ಉಡುಪಿ: ಯುವತಿಯನ್ನು ಚುಡಾಯಿಸಿದವನಿಗೆ ಗ್ರಾಮದ ಯುವತಿಯರು ಹಾಗೂ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಎಲ್‍ಐಸಿ ಕಾಲೋನಿಯ ಜಾವೇದ್ ಮಹಿಳೆಯರಿಂದ ಗೂಸಾ ತಿಂದ ವ್ಯಕ್ತಿ. ಜಾವೇದ್ ಪ್ರತಿ ದಿನ ಬೆಳಗ್ಗೆ ದಾರಿಯಲ್ಲಿ ಹೋಗುವ ಮಹಿಳೆಯರಿಗೆ ಚುಡಾಯಿಸುತ್ತಿದ್ದನು ಹಾಗೂ ಸೀಟಿ ಹೊಡೆದು ಕಣ್ಸನ್ನೆ ಮಾಡುತ್ತಿದ್ದನು. ಕೆಲವರ ಬಳಿ ಫೋನ್ ನಂಬರ್ ಕೂಡ ಕೇಳುತ್ತಿದ್ದ.
ಜಾವೇದ್‍ನನ್ನು ಕೆಲವು ತಿಂಗಳಿನಿಂದ ಸಹಿಸಿಕೊಂಡಿದ್ದ ಸ್ಥಳೀಯರು ಇಂದು ಸಿಡಿದೆದ್ದಿದ್ದರು. ಜಾವೇದ್‍ನ ಕಾಟ ಜಾಸ್ತಿಯಾದಾಗ ಬೆಳಗ್ಗೆ ದಾರಿಯಲ್ಲಿ ಹೋಗುವ ಯುವತಿಯರು, ಅವರ ತಾಯಂದಿರು ಸೇರಿ ಜಾವೇದ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಾವೇದ್‍ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಎರಡೇಟು ಕೊಟ್ಟಿದ್ದಾರೆ.
ಸದ್ಯ ಮಹಿಳೆಯರಿಂದ ಪೆಟ್ಟು ತಿಂದ ಜಾವೇದ್ ಕ್ಷಮೆ ಕೇಳಿದ್ದಾನೆ. ಇನ್ನು ಚುಡಾಯಿಸಲ್ಲ, ಯಾರ ಸುದ್ದಿಗೂ ಬರಲ್ಲ ಅಂತ ಕೈಮುಗಿದು ಅಂಗಲಾಚಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆಯರು ಹಾಗೂ ಯುವತಿಯರು ಹೊಯ್ಸಳ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜಾವೆದ್ ನನ್ನು ಒಪ್ಪಿಸಿದ್ದಾರೆ.
ಹೊಯ್ಸಳ ವಾಹನದಲ್ಲಿ ಕುಂದಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಜಾವೇದ್‍ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾವೇದ್ ಮನೆ ಕೂಡಾ ಎಲ್‍ಐಸಿ ರಸ್ತೆಯಲ್ಲೇ ಇದೆ. ಪರಿಚಿತರಿಗೇ ಈತ ಕಾಟ ಕೊಡುತ್ತಾನೆ ಎಂಬುದು ಸ್ಥಳೀಯರ ಆರೋಪಿಸಿದ್ದಾರೆ.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…