ಬೆಳಗಾವಿ: ರಾಜ್ಯದಲ್ಲಿ ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಯಾರು ತೀರ್ಮಾನ ಮಾಡಕ್ಕಾಗಲ್ಲ. ನಮ್ಮ ನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನನ್ನ ಅಭಿಪ್ರಾಯ ಹೇಳೋದು ತಪ್ಪೇನಿಲ್ಲವಲ್ಲ. ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು.
ಯಾರೇ ಇದ್ರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಡಿಕೆಶಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು, ಇದನ್ನ ಚಾಲನೆ ಯಾರು ಕೊಟ್ಟಿದ್ದು? ಅವರು ಹೇಳಿದ್ಮೇಲೆ ತಾನೇ ಬಂದಿದ್ದು. ಅಧ್ಯಕ್ಷರು ನಮ್ಮ ಒಕ್ಕಲಿಗ ಸಮಾಜ ಕಾರ್ಯಕ್ರಮದಲ್ಲಿ ಅವರಾಗಿ ಅವರು ನನಗೆ ಮುಂದೆ ಅವಕಾಶ ಕೊಡಿ ಎಂದು ಚಾಲನೆ ಕೊಟ್ಟಿದ್ದಾರೆ. ಕೇಳಿದ್ದು ಅವರೇ ತಾನೇ? ಎಂದು ಡಿಕೆಶಿಗೆ ಪ್ರಶ್ನೆ ಮಾಡಿದರು.
ಎಲ್ಲರೂ ಕ್ಲೇಮ್ ಮಾಡೋದು ಸಹಜ. ಎಲ್ಲರಿಗೂ ಆಸೆ ಇರುತ್ತದೆ. ಬಹಳ ಜನರಿಗೆ ಆಸೆ ಇದೆ. ಆಸೆ ಇರೋದ್ರಲ್ಲಿ ತಪ್ಪೇನಿಲ್ಲ. ಮೊನ್ನೆ ನಾನು ಹೇಳಿದ್ದೀನಿ ಮುಸ್ಲಿಂರಿಗೂ ಅವಕಾಶ ಸಿಗಬೇಕು. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾವು ಜನಸಂಖ್ಯೆಯನುಸಾರ ಶೇಕಡಾ.15ರಷ್ಟು ಇದ್ದೇವೆ ಎಂದು ತಿಳಿಸಿದರು.
ಒಂದೇ ಸಮಾಜ ವೋಟ್ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜೊತೆಗೆ ತಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದ್ರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಒಂದೇ ಒಂದು ಸಮಾಜ ಬೆಂಬಲ ಕೊಟ್ಟರೆ ಯಾರು ಸಿಎಂ ಆಗಲು ಸಾಧ್ಯವಾಗಲ್ಲ ಎಂದರು.
ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕೆಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ, ಪಕ್ಷ ಪೂಜೆ ಮಾಡ್ತಿದ್ದೀವಿ. ಅದರ ಜೊತೆ ವ್ಯಕ್ತಿ ಪೂಜೆ ಮಾಡಬೇಕಾಗುತ್ತದೆ. ಡಿಕೆಶಿ ಭೇಟಿಯಾಗ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆಗೆ, ಖಂಡಿತ. ನಮ್ಮ ಅಧ್ಯಕ್ಷರು ಇದ್ದಾರೆ, ಅವರನ್ನು ಬಿಟ್ಟು ಕಟೀಲ್ ಅವರನ್ನ ಭೇಟಿಯಾಗಬೇಕಾಗುತ್ತೆ ಎಂದು ಟೀಕಿಸಿದರು.
ಬಿಜೆಪಿ ಅಧ್ಯಕ್ಷರಿಗೆ ಭೇಟಿ ಮಾಡಕ್ಕಾಗುತ್ತ? ನನ್ನ ಕಾರ್ಯಕ್ರಮ ಮುಗಿಸಿ ಡಿಕೆಶಿ ಅವರನ್ನು ಭೇಟಿ ಆಗುತ್ತೇನೆ. ಬಾಯಿಮುಚ್ಚು ಅಂತಾ ಪರ್ಟಿಕ್ಯುಲರ್ ಆಗಿ ನನಗೆ ಹೇಳಿದ್ದಾರಾ? ನಾನು ಅವರ ಹೇಳಿಕೆ ನೋಡಿದ್ದೇನೆ. ಎಲ್ಲ ಜನ ಸೇರಿ ಪಕ್ಷ ಅಧಿಕಾರಕ್ಕೆ ತರಬೇಕು ಅಂದಿದ್ದಾರೆ ಎಂದು ಹೇಳಿದರು.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…