Featured

ಮೋದಿ ರಾಜಕೀಯ ಯಶಸ್ಸಿನ ಹಿಂದಿನ ಗುರು ಯಾರು ಗೊತ್ತಾ??!

“ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ”

ಬೆಂಗಳೂರು: ಬಿಜೆಪಿ ಇಂದು ಆಡಳಿರೂಢ ಪಕ್ಷವಾಗಿದೆ. ಸದ್ಯಕ್ಕೆ ಬಿಜೆಪಿ ಎಂದರೆ ಮೋದಿ ಎನ್ನುವಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ “ಅಬ್ ಕೀ ಬಾರ್ ಅಟಲ್ ಸರ್ಕಾರ್” ಎಂದೇ ಕರೆಯಲಾಗುತ್ತಿತ್ತು. ಎಂತಹ ಸಂದರ್ಭದಲ್ಲೂ ಎದೆಗುಂದದ ಅಟಲ್ ಅವರ ಧೈರ್ಯ, ಪ್ರೋಖ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲೇ ಆಗಲಿ, ಕಾರ್ಗಿಲ್ ಯುದ್ಧದ ಸಮಯದಲ್ಲೇ ಆಗಲಿ ಅವರು ತೋರಿದ ದಿಟ್ಟತನ ಅವರೊಳಗಿದ್ದ ಪ್ರಖರ ರಾಜಕಾರಣಿಯ ಪರಿಚಯವನ್ನು ಮಾಡಿಕೊಟ್ಟಿತ್ತು. ಇಂತಹ ವಾಜಪೇಯಿಯವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ತಮ್ಮಂತೆ ಬಿಜೆಪಿ ಪಕ್ಷಕ್ಕೆ ನೇತಾರರಾಗುವಂತಹ ಸಮರ್ಥ ಶಿಷ್ಯರನ್ನ ತಯಾರು ಮಾಡಿದರು. ಇವತ್ತು ಮೋದಿ ಭಾರತದ ಯಶಸ್ವಿ ಪ್ರಧಾನಿಯಾಗಿದ್ದಾರೆ ಅಂದರೆ ಅದರ ಹಿಂದಿರುವ ಶಕ್ತಿ ಅಡ್ವಾಣಿ ಮತ್ತು ವಾಜಪೇಯಿ ಮಾತ್ರ.

ವಾಜಪೇಯಿ ಎಂತಹ ಸಂದರ್ಭವನ್ನು ಹೇಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು ಎನ್ನುವುದಕ್ಕೆ ಒಂದು ಸಣ್ಣ ನಿದರ್ಶನವೆಂದರೆ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಉದ್ಭವಿಸಿದ್ದ ಕ್ಷೋಭೆಯನ್ನು ಸಂಭಾಳಿಸಿದ ರೀತಿ. 2002 ಫೆಬ್ರವರಿ 27. ಅಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಕೋಮುದಳ್ಳುರಿಯಲ್ಲಿ ನೊಂದು ಬೆಂದವರು ಸಾವಿರಾರು ಜನ. ಪ್ರಾಣ ಕಳೆದುಕೊಂಡವರು ನೂರಾರು ಮಂದಿ. ಗುಜರಾತ್ ರಾಜ್ಯದಲ್ಲಿ ನಡೆದ ಒಂದು ಹತ್ಯಾಕಾಂಡ ಭಾರತದ ಉದ್ದಗಲಕ್ಕೂ ಕಾವನ್ನು ಹರಡಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನರಮೇಧವನ್ನೇ ಮಾಡಿಬಿಟ್ಟರು.

ಭಾವೈಕ್ಯತೆಗೆ ಧಕ್ಕೆ ತಂದು ಬಿಟ್ಟರು ಎಂದು ಆರೋಪಿಸಲಾಯ್ತು. ಇದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಭಾರೀ ಮುಖಭಂಗವನ್ನು ಅನುಭವಿಸಬೇಕಾಗಿ ಬಂತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಹಲವು ದಿನಗಳ ಮಟ್ಟಿಗೆ ಭಾರೀ ಸಂಚಲನವನ್ನೇ ಉಂಟು ಮಾಡಿದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ ಬೇಡವೋ ಎನ್ನುವ ಜಿಜ್ಞಾಸೆ ತೀವ್ರವಾಗಿದ್ದ ಸಮಯದಲ್ಲಿಯೇ ಈ ಘಟನೆ ನಡೆದದ್ದು, ಆತಂಕಕ್ಕೂ ಕಾರಣವಾಗಿತ್ತು.

ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತೆ. ಆಗ ವಾಜಪೇಯಿ ಹೇಳಿದ್ದು ಒಂದೇ ಮಾತು.“ಗೋಧ್ರಾ ಹತ್ಯಾಕಾಂಡವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ರಾಜನಾದವನು ಪ್ರಜೆಗಳನ್ನು ಸಮಾನವಾಗಿ ಕಾಣಬೇಕೇ ಹೊರತು ಜಾತಿ-ಧರ್ಮಗಳ ಆಧಾರದ ಮೇಲೆ ವರ್ಗೀಕರಣ ಮಾಡುವುದು ಸರಿಯಲ್ಲ. ಮೋದಿ ಅವರೇ, ಮೊದಲು ರಾಜಧರ್ಮ ಪಾಲನೆ ಮಾಡಿ. ಅದು ನಿಮ್ಮ ಕರ್ತವ್ಯ ಕೂಡ.” ಹೀಗೆ ಹೇಳಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಿದ್ದ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ರಕ್ಷಿಸಿದ್ದರು. ಅಂದು ಅಟಲ್ ಬಿಹಾರಿ ವಾಜಪೇಯಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.

ಮೋದಿಯಂತಹ ನಾಯಕ ಮಾತ್ರವಲ್ಲ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೀಗೆ ರಾಷ್ಟ್ರ ರಾಜಕೀಯದಿಂದ ಪ್ರಾದೇಶಿಕ ಮಟ್ಟದವರೆಗೂ ಹಲವು ನವ ನಾಯಕರ ಹುಟ್ಟಿಗೆ ಕಾರಣರಾದರು ವಾಜಪೇಯಿ. ಆ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯಾಗಿದ್ದ ವಾಜಪೇಯಿ ಇಂದಿಗೂ ಎಂದೆಂದಿಗೂ ಅಜರಾಮರ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago