ಬೆಂಗಳೂರು: ಮೋದಿ ದೇಶದ ಅತ್ಯಂತ ಭ್ರಷ್ಟ ಪ್ರಧಾನಿ. ದೇಶದ ರಕ್ಷಣೆಗೆ ಹಣವನ್ನೇ ನೀಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರ ಕೇವಲ ಬೂಟಾಟಿಕೆಯ ಸರ್ಕಾರ. ಅಚ್ಛೇ ದಿನ್ ಯಾವಾಗ ಬಂದಿದೆ ಹೇಳಿ? ಚೋಕ್ಸಿ, ನೀರವ್ ಮೋದಿ ₹ 60 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಪ್ರಧಾನಿ ಸರಿಯಾಗಿ ಉತ್ತರ ನೀಡಿಲ್ಲ. ಇದರ ವಿರುದ್ಧ ಬೃಹತ್ ಹೊರಾಟ ನಡೆಸುತ್ತೇವೆ ಎಂದರು.
ಇನ್ನು ರಫೆಲ್ ಯುದ್ಧ ವಿಮಾನ ಖರೀದಿಯ ವಿಚಾರದಲ್ಲಿ ಮೋದಿ ಪಲಾಯನ ಮಾಡ್ತಿದ್ದಾರೆ. 108 ಯುದ್ಧ ವಿಮಾನ ಎಚ್‌ಎಎಲ್‌ನಲ್ಲಿ ನಿರ್ಮಾಣ ಆಗಬೇಕು. 18 ಯುದ್ಧ ವಿಮಾನ ಫ್ರಾನ್ಸ್‌ನಿಂದ ಖರೀದಿಸಲು ನಿರ್ಧರಿಸಲಾಗಿತ್ತು. ಪ್ರತಿ ವಿಮಾನಕ್ಕೆ 521 ಕೋಟಿ ನಿಗದಿಯಾಗಿತ್ತು. ಆದ್ರೆ ಯುಪಿಎ ಸರ್ಕಾರದ ಈ ಒಪ್ಪಂದವನ್ನು ಮೋದಿಮುಂದುವರಿಸಲಿಲ್ಲ. ಏಕಾಏಕಿ ಫ್ರ್ಯಾನ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. 126 ಯುದ್ಧ ವಿಮಾನಗಳನ್ನ ಖರೀದಿ ಮಾಡಿದ್ದು ಏಕೆ? ರಫೆಲ್ ಡೀಲ್ ನಡೆಯುವಾಗ ರಕ್ಷಣಾ ಸಚಿವರು ಇರಲಿಲ್ಲ. ಅಲ್ಲಿ ಇದ್ದದ್ದು ಅನಿಲ್ ಅಂಬಾನಿ ಮಾತ್ರ. ಯುಪಿಎ ಇದ್ದಾಗ ಯುದ್ಧ ವಿಮಾನ ದರವನ್ನು ಬಹಿರಂಗಗೊಳಿಸಲಾಗಿತ್ತು. ಆದ್ರೆ ಈಗ ಯುದ್ಧ ವಿಮಾನ ಖರೀದಿ ಡೀಲ್ ಬಹಿರಂಗ ಸಾಧ್ಯವಿಲ್ಲ ಅಂತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಜಾಹಿರಾತು: vyshali Bar& Family Restaurant kaup:
prop: NAYESH P SHETTY: 9620427036
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…