Featured

ರಂಜಾನ್‍ಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ -Vishwanews24

ರಂಜಾನ್‍ಗೆ ಸರ್ಕಾರದಿಂದ ಮಾರ್ಗಸೂಚಿ  ಪ್ರಕಟ – Vishwanews24

ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ಓಪನ್ ..

ಇಫ್ತಾರ್ ಕೂಟ ನಡೆಸುವಂತಿಲ್ಲ..

ಕಂಟೈನ್ಮೆಂಟ್ ವಲಯದಲ್ಲಿರುವ ಮಸೀದಿಗಳು ಬಂದ್..

ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ  ರಂಜಾನ್ ಆಚರಣೆಗೂ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇಫ್ತಾರ್ ಕೂಟ ನಡೆಸುವಂತಿಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ತೆರೆಯುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಿದೆ.

ರಂಜಾನ್ ಮಾಸ ಆರಂಭ ಹಿನ್ನೆಲೆ ತಿಂಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕಂಟೈನ್ಮೆಂಟ್ ವಲಯದಲ್ಲಿರುವ ಮಸೀದಿಗಳು ಬಂದ್ ಮಾಡುವಂತೆ ಸೂಚಿಸಿದ್ದು, ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಮಸೀದಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

24 ಗಂಟೆ ಕಾಲ ಪ್ರಚಾರ ನಿಷೇಧ ; ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಮತಾ ಬ್ಯಾನರ್ಜಿ ಧರಣಿ -Vishwanews24

ಸರ್ಕಾರ ಸೂಚಿಸಿದ ಮಾರ್ಗಸೂಚಿಗಳು: ಕಂಟೆಂಟ್ ರೋನ್ ಗಳಲ್ಲಿರುವ ಮಸೀದಿಗಳನ್ನು ಮುಚ್ಚಲಾಗುವುದು

60 ವರ್ಷ ಮೇಲ್ಪಟ್ಟವರು,ಅನಾರೋಗ್ಯದಿಂದಿರುವವರು, ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮನೆಯಲ್ಲೇ ಇರುವುದುನಮಾಝಮ್ ಗೆ ನಿಲ್ಲುವ ಸಾಲುಗಳ ಮಧ್ಯೆ 6 ಅಡಿ ಅಂತರ ಪಾಲಿಸುವುದು

ಅವಶ್ಯಕತೆಯಿದ್ದರೆ ಎರಡು ಇಮಾಮ್ ಜಮಾಅತ್ ನಡೆಸುವುದು

ಮಸೀದಿಯು ಭರ್ತಿಯಾಗಿದ್ದರೆ ಎರಡನೇ ಹಂತದ ಜಮಾಅತ್ ವರೆಗೆ ಮಸೀದಿಯ ಹೊರಗಡೆ ಕಾಯುವುದು (ಸುರಕ್ಷಿತ ಅಂತರ ಪಾಲನೆಯೊಂದಿಗೆ)

ಗ್ರಂಥಾಲಯ, ಮದ್ರಸಾ ಮತ್ತು ಧಾರ್ಮಿಕ ತರಗತಿಗಳನ್ನು ಮಸೀದಿಯೊಳಗೆ ನಡೆಸಬಾರದು.

 ಸಾಮೂಹಿಕವಾಗಿ ಧಾರ್ಮಿಕ ಗ್ರಂಥ ಪಠಣ ಮತ್ತು ಮಸೀದಿಯೊಳಗೆ ಸಾಮೂಹಿಕ ಚರ್ಚೆ ನಡೆಸಬಾರದು

ಮನೆಯಲ್ಲೇ ಉಪವಾಸ ಮುರಿದು ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರುವುದು, ಯಾವುದೇ ಕಾರಣಕ್ಕೂ ಮಸೀದಿಗೆ ಅಹಾರವನ್ನು ತರಬಾರದು

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಾವೀಹ್ ನಮಾಝ್ ನಡೆಸಬೇಕು. ಅಗತ್ಯವಿದ್ದರೆ ಎರಡು ಜಮಾಅತ್ ನಡೆಸುವುದು

ಸಾಮಾನ್ಯವಾಗಿ ಉಪಯೋಗಿಸುವ ಟವೆಲ್, ಟೋಪಿಗಳನ್ನು ಮಸೀದಿಯೊಳಗೆ ಬಳಸಬಾರದು

ನಮಾಝಲ್ ಗೆ ಬಂದವರು ಪರಸ್ಪರ ಹಸ್ತಲಾಘವ ಅಥವಾ ಅಪ್ಪಿಕೊಳ್ಳಬಾರದು.

ತರಾವೀಹ್ ನಮಾಝ್ ಗೆ ಮನೆಯಲ್ಲೇ ವುಝ(ಅಂಗಸ್ನಾನ) ನಿರ್ವಹಿಸಿ ಮಸೀದಿಗೆ ಬರಬೇಕು

ಸುನ್ನತ್ ನಮಾಝ್ ಮನೆಯಲ್ಲೇ ನಿರ್ವಹಿಸುವುದು

ನಮಾಝಮ್ ಗೆ ಬೇಕಾಗುವ ಮುಸಲ್ಲಾ (ಕಾರ್ಪೆಟ್) ತರುವುದು

ಮಾಸ್ಕ್ ಧರಿಸುವುದು ಕಡ್ಡಾಯ

ಜನದಟ್ಟನೆಯನ್ನು ನಿಯಂತ್ರಿಸುವುದು

ಸೀನುವಾಗ ಸಮರ್ಪಕ ಕರವಸ್ತ್ರಗಳನ್ನು ಬಳಸುವುದು 

ಮಸೀದಿಗೆ ಪ್ರವೇಶಿಸುವಾಗೆ ಥರ್ಮಲ್ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡುವುದು. ಶೀತ, ಕಫ, ಗಂಟಲು ನೋವು ಮತ್ತು ಉಸಿರಾಟ ತೊಂದರೆಗಳು
ಕಂಡು ಬಂದರೆ ಮಸೀದಿಗೆ ಪ್ರವೇಶಿಸಲು ಅನುಮತಿ ನೀಡದಿರುವುದು

ಕೊರೋನ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಪ್ರದರ್ಶಿಸಬೇಕು, ಆಡಿಯೋ ಮತ್ತು ವೀಡಿಯೋ ಕ್ಲಿಪ್ ಗಳನ್ನು ಪ್ರಸಾರ ಮಾಡಬೇಕು.

ಕೈ ತೊಳೆಯಲು ಸೋಪ್ ಮತ್ತು ದ್ರಾವಕಗಳ ವ್ಯವಸ್ಥೆ ಮಾಡುವುದು

ಎರಡು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡುವುದು

ಆರೋಗ್ಯ ಸೇತು ಅಪ್ಲಿಕೇಶನ್ ಬಳಸುವುದು ಉತ್ತಮ

ನಮಾಝ್ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕಗಳನ್ನು ಸಿಂಪಡಿಸುವುದು

ಎಲ್ಲಾ ನಮಾಝ್ ಗಳನ್ನು ಸರಿಯಾದ ಸಮಯಕ್ಕೆ ಮುಗಿಸುವುದು

ಬಿಜೆಪಿ ಪರವಾಗಿ ಜನಾಭಿಪ್ರಾಯ ಇಲ್ಲ, ಜನ ವಿರೋಧಿಗಳಾಗಿದ್ದಾರೆ : ಸಿದ್ದರಾಮಯ್ಯ -Vishwanews24

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

8 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

17 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

17 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

17 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

18 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago