ಲಿಂಗಸುಗೂರು: ರಷ್ಯಾ ಉಕ್ರೇನ್ ಯುದ್ಧಭೂಮಿಯಲ್ಲಿ ಪ್ರಯಾಣಿಸಿದ ಕ್ಷಣಗಳನ್ನೆ ನೆನೆದರೆ ಭಯವಾಗುತ್ತಿದೆ. ಆದರೆ, ಯುದ್ಧಭೂಮಿಯಲ್ಲೂ ಭಾರತ ರಾಷ್ಟ್ರಧ್ವಜ ಹಿಡಿದು ಬಂದಾಗ ಅಲ್ಲಿನ ಸೈನಿಕರು ಬೆಂಬಲಿಸಿ, ನಮಗೆ ದೇಶಕ್ಕೆ ಮರಳಲು ಸಹಾಯ ಮಾಡಿದ್ದು ಖುಷಿ ಮತ್ತು ಹೆಮ್ಮೆಯ ಸಂಗತಿಯಾಗಿದೆ..
ಇದು ಉಕ್ರೇನ್‌ನ ಖಾರ್ಕಿನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಕುಮಾರ ಹೂಗಾರ ಮಾತು.
ಉಕ್ರೇನ್‌ನಿಂದ ತಾಲ್ಲೂಕಿನ ಹೊನ್ನಳ್ಳಿ ಗ್ರಾಮಕ್ಕೆಆಗಮಿಸಿದ ನಂತರ ತಮ್ಮ ಅನುಭವಗಳನ್ನು ಹಂಚಿಕೊಂಡರು.
ರಷ್ಯಾ– ಉಕ್ರೇನ್ ಯುದ್ಧ ಆರಂಭಗೊಳ‍್ಳುವ ಮಾಹಿತಿಗಳು ವಿದೇಶಾಂಗ ಇಲಾಖೆಯಿಂದ ಬಂದಿದ್ದವು. ಆದರೆ, ಮೂರು ಮತ್ತು ಆರನೇ ವರ್ಷದ ಎಲಿಜಿಬಿಲಿಟಿ ಪರೀಕ್ಷೆಗಳು ಇದ್ದುದರಿಂದ ತಾಯ್ನಾಡಿಗೆ ಬರಲು ಮೀನಾಮೇಷ ಮಾಡಿದ್ದೆವು. ವಿಶ್ವವಿದ್ಯಾಲಯದ ಉಪನ್ಯಾಸಕರು ಕೂಡ ತರಗತಿಗಳು ನಡೆಸುವುದಾಗಿ ಹೇಳಿದ್ದರಿಂದ ಯುದ್ಧಭೂಮಿಯಲ್ಲಿ ಸಿಲುಕೊಳ್ಳುವಂತಾಗಿತ್ತು.
ಇದನ್ನೂ ಓದಿ :
ಒಂದು ವಾರ ತಾವು ವಾಸಿಸುವ ಮನೆಗಳನ್ನು ತೊರೆದು ಬಂಕರ್‌ಗಳಲ್ಲಿ ನೆಲೆಸಿದ್ದೆವು. ನಿತ್ಯ ವೈಮಾನಿಕ ದಾಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್ ದಾಳಿ, ಸಾವು ನೋವಿನ ಮಾಹಿತಿಗಳಿಂದ ಸಾವು ನಿಶ್ಚಿತ ಎಂದು ಅಂದುಕೊಂಡಿದ್ದೆವು. ಆದರೆ, ಕೇಂದ್ರ ಸರ್ಕಾರದ ಮುನ್ಸೂಚನೆ ಆಧರಿಸಿ ಭಾರತದ ರಾಷ್ಟ್ರಧ್ವಜ ಹಿಡಿದು ಜೀವ ಭಯದಲ್ಲಿಯೆ ಪ್ರಯಾಣ ಆರಂಭಿಸಿದ್ದೇವು.
ಖಾರ್ಕಿವ್ ರೈಲ್ವೆ ನಿಲ್ದಾಣಕ್ಕೆ 10 ಕಿ.ಮೀ ನಡೆದುಕೊಂಡು ಹೋಗುವಾಗ, ಅಲ್ಲಿಂದ ರೈಲ್ವೆ ಮೂಲಕ ಪ್ರಯಾಣಿಸುವ ಪ್ರತಿ ಕ್ಷಣವು ಸಾವಿನ ದವಡೆಯಿಂದ ಪಾರಾದ ಅನುಭವ. ಖಾರ್ಕಿವ್‌ನಿಂದ ಲಿವಿವ್ ತಲುಪಿದೆವು. ಅಲ್ಲಿಂದ ಟ್ಯಾಕ್ಸಿ ವಾಹನಗಳ ಮೂಲಕ ಪೋಲೆಂಡ್ ಗಡಿ ಪ್ರದೇಶಕ್ಕೆ ಬಂದು ತಲುಪಿದೆವು.
ಪ್ರಯಾಣದುದ್ದಕ್ಕೂ ಅಲ್ಲಲ್ಲಿ ಸೈನಿಕರ ಗುಂಡಿನ ದಾಳಿ, ವೈಮಾನಿಕ ದಾಳಿ, ಬಾಂಬ್‍ಗಳ ಸ್ಪೋಟ್‍ಗಳಿಂದ ಭಯಭೀತರಾಗಿದ್ದ ಸ್ನೇಹಿತರು ಭಾರತದ ಧ್ವಜ ತೋರಿಸುತ್ತ ರಕ್ಷಣೆ ಕೋರಿದ್ದು ಸ್ಮರಣೀಯ. ಯುದ್ಧಭೂಮಿಯಲ್ಲಿ ರಾಷ್ಟ್ರಧ್ವಜಕ್ಕೆ ಸಿಕ್ಕ ಗೌರವ, ದೇಶದ ಘನತೆಗೆ ಸಾಕ್ಷಿಯಾಗಿದೆ. ವಿದೇಶಾಂಗ ಇಲಾಖೆ ಸೂಕ್ತ ರಕ್ಷಣೆ ಮೂಲಕ ಸ್ವದೇಶಕ್ಕೆ ಕರೆತಂದಿದೆ ಎಂದು ಅವರು ಶ್ಲಾಘಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಕ್ರೇನ್‍ದಲ್ಲಿರುವ ಭಾರತೀಯರನ್ನು ಕರೆತರಲು ನಡೆಸುತ್ತಿರುವ ಪ್ರಯತ್ನ ಮೆಚ್ಚುವಂತಹದ್ದು. ಪೋಲೆಂಡ್‌ನಿಂದ ಮನೆ ತಲುಪುವವರೆಗೆ ಸರ್ಕಾರವೇ ಖರ್ಚು ಭರಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿಳಿಯಾಗಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದು ವಿದ್ಯಾರ್ಥಿ ಪ್ರಜ್ವಲ್‍ಕುಮಾರ ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ :
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…