Featured

ರಾಜ್ಯಕ್ಕೆ ಪ್ರತಿವರ್ಷ ಬರಬೇಕಿದ್ದ ಜಿಎಸ್‌ಟಿ ಪಾಲು ಕೊಡದಿರಲು ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ – Vishwanews24

ರಾಜ್ಯಕ್ಕೆ ಪ್ರತಿವರ್ಷ ಬರಬೇಕಿದ್ದ ಜಿಎಸ್‌ಟಿ ಪಾಲು ಕೊಡದಿರಲು ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ – Vishwanews24

ಕಲಬುರಗಿ: ರಾಜ್ಯಕ್ಕೆ ಪ್ರತಿವರ್ಷ ಬರಬೇಕಿದ್ದ ಜಿಎಸ್‌ಟಿ ತೆರಿಗೆ ಪಾಲನ್ನು ಕೊಡದಿರಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಅವರಿಗೆ ಕೇಂದ್ರ ಮತ್ತು ರಾಜ್ಯದ ಮಧ್ಯೆ ಆದ ಒಪ್ಪಂದದಂತೆ ನಮ್ಮ ಪಾಲಿನ ಹಣ‌ ಕೊಡುವ ಆಸಕ್ತಿಯೇ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ‌ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿ ನೀತಿ ಒಪ್ಪಿಕೊಂಡ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗುವ ನಷ್ಟವನ್ನು 2022ರವರೆಗೂ ಭರ್ತಿ ಮಾಡಿಕೊಡಬೇಕು. ಆದರೆ, ರಾಜ್ಯಕ್ಕೆ ಬರಬೇಕಿರುವ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ ಗಣನೀಯವಾಗಿ ಇಳಿಕೆ ಮಾಡಿದ್ದಾರೆ. ಈ ಅನ್ಯಾಯಕ್ಕೆ  ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರೇ ಕಾರಣ’ ಎಂದು ಹರಿಹಾಯ್ದರು.

ರಾಜ್ಯದ ‌ಬಿಜೆಪಿಯ 25 ಸಂಸದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಅವರನ್ನು ಅಯ್ಕೆ ಮಾಡಿ ಕಳಿಸಿ‌ ಪ್ರಯೋಜನವೇನು ಎಂದು ಪ್ರಶ್ನಿಸಿದರು.

14ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶಢ 4.71ರಷ್ಟು ಜಿಎಸ್ಟಿ ನಷ್ಟ ಪರಿಹಾರ ಕೊಡಬೇಕಿತ್ತು. 15ನೇ ಹಣಕಾಸು ಆಯೋಗದಲ್ಲಿ ಶೇ 1.67 ನಷ್ಟು ಕಡಿತ ಮಾಡಿ ಶೇ 3.64ರಷ್ಟು ಮಾತ್ರ ನಷ್ಟ ಪರಿಹಾರ ಅನುದಾನ ಕೊಡಲು ಮುಂದಾಗಿದೆ. ಇದರಿಂದ ರಾಜ್ಯಕ್ಕೆ ₹ 78 ಸಾವಿರ ‌ಕೋಟಿ‌ ಬದಲು ₹ 40 ಸಾವಿರ ‌ಕೋಟಿ ಮಾತ್ರ ಬರಲಿದೆ. ಅಲ್ಲದೇ ರಾಜ್ಯಕ್ಕೆ ಬರಬೇಕಿದ್ದ ₹ 5495 ಕೋಟಿ ವಿಶೇಷ ಪರಿಹಾರ ‌ಕೊಡಲೂ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾರೆ’ ಎಂದು ಹರಿಹಾಯ್ದರು.

‘ನಮ್ಮ‌ ಪಾಲಿನ ಜಿಎಸ್ಟಿ ಪರಿಹಾರವನ್ನು ಹಕ್ಕಿನಿಂದ ಪಡೆಯುವ ‌ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಲ ಪಡೆಯಲು ‌ಮುಂದಾಗಿದ್ದಾರೆ.  ಆ ಸಾಲವನ್ನು ಸೆಸ್ ಹಾಕುವ ಮೂಲಕ ಭರಿಸಿಕೊಳ್ಳುವುದಾಗಿ ಕೇಂದ್ರ ತಿಳಿಸಿದೆ. ಇದು ಸರಿಯಲ್ಲ. ನಮ್ಮ ಪಾಲಿನ ತೆರಿಗೆ ಪಾಲನ್ನು ಕೂಡಲೇ ಕೊಡುವಂತೆ ಬೊಮ್ಮಾಯಿ ಅವರು ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

ಮಂಗಳೂರು : ಸಮಾಜದಲ್ಲಿ ಹಲವಾರು ಭಾವನೆಗಳು ಇದ್ದು,ಅವುಗಳಿಗೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು : ಸಿಎಂ. ಬೊಮ್ಮಾಯಿ – Vishwanews24

Vishwa News 24

Recent Posts

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

3 days ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

3 days ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

3 days ago

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ -vishwanews24

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…

3 days ago