Featured

ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ , ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ : ತೇಜಸ್ವಿ ಸೂರ್ಯ -Vishwanews24

ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ , ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ : ತೇಜಸ್ವಿ ಸೂರ್ಯ -Vishwanews24

ಬೆಳಗಾವಿ,: “ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ” ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕನ್ನಡಪರ ಹೋರಾಟಗಾರರಿಗೆ ಹೇಳಿದರು.

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ತೇಜಸ್ವಿ ಸೂರ್ಯ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿ. ಎಲ್ಲ ಜಾತಿ, ಎಲ್ಲ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಬಂದ್ ಕರೆಯುವಂತಹದ್ದು ಸರಿಯಲ್ಲ, ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಬಂದ್ ಕಲ್ಚರ್ ಈಗಾಗಲೇ ನಿಂತುಹೋಗಿದೆ. ಸರ್ಕಾರದ ಜೊತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿಕೊಂಡ ಸೂರ್ಯ, ಸರ್ಕಾರ ಮತ್ತು ಯಡಿಯೂರಪ್ಪ ನಿಮ್ಮ ಮಾತುಗಳನ್ನ ಕೇಳಲು ತಯಾರಿದೆ. ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

“ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಇಂದಿನ ಬಂದ್‌ಗೆ ಯಾವುದೇ ಫಲ ದೊರೆಯುವುದಿಲ್ಲ. ಮೊದಲು ಬಂದ್‌ ಮಾಡುವ ವಿಚಾರ ನಿಲ್ಲಬೇಕು” ಎಂದರು.

ಸರ್ಕಾರದೊಂದಿಗೆ ಕುಳಿತು ಚರ್ಚಿಸುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿದ ಅವರು, “ಸರ್ಕಾರ ಹಾಗೂ ಬಿಎಸ್‌ವೈ ಅವರು ನಿಮ್ಮ ಮಾತುಗಳನ್ನು ಕೇಳಲು ತಯಾರಿದ್ದಾರೆ” ಎಂದು ಹೇಳಿದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago