ಮಂಗಳೂರು: “ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಮುಸ್ಲಿಮರು ಸಹಿತ ಯಾರೂ ಭಯಪಡಬೇಡಿ. ನೀವೆಲ್ಲರೂ ಭಾರತದ ನಾಗರಿಕರಾಗಿಯೇ ಇರುತ್ತೀರಿ. ಈ ಕಾಯ್ದೆಯಿಂದ ನಿಮಗೆ ಯಾವತ್ತೂ ತೊಂದರೆ ಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಸಮಿತಿಯು ಸಿಎಎ ಪರ ಜನ ಜಾಗೃತಿ ಮೂಡಿಸಲು ಮಂಗಳೂರಿನ ಕೂಳೂರು ಬಳಿಯ ಗೋಲ್ಡ್‌ಫಿಂಚ್ ಮೈದಾನದಲ್ಲಿ ಸೋಮವಾರ ಆಯೋಜಿ ಸಿದ್ದ ಬೃಹತ್ ಸಮಾವೇಶದಲ್ಲಿ ರಾಜನಾಥ ಸಿಂಗ್ ದಿಕ್ಸೂಚಿ ಭಾಷಣ ಮಾಡಿದರು. ಕಾಂಗ್ರೆಸ್‌ನವರು ಸಿಎಎ ಮುಂದಿಟ್ಟುಕೊಂಡು ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆ ಮೂಲಕ ಅಶಾಂತಿ ಸೃಷ್ಟಿಸುವ ಪ್ರಯತ್ನವಿದು. ಆದರೆ ಈ ದೇಶದ ಮುಸ್ಲಿಮರು ಕಾಂಗ್ರೆಸ್‌ನವರ ಈ ರೀತಿಯ ಯತ್ನಕ್ಕೆ ಕಿವಿಗೊಡಬಾರದು. ಮುಸ್ಲಿಮರ ಜತೆಗೆ ಬಿಜೆಪಿಯಿದ್ದು, ಸಿಎಎ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದರು.
ಸರ್ವಧರ್ಮ ಸಮಭಾವ ಭಾರತದ ಸಂಸ್ಕೃತಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಪ್ರಧಾನಿ ಮೋದಿ ಅವರ ಆಡಳಿತ ಧ್ಯೇಯ. ಸರಕಾರದ ಯಾವುದೇ ಸೌಲಭ್ಯಗಳನ್ನು ಧರ್ಮದ ಆಧಾರದಲ್ಲಿ ನೀಡಿಲ್ಲ. ಸಿಎಎ ಕಾನೂನು ಯಾವುದೇ ಸಮುದಾಯ, ಧರ್ಮಕ್ಕೆ ಹೊಡೆತ ನೀಡಲು ಮಾಡಿದ್ದಲ್ಲ. ಬಿಜೆಪಿ ಕಾರ್ಯ ಕರ್ತರು ಇದನ್ನು ಮುಸ್ಲಿಂ ಸಹೋದರರಿಗೆ ಮನವರಿಕೆ ಮಾಡಬೇಕು ಎಂದವರು ಕರೆ ನೀಡಿದರು. ಭಾರತವು ವಿಭಜನೆಯಾದಾಗ ಪಾಕಿಸ್ಥಾನದಲ್ಲಿ ಧಾರ್ಮಿಕ ಕಾರಣಗಳಿಂದ ದೌರ್ಜನ್ಯಕ್ಕೊಳಗಾದವರು ಭಾರತಕ್ಕೆ ಬರಲು ಬಯಸಿದರೆ ಅದಕ್ಕೆ ಭಾರತ ಸ್ಪಂದಿಸಬೇಕೆಂದು ಗಾಂಧೀಜಿಯವರು ನೆಹರೂರನ್ನು ಕೋರಿದ್ದರು.
ಅಂಥವರಿಗೆ ಪೌರತ್ವ ನೀಡಬೇಕು ಎಂದಿದ್ದರು. ಅಂದು ಗಾಂಧೀಜಿ ಬಯಸಿದ್ದನ್ನು ಮೋದಿ ಸರಕಾರ ಈಗ ಸಾಕಾರ ಗೊಳಿಸಿದೆ. ಸಿಎಎ ಜಾರಿಗೆ ತಂದು ಭಾರತ ತನ್ನ ನೈತಿಕ ಕರ್ತವ್ಯವನ್ನು ಪೂರೈಸಿದೆ ಎಂದು ರಕ್ಷಣಾ ಸಚಿವರು ನುಡಿದರು.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…