ಬೆಂಗಳೂರು: 2006-07ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ಬಂದಿದ್ದ, ಉಚಿತ ಸೈಕಲ್ ಯೋಜನೆಯನ್ನು ಕುಮಾರಸ್ವಾಮಿ ಯವರ ದೋಸ್ತಿ ಸರಕಾರ ನಿಲ್ಲಿಸುವುದಕ್ಕೆ ಮುಂದಾಗಿದೆ.. ಎನ್ನುವ ಇಂತಹದ್ದೊಂದು ಅನುಮಾನ ಇದೀಗ ಮೂಡಿದೆ.
ಇದಕ್ಕೆ ಕಾರಣ ಸೈಕಲ್ ವಿತರಣೆಯಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ.ರಾಜ್ಯದ 5.14ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಸೈಕಲ್ಗಳು ಕಳಪೆಯಾಗಿವೆ ಅಂತ ಅಂತಾ ಆರೋಪಿಸಿದ್ದಾರೆ.
ತಪಾಸಣೆಗೆ ಬರುವ ಸೈಕಲ್ಗಳು ಉತ್ತಮ ಗುಣಮಟ್ಟದ್ದೇ ಆಗಿರುತ್ತದೆ, ಆದರೆ ನಂತರ ಕಳಪೆ ಗುಣಮಟ್ಟದ ಸೈಕಲ್ಗಳನ್ನ ವಿತರಿಸಲಾಗ್ತಿದೆ. ಇದಕ್ಕೆ ಜಿಲ್ಲಾ ಮಟ್ಟದ ಡಿಡಿಪಿಐ ಅಧಿಕಾರಿಗಳು ಕಾರಣ ಅಂತಾ ದೂರಿದ್ದಾರೆ. ಬಾಲಕಿಯರ ಸೈಕಲ್ಗೆ 3,900ರೂಪಾಯಿಯಂತೆ ಹಾಗೂ ಬಾಲಕರ ಸೈಕಲ್ಗೆ 3,600 ರೂಪಾಯಿ ವೆಚ್ಚದಲ್ಲಿ ಒಟ್ಟಾರೆ 185 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಸೈಕಲ್ ವಿತರಣೆ ಮಾಡ್ತಿದೆ. ಕಳಪೆ ಗುಣಮುಟ್ಟದ ಸೈಕಲ್ ವಿತರಣೆಯ ಕಾರಣ ಹಾಗೂ ಸರ್ಕಾರದ ಖಜಾನೆಗೆ ಹೊರೆ ಕಮ್ಮಿ ಮಾಡುವ ನಿಟ್ಟಿನಲ್ಲಿ, ಇಡೀ ಯೋಜನೆಯನ್ನ ಸ್ಥಗಿತಗೊಳಿಸುವ ಇಂಗಿತದಲ್ಲಿ ಸರ್ಕಾರ ಇದೆ ..
ಕೂಡಲೇ ಸಿಎಂ ಈಗಾಗಲೇ ಸಪ್ಲೈ ಆಗಿರುವ ಸೈಕಲ್ಗಳಿಗೆ ಪೇಮೆಂಟ್ ನೀಡದಂತೆ, ಹಾಗೂ ಕಳಪೆ ಗುಣಮಟ್ಟದ ಸೈಕಲ್ಗಳನ್ನ ವಿತರಣೆ ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಕಳಪೆ ಸೈಕಲ್ಗಳ ವಿತರಣೆ ಸಂಬಂಧ ಇಲಾಖಾವಾರು ತನಿಖೆಗೆ ಸೂಚಿಸಿದ್ದಾರೆ.
ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…
ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…
ವಿಧಾನ ಪರಿಷತ್ ಸಭಾ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್ ಕಲಾಪ…
ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…
ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…
ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…