ಜಿಲ್ಲೆ

ಯಕ್ಷಗಾನದಲ್ಲಿ ರಾಹುಲ್ ‘ಡೈಲಾಗ್’………..;; ಕಲಾವಿದನ ಅಮಾನತು ವಾಪಸ್

ಮಂಗಳೂರು, – ರಾಹುಲ್ ಗಾಂಧಿಯವರು ಬಳಸಿದ್ದ ‘ಇವನರ್ವ ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಲಾವಿದನ ಅಮಾನತಿಗೆ ನೀಡಿದ್ದ ನೋಟಿಸನ್ನು ಚುನಾವಣಾ ಆಯೋಗ ಹಿಂಪಡೆದಿದೆ. ಕಟೀಲು ಮೇಳದ ಹಾಸ್ಯಕಲಾವಿದ ಪೂರ್ಣೇಶ್ ಆಚಾರ್ಯ ಅವರನ್ನು ಮೇಳದಿಂದ ವಜಾಗೊಳಿಸುವಂತೆ ನಿ ಡಿದ್ದ ಸೂಚನೆಯನ್ನು ಚುನಾವಣಾ ಆಯೋಗ ವಾಪಸ್ ಪಡೆದಿದೆ. ರಾಹುಲ್ ಗಾಂಧಿಯವರ ಇವನರ್ವ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿಕೊಂಡ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದ ಪೂರ್ಣೇಶ್ ಆಚಾರ್ಯ ಅವರನ್ನು ಕಟೀಲು ಮೇಳದಿಂದ ವಜಾ ಮಾಡಬೇಕು ಎಂದು ಉಲ್ಲೇಖಿಸಿ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಆದರೆ ಈ ವಿಚಾರದಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
ವೀಡಿಯೋದಲ್ಲಿ ಇರುವುದು ಕಾಸರಗೋಡು ಜಿಲ್ಲೆಯ ಮಾನ್ಯದಲ್ಲಿ ನಡೆದ ಯಕ್ಷಗಾನ ಪ್ರಸಂಗದ ತುಣುಕು. ಅದು ಕೇರಳಕ್ಕೆ ಸೇರಿಕೊಂಡಿರುವ ಕಾಸರಗೋಡು ಆಗಿರುವುದರಿಂದ ಅಲ್ಲಿ ಚುನಾವಣಾ ನೀತಿ ಸಂಹಿತೆಯೂ ಅನ್ವಯವಾಗುವುದಿಲ್ಲ. ವಾಸ್ತವವಾಗಿ ಏ. ೧ರಂದು ನಾನಿದ್ದ ಕಟೀಲು ಮೇಳದ ಪ್ರದರ್ಶನವು ಬೆಳ್ಳಾರೆಯ ಐವರ್ನಾಡಿನಲ್ಲಿತ್ತು ಎಂದು ಕಲಾವಿದ ಪೂರ್ಣೇಶ್ ಹೇಳಿದ್ದರು. ಜೊತೆಗೆ ಆಯೋಗಕ್ಕೆ ಪೂರಕ ದಾಖಲೆಗಳನ್ನೂ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸತ್ಯಾಸತ್ಯತೆ ಮನಗಂಡು ನೋಟಿಸ್‌ನ್ನು ವಾಪಸ್ ಪಡೆಯಲಾಗಿದೆ ಎಂದು ಮೂಡುಬಿದಿರೆ ಕ್ಷೇತ್ರದ ಚುನಾವಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ. ಇದರಿಂದಾಗಿ ಪೂರ್ಣೇಶ್ ಆಚಾರ್ಯರ ಮುಂದಿನ ಕಲಾ ಪ್ರದರ್ಶನಕ್ಕೆ ಯಾವುದೇ ಅಡಚಣೆ ಇಲ್ಲದಂತಾಗಿದೆ.

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

10 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

11 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

11 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

12 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

12 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

12 hours ago