ನವದೆಹಲಿ,: ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಅಣಕಿಸಿದ್ದಾರೆ.
‘ನಿಮಗೆ ಗೊತ್ತೆ? ಮೋದಿ ಬೆಂಬಲಿಗರ ಪೈಕಿ ಮೂವರಲ್ಲಿ ಒಬ್ಬರು ಮತ್ತಿಬ್ಬರಂತೆ ಮೂರ್ಖರು’ ಎಂದಿರುವ ಮೇಮ್‌ಅನ್ನು ಟ್ವೀಟ್ ಮಾಡಿರುವ ರಮ್ಯಾ, ಇದು ನನ್ನ ಫೇವರೀಟ್ ಎಂದು ಬರೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕಿ ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಬೆಂಬಲಿಸಿ ಮತ ಹಾಕಿದವರನ್ನು ಮೂರ್ಖರು ಎಂದಿದ್ದಾರೆ. 2014 ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಶೇ.32ರಷ್ಟು ಮತಗಳನ್ನು ಪಡೆದಿತ್ತು. ಇದೀಗ ಅಷ್ಟೂ ಜನರನ್ನು ಮೂರ್ಖರು ಎಂದಂತಾಗಿದೆ.
ಇದಕ್ಕೆ ಬಿಜೆಪಿ ಪಾಳಯದಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಮ್ಯಾ ನಟನೆಯಲ್ಲಿ ವೈಫಲ್ಯ ಹೊಂದಿದಂತೆ ಐಟಿ ಸೆಲ್ ಹೆಡ್ ಆಗಿಯೂ ವೈಫಲ್ಯ ಹೊಂದಿದ್ದಾರೆ ಎಂದು ನಿಮಗೆ ಅನಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವು ನೆಟ್ಟಿಗರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ಚಿತ್ರವನ್ನು ಹಾಕಿ, ನಿಮಗೆ ಗೊತ್ತೆ? ರಾಹುಲ್ ಗಾಂಧಿಯ ಬೆಂಬಲಿಗರ ಪೈಕಿ ಮೂವರಲ್ಲಿ ಮೂವರು ರಾಹುಲ್ ಗಾಂಧಿ ಅವರಂತೆ ಮೂರ್ಖರು ಎಂದು ಕಾಲೆಳೆದಿದ್ದಾರೆ.
ಈ ಕುರಿತು ವರದಿ ಮಾಡಿದ ಎಎನ್‌ಐ ಟ್ವೀಟ್‌ಅನ್ನು ರೀಟ್ವೀಟ್ ಮಾಡಿರುವ ರಮ್ಯಾ ಬೆಂಬಲಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…