ರಾಜ್ಯ ನ್ಯೂಸ್

ಮೋದಿಗಾಗಿ ರಾಜ್ಯದ ವಿವಿಧೆಡೆ ಹಿಂದೂಗಳಿಂದ ದೇವಸ್ಥಾನಗಳಲ್ಲಿ ಪೂಜೆ…

ಭಾರತದಲ್ಲಿ ಮೋದಿ ವಿರೋಧಿಗಳು ಮೋದಿ ಕುರಿತಾಗಿ ನಡೆಸುವ ಅಪಪ್ರಚಾರ, ದುರುದ್ದೇಶಪೂರ್ವಕವಾಗಿ ನಡೆಸುವ ಅಭಿಯಾನಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನಷ್ಟು ಬಲ ತುಂಬುತ್ತಿದ್ದು. ಇಂತಹ ಹಲವಾರು ಘಟನೆಗಳನ್ನು ನಾವೆಲ್ಲಾ ಕಳೆದ ನಾಲ್ಕು – ಐದು ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದೇವೆ. ಈಗ ಇಂತಹದ್ದೇ ಇನ್ನೊಂದು ಅತಿದೊಡ್ಡ ಅಭಿಯಾನವೇ ದೇಶದಲ್ಲಿ ನಡೆದುಕೊಂಡು ಬರುತ್ತಿದ್ದು ನರೇಂದ್ರ ಮೋದಿಯವರ ವಿರೋಧಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

 

ಇತ್ತೀಚಿಗೆ ‘ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಸಂಕಷ್ಟದಲ್ಲಿದ್ದು, ರಾಜಕೀಯ ವಾತಾವರಣ ಪ್ರಕ್ಷುಬ್ಧಮಯವಾಗಿದೆ. 2019ರ ಲೋಕಸಭೆ ಚುನಾವಣೆಯವರೆಗೆ ದೇಶಕ್ಕಾಗಿ ಪ್ರಾರ್ಥಿಸಿ’ ಎಂದು ದೆಹಲಿಯ ಕ್ರೖೆಸ್ತ ಧರ್ಮಗುರು ಒಬ್ಬರು ದೇಶದ ಚರ್ಚ್​ಗಳಿಗೆ ಪತ್ರ ಬರೆದು ವಿವಾದದ ಬಿರುಗಾಳಿ ಎಬ್ಬಿಸುವಂತೆ ಮಾಡಿದ್ದರು. ‘2019ರ ಲೋಕಸಭೆ ಚುನಾವಣೆ ಬರುವವರೆಗೆ ದೇಶದಲ್ಲಿರುವ ಎಲ್ಲ ಚರ್ಚ್​ಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ಹೊಸ ಸರ್ಕಾರದ ಉದಯವಾಗಬೇಕು’ ಎಂಬುದು ಈ ಕ್ರೈಸ್ತ ಧರ್ಮಗುರು ಬರೆದ ಪತ್ರದ ಸಾರಾಂಶವಾಗಿತ್ತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಈ ಪತ್ರದ ಬಗ್ಗೆ ಕಿಡಿಕಾರಿದ್ದು, ತರಾಟೆಗೆ ತೆಗೆದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಕ್ರೈಸ್ತ ಧರ್ಮಗುರು ‘ಚರ್ಚ್​ಗಳಲ್ಲಿ ಮೋದಿ ವಿರುದ್ಧ ಪ್ರಾರ್ಥನೆಗೆ ಕರೆ ನೀಡಿದ್ದರ ವಿರುದ್ಧ ಇದೀಗ ದೇಶದಲ್ಲಿ ಒಂದು ಅಭಿಯಾನವೇ ಆರಂಭಗೊಂಡಿದ್ದು. ಮೋದಿ ವಿರೋಧಿಗಳ ಪ್ರಾರ್ಥನೆಗೆ ವಿರುದ್ಧವಾಗಿ ನಾವೂ ನಮ್ಮ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸೋಣ’ ಎಂಬ ಕೂಗೆದ್ದಿದ್ದು ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕದ ಮೂಲೆಮೂಲೆಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಪೂಜೆಗಳು ನಡೆದಿವೆ ಹಾಗೂ ನಡೆಯುತ್ತಿವೆ.

ಇನ್ನು ಕರ್ನಾಟಕದಲ್ಲಿಯೂ ಈ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಹಲವಾರು ಮೋದಿ ಅಭಿಮಾನಿಗಳು ಪ್ರಧಾನಮಂತ್ರಿಗಳ ಹೆಸರಿನಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇಂದು (ಮಂಗಳವಾರ) ಮಂಗಳೂರು ಶ್ರೀ ರುಕುಮಾಯಿ ದೇವಸ್ಥಾನದಲ್ಲಿ ರಾತ್ರಿ 8.30ಕ್ಕೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯೂ ಮೋದಿ ಅಭಿಮಾನಿಗಳಿಂದ ಆಯೋಜನೆಗೊಂಡಿದೆ.ಇನ್ನು ಈ ಕುರಿತು ಮಾತನಾಡಿರುವ ದೇವಸ್ಥಾನವೊಂದರ ಅರ್ಚಕರಾಗಿರುವ ಪ್ರದೀಪ್ ಕುಮಾರ್ ಎಂಬುವವರು ” ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರವಾಗಿ ನಮ್ಮ ದೇವಸ್ಥಾನದಲ್ಲೂ ಇಬ್ಬರು ಅರ್ಚನೆ ಮಾಡಿಸಿದ್ದಾರೆ. ಈ ರೀತಿ ದೇಶದ ನಾಯಕನ ಬಗ್ಗೆ ಅರ್ಚನೆ ಮಾಡಿಸುವುದು ಇದೇ ಮೊದಲು ಮತ್ತು ಈ ರೀತಿ ಮಾಡಿಸುವುದೂ ತಪ್ಪಲ್ಲ ಎಂದಿದ್ದಾರೆ.

 

 

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago