ಭಾರತದಲ್ಲಿ ಮೋದಿ ವಿರೋಧಿಗಳು ಮೋದಿ ಕುರಿತಾಗಿ ನಡೆಸುವ ಅಪಪ್ರಚಾರ, ದುರುದ್ದೇಶಪೂರ್ವಕವಾಗಿ ನಡೆಸುವ ಅಭಿಯಾನಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನಷ್ಟು ಬಲ ತುಂಬುತ್ತಿದ್ದು. ಇಂತಹ ಹಲವಾರು ಘಟನೆಗಳನ್ನು ನಾವೆಲ್ಲಾ ಕಳೆದ ನಾಲ್ಕು – ಐದು ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದೇವೆ. ಈಗ ಇಂತಹದ್ದೇ ಇನ್ನೊಂದು ಅತಿದೊಡ್ಡ ಅಭಿಯಾನವೇ ದೇಶದಲ್ಲಿ ನಡೆದುಕೊಂಡು ಬರುತ್ತಿದ್ದು ನರೇಂದ್ರ ಮೋದಿಯವರ ವಿರೋಧಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಇತ್ತೀಚಿಗೆ ‘ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಸಂಕಷ್ಟದಲ್ಲಿದ್ದು, ರಾಜಕೀಯ ವಾತಾವರಣ ಪ್ರಕ್ಷುಬ್ಧಮಯವಾಗಿದೆ. 2019ರ ಲೋಕಸಭೆ ಚುನಾವಣೆಯವರೆಗೆ ದೇಶಕ್ಕಾಗಿ ಪ್ರಾರ್ಥಿಸಿ’ ಎಂದು ದೆಹಲಿಯ ಕ್ರೖೆಸ್ತ ಧರ್ಮಗುರು ಒಬ್ಬರು ದೇಶದ ಚರ್ಚ್ಗಳಿಗೆ ಪತ್ರ ಬರೆದು ವಿವಾದದ ಬಿರುಗಾಳಿ ಎಬ್ಬಿಸುವಂತೆ ಮಾಡಿದ್ದರು. ‘2019ರ ಲೋಕಸಭೆ ಚುನಾವಣೆ ಬರುವವರೆಗೆ ದೇಶದಲ್ಲಿರುವ ಎಲ್ಲ ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ಹೊಸ ಸರ್ಕಾರದ ಉದಯವಾಗಬೇಕು’ ಎಂಬುದು ಈ ಕ್ರೈಸ್ತ ಧರ್ಮಗುರು ಬರೆದ ಪತ್ರದ ಸಾರಾಂಶವಾಗಿತ್ತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಈ ಪತ್ರದ ಬಗ್ಗೆ ಕಿಡಿಕಾರಿದ್ದು, ತರಾಟೆಗೆ ತೆಗೆದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಕ್ರೈಸ್ತ ಧರ್ಮಗುರು ‘ಚರ್ಚ್ಗಳಲ್ಲಿ ಮೋದಿ ವಿರುದ್ಧ ಪ್ರಾರ್ಥನೆಗೆ ಕರೆ ನೀಡಿದ್ದರ ವಿರುದ್ಧ ಇದೀಗ ದೇಶದಲ್ಲಿ ಒಂದು ಅಭಿಯಾನವೇ ಆರಂಭಗೊಂಡಿದ್ದು. ಮೋದಿ ವಿರೋಧಿಗಳ ಪ್ರಾರ್ಥನೆಗೆ ವಿರುದ್ಧವಾಗಿ ನಾವೂ ನಮ್ಮ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸೋಣ’ ಎಂಬ ಕೂಗೆದ್ದಿದ್ದು ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕದ ಮೂಲೆಮೂಲೆಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಪೂಜೆಗಳು ನಡೆದಿವೆ ಹಾಗೂ ನಡೆಯುತ್ತಿವೆ.
ಇನ್ನು ಕರ್ನಾಟಕದಲ್ಲಿಯೂ ಈ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಹಲವಾರು ಮೋದಿ ಅಭಿಮಾನಿಗಳು ಪ್ರಧಾನಮಂತ್ರಿಗಳ ಹೆಸರಿನಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇಂದು (ಮಂಗಳವಾರ) ಮಂಗಳೂರು ಶ್ರೀ ರುಕುಮಾಯಿ ದೇವಸ್ಥಾನದಲ್ಲಿ ರಾತ್ರಿ 8.30ಕ್ಕೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯೂ ಮೋದಿ ಅಭಿಮಾನಿಗಳಿಂದ ಆಯೋಜನೆಗೊಂಡಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…