ಬೀದರ್: ‘ರಾಜ್ಯ ಕಾಂಗ್ರೆಸ್ ಸದ್ಯ ಬರ್ಬಾದ್ ಆಗಿದೆ. ಯಾವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ, ಎಲ್ಲಾ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುತ್ತಿವೆ, ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಬಳಿ ಹಣವಿಲ್ಲ’ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮತದಾರರ ಹೆಸರು ಡಿಲೀಟ್, ರಾಹುಲ್ ಗಾಂಧಿ ಆರೋಪದ ಬಗ್ಗೆ ಮಾತನಾಡಿದ ಅವರು, ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯಜ್ಞಾನ ಇಲ್ಲ. ಕಳ್ಳತನ ಮಾಡುವವರಿಗೆ ಕಳ್ಳತನದ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ ಬಗ್ಗೆ ಎಲ್ಲ ತಿಳಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಲೂರು ಕಾಂಗ್ರೆಸ್ ಶಾಸಕರನ್ನ ಕೋರ್ಟ್ ಅಸಿಂಧೂಗೊಳಿಸಿದ್ದು ಯಾಕೆ? ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮೋಸ ಮಾಡಿದವರು ಯಾರು? ಕಾಂಗ್ರೆಸ್ ಮೋಸ ಮಾಡಿ 135 ಸ್ಥಾನ ಗೆದ್ದವರು. ಆಳಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿನೇ ಗೆದ್ದಿದ್ದು. ಸಿದ್ದರಾಮಯ್ಯರ ಕ್ಷೇತ್ರದಲ್ಲೂ ಮನೆ ನಂ. ಸೊನ್ನೆ ಅಂತಲೇ ತೋರಿಸುತ್ತದೆ. 20-25ರ ಮತದಾರರ ಪಟ್ಟಿ ನೋಡಿದ್ರೆ ಈಗಲೂ ಸೊನ್ನೆ ಅಂತಲೇ ಮನೆ ನಂ. ಇದೆ. ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಅಂತ ಮಾಡಿರುತ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲ, ಡಾಟಾ ಆಪರೇಟರ್ ಸರಿಯಾಗಿ ಫೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದ್ರೆ ತೊಗೊಳಲ್ಲ. ಆಗ ಸೊನ್ನೆ ಹಾಕ್ತಾರೆ ಎಂದು ಹೇಳಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…