್ಚೆಗಳಷ್ಟೇ ನಡೆದಿವೆ. ಅಧಿಕೃತ ಆಹ್ವಾನ ಪತ್ರ ಬಂದ ಕೂಡಲೇ ಕಂಬಳ ಸಮಿತಿಯ ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು. ಅಲ್ಲಿ ಕರಾವಳಿಯಿಂದ ಎಷ್ಟು ಜೋಡಿ ಕೋಣಗಳನ್ನು ಕಳುಹಿಸಬೇಕು, ಯಾವ ರೀತಿ ಸಾರಿಗೆ ಹಾಗೂ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ ; ಪ್ರಕರಣಕ್ಕೆ ಮಹತ್ವದ ತಿರುವು ಬೆಂಗಳೂರು: ಬೆಂಗಳೂರಿನ…
ಉಡುಪಿ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯ ; ಸೆಪ್ಟೆಂಬರ್ 30 ಕೊನೆಯ ದಿನ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ…
ಬೆಂಗಳೂರು: ಆಹಾರ ಮತ್ತು ದಿನಬಳಕೆ ವಸ್ತುಗಳ ಮಾರಾಟ ಅಂಗಡಿಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ ಬೆಂಗಳೂರು: ನಗರದ ವಿವಿಧೆಡೆ ಆಹಾರ…
ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನದ ಸಂಭ್ರಮ.. ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ…
ಮಂಗಳೂರು: ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ ಮಂಗಳೂರು: ಪೆರ್ಮನ್ನೂರು ಗ್ರಾಮದ ಹೊಸಪದಪು ಕಲ್ಲಾಪು ಪಟ್ಲ ನಿವಾಸಿ 19 ವರ್ಷದ…
ಬೆಳ್ತಂಗಡಿ: ಶಾಲಾ ಮೈದಾನದ ಬಳಿ ಮಾದಕ ವಸ್ತು ಮಾರಾಟ ಪ್ರಕರಣ ; ಇಬ್ಬರ ಬಂಧನ ಬೆಳ್ತಂಗಡಿ : ಮಾದಕ ದ್ರವ್ಯ…