ಖ್ಯಾತ ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಕುರಿತು ನಿನ್ನೆ (ನ.19) ಅಧಿಕೃತವಾಗಿ ಸಾಯಿರಾ ಖಚಿತಪಡಿಸಿದ್ದರು. ಇದೀಗ ಎ.ಆರ್. ರೆಹಮಾನ್ ಅವರು ವಿಚ್ಛೇದನ ಕುರಿತು ಮೌನ ಮುರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎ.ಆರ್. ರೆಹಮಾನ್ ಪ್ರತಿಕ್ರಿಯಿಸಿ, ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ ಎಂದಿದ್ದಾರೆ.
ಅಂದಹಾಗೆ, ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿವೆ ಎಂದು ಸಾಯಿರಾ ಬಾನು ಅವರು ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಖಚಿತಪಡಿಸಿದ್ದರು.
ಎ.ಆರ್.ರೆಹಮಾನ್ ಅವರು 1995ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…