ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ವರನನ್ನು ಹುಡುಕುತ್ತಿದ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಒಬ್ಬನನ್ನ ಜೆ.ಪಿ.ನಗರ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆ.ಪಿ ನಗರದ 41 ವರ್ಷದ ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಆರೋಪಿ ದೀಪಕ್ ಎಂಬಾತನನ್ನ ಬಂಧಿಸಲಾಗಿದೆ.
ಏನಿದು ಮ್ಯಾಟ್ರಿಮೋನಿ ಪ್ರಕರಣ?
ಮ್ಯಾಟ್ರಿಮೋನಿಯಲ್ಲಿ ವರನನ್ನ ಹುಡುಕುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ದೀಪಕ್, ಅವರಿಂದ ಹಣ ಪೀಕಿ ವಂಚಿಸುತ್ತಿದ್ದ. ಅದೇ ರೀತಿ ಮ್ಯಾಟ್ರಿಮೋನಿಯಲ್ಲಿ ವರನನ್ನ ಹುಡುಕುತ್ತಿದ್ದ 41 ವರ್ಷದ ಮಹಿಳೆಗೆ ವಂಚಿಸಿ ಕೊನೆಗೆ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ.
ಮಧುರೈನಲ್ಲಿ ತಾನೊಬ್ಬ ಬ್ಯಾಂಕ್ ಉದ್ಯೋಗಿ, ನಿನ್ನನ್ನು ಮದುವೆ ಆಗ್ತೀನಿ ಎಂದು ಹೇಳಿದ್ದ ದೀಪಕ್, ಕಾಲಕ್ರಮೇಣ ಪರಸ್ಪರ ಇಬ್ಬರು ಕರೆ ಮಾಡಿ ಮಾತನಾಡುತ್ತಿದ್ದರು. ಈ ಮಧ್ಯೆ ತನ್ನ ವ್ಯಾಲೆಟ್ ಕಳೆದುಕೊಂಡಿದ್ದು ಹಣ ಬೇಕಾಗಿದೆ ಎಂದು ಮಹಿಳೆಯಿಂದ 30 ಸಾವಿರ ರೂ. ಪಡೆದುಕೊಂಡಿದ್ದ. ಅಲ್ಲದೇ ತಾನು ಬಳಸುತ್ತಿರುವ ಸಿಮ್ ಬ್ಯಾಂಕ್‌ನವರದ್ದು, ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ಹೀಗಾಗಿ ಸಿಮ್ ಖರೀದಿಸುವಂತೆಯೂ ಬೇಡಿಕೆಯಿಟ್ಟಿದ್ದ. ಇದನ್ನು ನಂಬಿ ಮಹಿಳೆ ಸಿಮ್ ಖರೀದಿಸಿದ್ದರು. ಸಿಮ್ ತೆಗೆದುಕೊಳ್ಳಲು ಆಫೀಸ್ ಬಾಯ್ ಕಳುಹಿಸುವುದಾಗಿ ನಂಬಿಸಿ ತಾನೇ ಯುವತಿಯಿಂದ ಸಿಮ್ ಪಡೆದಿದ್ದ. ಸಿಮ್ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಸ್ನೇಹಿತರ ಬಳಿ ಈ ವಿಚಾರದ ಬಗ್ಗೆ ಹೇಳಿದಾಗ ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ತನ್ನ ಹೆಸರಿನಲ್ಲಿ ಖರೀದಿಸಿದ ಸಿಮ್ ಬ್ಲಾಕ್ ಮಾಡಿಸಿದ್ದರು. ಆನ್‌ಲೈನ್ ಮೂಲಕ ಪರಿಚಯಿಸಿಕೊಂಡು ತನ್ನನ್ನು ನಂಬಿಸಿ ವಂಚಿಸಿದ ಆರೋಪಿ ವಿರುದ್ಧ ನೀಡಿದ ದೂರಿನ ಮೇರೆಗೆ ವಂಚಕ ದೀಪಕ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ದಿನದಲ್ಲಿ 10 ಮೊಬೈಲ್ ನಂಬರ್ ಬದಲಾವಣೆ: ವಂಚಿಸುವ ಕಾಯಕವನ್ನು ಸಿದಿಸಿಕೊಂಡಿದ್ದ ದೀಪಕ್, ಬೇರೆ ಬೇರೆ ಹೆಸರಿನಲ್ಲಿ ಅನ್ಯರ ಫೋಟೊಗಳ ಪ್ರೊಫೈಲ್ ಬಳಸಿಕೊಳ್ಳುತ್ತಿದ್ದ. ಮಹಿಳೆಯರನ್ನು ಮೃದುವಾಗಿ ಮಾತನಾಡಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ. ನೇರವಾಗಿ ಭೇಟಿಯಾಗದೇ ಆನ್‌ಲೈನ್ ಮೂಲಕವೇ ಹಣ ಪಾವತಿಸಿಕೊಂಡು ವಂಚಿಸುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದಂತೆ ಬಂಧನ ಭೀತಿಯಿಂದ ಎರಡು ದಿನಗಳ ಅಂತರದಲ್ಲಿ 10 ಮೊಬೈಲ್ ನಂಬರ್ ಬದಲಾಯಿಸಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…