Featured

ಯಾವುದೇ ವ್ಯಕ್ತಿ ಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ಎಂದಿಗೂ ನಡೆಯಬಾರದು. ವಿಚಾರಗಳ ವಿನಿಮಯದ ಮೇಲೆ ಚುನಾವಣೆ ನಡೆಯಬೇಕು : ಚಿತ್ರ ನಟ ಉಪೇಂದ್ರ -Vishwanews24

ಮೈಸೂರು, : ಯಾವುದೇ ವ್ಯಕ್ತಿ ಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ಎಂದಿಗೂ ನಡೆಯಬಾರದು. ವಿಚಾರಗಳ ವಿನಿಮಯದ ಮೇಲೆ ಚುನಾವಣೆ ನಡೆಯಬೇಕು ಎಂದು ಚಿತ್ರ ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಬಂದು ದೇಶವನ್ನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಎಂದರೆ ನಾವು ಓಟು ಹಾಕುತ್ತೇವೆ. ಯಾವ ರೀತಿ ಮಾಡುತ್ತೀರ ಎಂದು ಮರುಪ್ರಶ್ನೆಯನ್ನೂ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ, ವಿಚಾರಗಳನ್ನು ವಿಮರ್ಶಿಸಿ ಚುನಾವಣೆ ನಡೆಸುವ ಕಾಲ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

37 ಸ್ಥಾನ ಪಡೆದ ಪಕ್ಷ ಮೈತ್ರಿ ಮಾಡಿಕೊಂಡು ಸಂವಿಧಾನ ಬದ್ಧವಾಗಿಯೇ ಬಹುಮತ ಸ್ಪಷ್ಟಪಡಿಸಿ ಅಧಿಕಾರದ ಗದ್ದುಗೆ ಏರಿದೆ. ಇದರಲ್ಲಿ ತಪ್ಪೇನೂ ಇಲ್ಲ. ಕೆಲಸಗಳ ಬಗ್ಗೆ ಜನ ಹಾಗೂ ಮಾಧ್ಯಮಗಳು ಮಾತನಾಡಬೇಕು ಎಂದರು.

ಈ ಹಿಂದಿನ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳ ಕೆಲಸಗಳು ತೃಪ್ತಿ ನೀಡದ ಹಿನ್ನೆಲೆಯಲ್ಲಿ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ. ಸರ್ಕಾರ ಬೀಳಲಿದೆ ಎಂದು ಹೇಳುವುದಕ್ಕೆ ನಾನು ಜ್ಯೋತಿಷ್ಯ ಓದಿಲ್ಲ. ಸುಮಲತಾ ಅವರಿಗೆ ಒಂದು ಸಿದ್ಧಾಂತವಿದೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದರು. ಆದ್ದರಿಂದ ನನಗೂ ಅವರಿಗೂ ಹೋಲಿಕೆ ಮಾಡಬಾರದು. ವೈಯಕ್ತಿಕ ಧ್ಯೇಯೋದ್ದೇಶಗಳನ್ನು ಈಗಾಗಲೇ ನನ್ನ ಸಿನಿಮಾಗಳಲ್ಲಿ ತೋರಿಸಿದ್ದೇನೆ.ಎಂದರು.

Vishwa News 24

Recent Posts

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು – vishwanews24

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಸ್ಕೂಟಿಯೊಂದು…

7 minutes ago

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್‌ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…

14 minutes ago

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ – vishwanews24

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…

36 minutes ago

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

19 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

19 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

19 hours ago