ದೇಶ

ಮೋದಿ ನಿಲುವಿಗೆ ಕಂಗೆಟ್ಟ ಟ್ರಂಪ್ …

ಹೊಸದಿಲ್ಲಿ: ಅಮೆರಿಕದ ಟ್ಯಾರಿಫ್ ಟ್ರೇಡ್‌ ವಾರ್‌ ನೊಳಗೆ ಕಾಲಿಟ್ಟಿರುವ ಭಾರತ ಕೂಡ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ತೀರ್ಮಾನಿಸಿದೆ. ಈ ಮೂಲಕ ಅಮೆರಿಕದ ಉದ್ಧಟತನಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಒಟ್ಟು 29 ಉತ್ಪನ್ನಗಳ ಕಸ್ಟಮ್ಸ್ ಸುಂಕ ಹೆಚ್ಚಳ ಮಾಡಲು ಭಾರತ ಸರಕಾರ ನಿರ್ಧರಿಸಿದೆ. ಆ ಪೈಕಿ 28 ಸರಕುಗಳ ಮೇಲಿನ ಹೆಚ್ಚುವರಿ ತೆರಿಗೆ ತತ್‌ಕ್ಷಣಕ್ಕೆ ಜಾರಿಗೆ ಬಂದರೆ ಸಿಗಡಿ ಮೀನಿನ ಮೇಲಿನ ತೆರಿಗೆ ಹೇರಿಕೆ ಆ. 4ರಿಂದ ಜಾರಿಗೆ ಬರಲಿದೆ. ಅಮೆರಿಕದಿಂದ ಆಮ ದಾಗುತ್ತಿರುವ ಬಹಳಷ್ಟು ಕೃಷಿ ಮತ್ತು ಸ್ಟೀಲ್ ಉತ್ಪನ್ನಗಳ ದರ ಹೆಚ್ಚಾಗಲಿದೆ.

ಅಂದರೆ, ಬೋರಿಕ್ ಆ್ಯಸಿಡ್, ಅವರೆ (ಲೆಂಟಿಲ್) ಸಹಿತ 30 ವಸ್ತುಗಳ ಪಟ್ಟಿಯನ್ನು ವಿಶ್ವ ವ್ಯಾಪಾರ ಸಂಸ್ಥೆಗೆ ಕಳುಹಿಸಿಕೊಟ್ಟಿದೆ. ಯಾವ ಪದಾರ್ಥಕ್ಕೆ ಎಷ್ಟು ತೆರಿಗೆ ಹಾಕುತ್ತೇವೆ ಎಂದು ಈ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದ್ದು, ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಸಿಗಡಿ ಮೇಲಿನ ತೆರಿಗೆಯನ್ನು ಶೇ.30ಕ್ಕೇರಿಸಲಾಗಿದ್ದರೆ, ಕಡಲೆ, ಕಡಲೆ ಬೇಳೆ, ತೊಗರಿ ಬೇಳೆಯ ಮೇಲಿನ ತೆರಿಗೆ ಶೇ.70ಕ್ಕೆ ಏರಿಸಲಾಗಿದೆ. ಇದರ ಜತೆಯಲ್ಲಿ ಸೇಬು, ಬಾದಾಮಿ ಮೇಲೂ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.

ಅಮೆರಿಕ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಈಗಾಗಲೇ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡಿರುವ ಭಾರತ, ತಾನೂ ಅಮೆರಿಕದಿಂದ ಆಮದಾಗುವ ನಟ್, ಬೋಲ್ಟ್, ಸ್ಕ್ರ್ಯು ಸಹಿತ ಹಲವಾರು ವಸ್ತುಗಳ ಮೇಲೆ ಇನ್ನಷ್ಟು ಆಮದು ಸುಂಕ ವಿಧಿಸಿದೆ.ಅಮೆರಿಕವು ತಾನು ಆಮದು ಮಾಡಿಕೊಳ್ಳುತ್ತಿರುವ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಈ ವ್ಯಾಪಾರ ಸಮರಕ್ಕೆ ನಾಂದಿ ಹಾಡಿತ್ತು. ತದನಂತರ ಐರೋಪ್ಯ ಒಕ್ಕೂಟ ಹಾಗೂ ಚೀನ ಕೂಡ ತಿರುಗೇಟು ನೀಡಿ ಅಮೆರಿಕದ ಉತ್ಪನ್ನಗಳಿಗೆ ಆಮದು ಸುಂಕ ಹೆಚ್ಚಳ ಮಾಡಿದ್ದವು.

 

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

9 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

9 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

10 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

11 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

14 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

14 hours ago