Featured

ಯಾರಿಗೆ ಟಿಕೆಟ್ ಕೊಟ್ಟರು ಅಭ್ಯರ್ಥಿ ಪರ ಕೆಲ್ಸ ಮಾಡ್ತೀನಿ : ಶೋಭಾ ಕರಂದ್ಲಾಜೆ – Vishwanews24

ಟಿಕೇಟ್ ತೆಗೆದುಕೊಳ್ಳಲು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ : ಶೋಭಾ ಕರಂದ್ಲಾಜೆ

ವಿಜಯಪುರ: ಈ ಬಾರಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮತದಾರರು ಮೋದಿಯವರನ್ನ ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತೇವೆ. ನಮ್ಮ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಆಧಾರದ ಮೇಲೆ ಓಟು ಕೇಳ್ತೇವೆ. ಯಾರಿಗೆ ಟಿಕೇಟ್ ಕೊಟ್ಟರು ಕೆಲಸ ಮಾಡ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಟಿಕೇಟ್ ವಿಚಾರದಲ್ಲಿ ಗೊಂದಲ‌ ಇರೋದು ನಿಜ. ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ‌. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ಕೊಟ್ಟರು ಗೆಲ್ಲಬಹುದು. ಹೀಗಾಗಿ ಬೇರೆಯವರು ಟಿಕೇಟ್ ಕೇಳ್ತಿದ್ದಾರೆ. ನನಗೆ ಎರಡು ಬಾರಿ ಟಿಕೇಟ್ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೇಟ್ ಕೇಳಬಾರದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಆರೋಪಿಸಿದ್ದಾರೆ.

ಬೇಸರ ಹೊರಹಾಕಿದ ಶೋಭಾ ಕರಂದ್ಲಾಜೆ. ಟಿಕೇಟ್ ತೆಗೆದುಕೊಳ್ಳಲು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ನನ್ನ ವಿರುದ್ಧ ಕಾರ್ಯಕರ್ತರು ಅಲ್ಲ ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ ಎಂದು ಹೇಳಿದ್ದಾರೆ.

ಟಿಕೇಟ್ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಸರ್ವೆ ಮಾಡಿ ಟಿಕೇಟ್ ಕೊಡ್ತಾರೆ. ಟಿಕೆಟ್ ಸಿಗಲಿ ಬಿಡಲಿ, ಮೋದಿ ಗೆಲ್ಲಿಸೋದು ನಮ್ಮ ಗುರಿ ಎಂದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಘೋಷಿತ ಅಭ್ಯರ್ಥಿ ಪರವಾಗಿ ಕೆಲ್ಸ ಮಾಡ್ತೀನಿ

ಘೋಷಿತ ಅಭ್ಯರ್ಥಿ ಪರವಾಗಿ ಕೆಲ್ಸ ಮಾಡ್ತೀನಿ. ಯುಪಿಎ ಸರ್ಕಾರ ಗೊಟಾಲಾ ಸರ್ಕಾರ ಎನ್ನುವ ಪರಿಸ್ಥಿತಿ. ವಿದೇಶಗಳಲ್ಲಿ ಪ್ರಧಾನಿಗಳಿಗೆ ಎದ್ದುನಿಂತು ಮರ್ಯಾದೆ ಕೊಡ್ತಿರಲಿಲ್ಲ, ನಮಗೆ ದುಃಖ ಎನಿಸುತ್ತಿತ್ತು. ದೇಶದ ಗಡಿ, ಆಂತರಿಕ ಭದ್ರತೆ, ಸ್ವಾವಲಂಬಿ ಸೈನ್ಯವಾಗಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದಾರೆ. ರಾಗಿ, ಜೋಳಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಕೊಡಿಸಿದ್ದು ಮೋದಿ. ಪ್ರಪಂಚದ ಯಾವುದೇ ಮೂಲೆಗೆ ಹೋದರು ಮರ್ಯಾದೆ ಸಿಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Vishwa News 24

Recent Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

20 minutes ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

1 day ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

1 day ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

1 day ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

1 day ago

ಉಡುಪಿ: ಎ.10ರಂದು ನೇರ ಸಂದರ್ಶನ – vishwanews24

ಉಡುಪಿ: ಎ.10ರಂದು ನೇರ ಸಂದರ್ಶನ ಉಡುಪಿ: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟವರ್ಸ್‌ನ ಹರ್ಷ ರೀಟೇಲ್…

1 day ago