ಚಿಕ್ಕಮಗಳೂರು: ರಾಜೀನಾಮೆ ಕೊಡಿ ನಾನಿದ್ದೇನೆ ಎಂದು ಸಿದ್ದಾರ್ಥ್ ಅಣ್ಣ ಹೇಳಿದ್ದರು. ನನಗೆ ಧೈರ್ಯ ತುಂಬಿದ್ದರು. ನಾನು ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಡುವ ಬಗ್ಗೆ ಇಬ್ಬರೂ ಸೇರಿ ನಿರ್ಧಾರ ಮಾಡಿದ್ದೆವು. ಪದೋನ್ನತಿ ಹೊಂದಿ ಡಿಐಜಿ, ಐಜಿ ಆಗಿ ಎಸಿ ಚೇಂಬರ್ ನಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇಲ್ಲ ಎಂದಾಗ ಸಿದ್ದಾರ್ಥ್ ಅಣ್ಣ ಈ ಸಲಗೆ ಕೊಟ್ಟಿದ್ದರು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ದಿ. ಸಿದ್ದಾರ್ಥ್ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಬಂದಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜೀನಾಮೆ ಬಗ್ಗೆ ಸಿದ್ದಾರ್ಥ್ ಅಣ್ಣನನೊಂದಿಗೆ ಮೂರುವರೆ ಗಂಟೆ ಮಾತನಾಡಿದ್ದೆ ಎಂದರು.
ಇಬ್ಬರು ಬಂದು ಕಾರ್ ಡೋರ್ ತೆರೆಯುತ್ತಾರೆ. ನಾಲ್ವರು ಬಂದು ಸೆಲ್ಯೂಟ್ ಮಾಡ್ತಾರೆ. ಆಮೇಲೆ ಪ್ರಮೋಷನ್ ಇದೆಲ್ಲ ನನಗೆ ಇಷ್ಟ ಇಲ್ಲ. ಹಳ್ಳಿಗೆ ಹೋಗಬೇಕು. ಕೃಷಿ ಮಾಡಬೇಕು. ಸಾಮಾನ್ಯನಂತೆ ಬದುಕಿ ಸಾಮಾನ್ಯರ ಬದುಕನ್ನು ಬದಲಾವಣೆ ಮಾಡಬೇಕೆಂಬ ಆಸೆ ಇದೆ ಸರ್ ಎಂದು ಸಿದ್ದಾರ್ಥ್ ಅಣ್ಣನಿಗೆ ಹೇಳಿದ್ದೆ. ಆಗ ಈ ವಿಚಾರದಲ್ಲಿ ಅವರೇ ನನಗೆ ಧೈರ್ಯ ತುಂಬಿದ್ದರು ಎಂದು ಸಿದ್ದಾರ್ಥ್ ಹೆಗ್ಡೆ ಅವರನ್ನು ಅಣ್ಣಾಮಲೈ ನೆನಪಿಸಿಕೊಂಡರು.
ನಾನು ಏನು ಮಾಡಿದರೂ ಅವರು ಮೇಲಿಂದ ನೋಡುತ್ತಿದ್ದಾರೆ. ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.
ಉಡುಪಿ : ಸ್ಕೂಟರ್ ಹಾಗೂ ಮೀನಿನ ಲಾರಿ ನಡುವೆ ಅಪಘಾತ : ಸ್ಕೂಟರ್ ಸವಾರ ಮೃತ್ಯು -Vishwanews24
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…