Featured

ಮೊದಲ ಬಾರಿಗೆ ಮೂವರು ಡಿಸಿಎಂ ಮಾಡಿದ್ದಾರೆ. ಯಾವ ಆಧಾರದಲ್ಲಿ ಮಾಡಿದ್ದಾರೆಂಬುದು ಗೊತ್ತಿಲ್ಲ : ದೇವೇಗೌಡ -Vishwanews24

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಪಕ್ಷದಲ್ಲೇ ಹಲವು ಗೊಂದಲಗಳಿವೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಉತ್ತರಾಂಚಲ, ಛತ್ತೀಸ್ ಗಡ, ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲೂ ಅನೇಕ ಸಾವು-ನೋವು ಸಂಭವಿಸಿವೆ. ಸಿಎಂ ಯಡಿಯೂರಪ್ಪ, ನಿಯೋಗ ಕರೆದೊಯ್ದು ಅನುದಾನ ತರುವುದಾಗಿ ಹೇಳಿದ್ದಾರೆ. ಮೊದಲ ಬಾರಿಗೆ ಮೂವರು ಡಿಸಿಎಂ ಮಾಡಿದ್ದಾರೆ. ಯಾವ ಆಧಾರದಲ್ಲಿ ಮಾಡಿದ್ದಾರೆಂಬುದು ಗೊತ್ತಿಲ್ಲ. ಅವರ ಪಕ್ಷದಲ್ಲೇ ಹಲವು ಗೊಂದಲಗಳಿವೆ ಎಂದು ಟೀಕಿಸಿದರು.

ಈಗಾಗಲೇ ಲಭಿಸಿರುವ ಮಾಹಿತಿ ಅನ್ವಯ ಹಲವು ಸರ್ಕಾರಿ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ. ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ 6 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನೂ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಕೊಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅರ್’ಬಿಐನಿಂದ ದೊಡ್ಡ ಪ್ರಮಾಣದ ಹಣ ಪಡೆದಿರುವುದೇ ಸಾಕ್ಷಿ. ಭಾರತೀಯ ರಿಸರ್ವ್​ ಬ್ಯಾಂಕಿನಿಂದ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಿಂದೆಂದೂ ಈ ಪ್ರಮಾಣದಲ್ಲಿ ಹಣ ತೆಗೆದುಕೊಂಡಿರಲಿಲ್ಲ ಎಂದು ದೂರಿದ್ದಾರೆ.

Vishwa News 24

Recent Posts

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ – vishwanews24

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…

2 hours ago

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ – vishwanews24

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ ಬೀದರ್‌: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…

3 hours ago

ಬಿಜೆಪಿಯಿಂದ ಅಧಿವೇಶನಕ್ಕೆ ಅಡ್ಡಿ ಹಿಂದೆ ಹಿಡನ್ ಅಜೆಂಡಾ: ಯು.ಟಿ.ಖಾದರ್ ಆರೋಪ – vishwanews24

ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು .. ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ…

3 hours ago

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ – ನಾಲ್ವರು ಮೀನುಗಾರರ ರಕ್ಷಣೆ – vishwanews24

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ - ನಾಲ್ವರು ಮೀನುಗಾರರ ರಕ್ಷಣೆ ಕುಂದಾಪುರ :ಮೀನುಗಾರಿಕಾ ದೋಣಿಯ ಎಂಜಿನ್ ದೋಷದಿಂದ ಸಮುದ್ರದ…

3 hours ago

ಮಂಗಳೂರು: ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ : ಸಚಿವ ಯು.ಟಿ.ಖಾದರ್ – vishwanews24

ಮಂಗಳೂರು: ಕೃತಕ ಪನ್ನೀರ್, ಫುಡ್ ಕಲರ್‌, ಅಜಿನಮೊಟೊ ವಿರುದ್ಧ ಕ್ರಮ ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ :…

6 hours ago

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  – vishwanews24

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  ಪುತ್ತೂರು: ಹಲವು…

6 hours ago