ಲಾಹೋರ್: ಕಾಶ್ಮೀರ ಜನತೆಗಾಗಿ ಎಲ್ಲದಕ್ಕೂ ಸಿದ್ಧ ಎನ್ನುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಚ್ಚರಿ ಮಾತುಗಳಾಡಿದ್ದಾರೆ. ಅದೇನಂದ್ರೆ ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಸುವುದಿಲ್ಲವಂತೆ ಮತ್ತು ಭಾರತದೊಂದಿಗೆ ತಾನಾಗಿಯೇ ಮೊದಲು ಯುದ್ದ ಆರಂಭಿಸುವುದಿಲ್ಲವಂತೆ.
“ಭಾರತ ಮತ್ತು ಪಾಕಿಸ್ತಾನ ಎರಡೂ ಅಣ್ವಸ್ತ್ರ ರಾಷ್ಟ್ರಗಳಾಗಿದ್ದು, ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಲ್ಲಿ ಜಗತ್ತು ತೀವ್ರ ಅಪಾಯ ಎದುರಿಸಲಿದೆ. ನಾವು ಎಂದಿಗೂ ಮೊದಲು ಅಣ್ವಸ್ತ್ರಗಳನ್ನು ಬಳಸುವುದಿಲ್ಲ” ಎಂದು ಸೋಮವಾರ ಲಾಹೋರ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸಿಖ್ ಸಮಾವೇಶದಲ್ಲಿ ಹೇಳಿದ್ದಾರೆ.
ಪಾಕಿಸ್ತಾನವು ಭಾರತದ ಮೇಲೆ ಮೊದಲು ನ್ಯೂಕ್ಲಿಯರ್ ಬಾಂಬ್ ಹಾಕಲ್ಲ. ಯುದ್ಧ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಪಾಕಿಸ್ತಾನ ಹಲವು ಸಣ್ಣ ಅಣುಬಾಂಬ್‌ಗಳನ್ನು ಹೊಂದಿದೆ. ಆದ್ರೆ, ಅದನ್ನು ಭಾರತದ ಮೇಲೆ ನಾವು ಬಳಸಲ್ಲ ಅಂತಾ ಹೇಳಿದ್ದಾರೆ. ಎರಡು ದೇಶಗಳು ನ್ಯೂಕ್ಲಿಯರ್ ಪವರ್ ಹೊಂದಿವೆ. ಇದರಿಂದಾಗಿ ವಿಶ್ವವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಅಂತಾ ಶಾಂತಿಯ ಮಾತನ್ನಾಡಿದ್ದಾರೆ.
ಸಮಸ್ಯೆಗಳು ಯುದ್ಧದಿಂದ ಪರಿಹಾರವಾಗುತ್ತವೆ ಎಂಬುದನ್ನು ನಂಬುವುದಿಲ್ಲ. ಯುದ್ದದಿಂದ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದವರೆಲ್ಲರೂ ಗೆಲುವಿನಲ್ಲೂ ಸೋತಿದ್ದಾರೆ. ಯುದ್ದದಿಂದಾದ ನಷ್ಟದಿಂದ ಚೇತರಿಸಿಕೊಳ್ಳಲು ವರ್ಷಗಳೇ ಹಿಡಿಯುತ್ತವೆ ಎನ್ನುವ ಮೂಲಕ ತಾವು ಭಾರತದೊಂದಿಗೆ ಯುದ್ಧಕ್ಕೆ ಸಿದ್ಧವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯಗೊಳಿಸಲು ಹೋಗಿ ತೀವ್ರ ಮುಖಭಂಗ ಎದುರಿಸಿದ ಪಾಕ್, ಜಾಗತಿಕ ರಾಷ್ಟ್ರಗಳು ತಮ್ಮ ಪರವಾಗಿಲ್ಲ ಎಂಬುದನ್ನು ಅರಿತು ಇದೀಗ ಶಾಂತಿ ಮಂತ್ರ ಪಠಿಸುತ್ತಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…