Featured

ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ : ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕೆ ನಿರ್ಬಂಧ – Vishwanews24

ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ – ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕೆ ನಿರ್ಬಂಧ

ಕಾನೂನು ಉಲ್ಲಂಘಿಸಿದರೆ 10 ಲಕ್ಷ ದಂಡ, 7 ವರ್ಷ ಜೈಲು

ಬೆಂಗಳೂರು: ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ , ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಆರೋಗ್ಯ ಹಾಳಾಗುತ್ತಿದೆ. ಬೀದಿ ಬದಿ, ಹೊಟೇಲ್ ಊಟದ ಮೇಲೆ ಜನ ಹೆಚ್ಚು ಅವಲಂಬನೆ ಆಗುತ್ತಿದ್ದಾರೆ. ಆಹಾರ ಸರಿಯಾದ ರೀತಿ ಸೇವನೆ ಆಗದಿದ್ದರೆ ಅನಾರೋಗ್ಯ ಹೆಚ್ಚಾಗುತ್ತಿದೆ. ಹೆಚ್ಚು ಕೊಬ್ಬಿನಾಂಶ, ಉಪ್ಪು, ಸಕ್ಕರೆ, ಹೆಚ್ಚಿರೋ ಆಹಾರದಿಂದ ದುಷ್ಪರಿಣಾಮ ಇದೆ ಎಂದರು.

ಎರಡು ಪದಾರ್ಥಗಳಾದ ಕಾಟನ್ ಕ್ಯಾಂಡಿ ಮತ್ತು ಗೋಬಿ ಸ್ಯಾಂಪಲ್ ಕಲೆಕ್ಟ್ ಮಾಡಲಾಯಿತು. ಬೀದಿ ಬದಿ, ಹೊಟೇಲ್ ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಯಿತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದೆ. ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ನಲ್ಲಿ ಸಿಕ್ಕಿದೆ. ರೋಡಮೈನ್ ಕ್ಯಾನ್ಸರ್ ಗೆ ಕಾರಣವಾಗಿದೆ. ಇದನ್ನ ಬಳಕೆ ಮಾಡಲು ಪರ್ಮಿಷನ್ ಇಲ್ಲ. ಮಕ್ಕಳು ಕಾಟನ್ ಕ್ಯಾಂಡಿ ಹೆಚ್ಚಾಗಿ ಸೇವನೆ ಮಡ್ತಾ ಇದ್ದಾರೆ ಎಂದು ಹೇಳಿದರು.

ಟಾರ್ ಟ್ರಾಸೈನ್ ಬಳಕೆಗೆ ಅಪ್ರೂವಲ್ ಇದೆ. ಆದರೆ ಗೋಬಿಯಂತಹ ಪ್ರಿಪೇರ್ ಫುಡ್ ನಲ್ಲಿ ಇದು ಬಳಕೆ ಇಲ್ಲ. 107 ಸ್ಯಾಂಪಲ್ ನಲ್ಲಿ 12 ಟಾರ್ ಟ್ರಾಸೈನ್ ಸಿಕ್ಕಿದೆ. ಸನ್ ಸೆಟ್ 33 ಸಿಕ್ಕಿದೆ ಇದ್ಯಾವುದನ್ನು ಫುಡ್ ಗಳಲ್ಲಿ ಬಳಕೆ ಮಾಡುವಂತಿಲ್ಲ. ಹೀಗಾಗಿ ಕಾನೂನು ಪ್ರಕಾರ ಉಲ್ಲಂಘನೆ ಮಾಡಿದವರಿಗೆ 10 ಲಕ್ಷ ದಂಡ, 7 ವರ್ಷ ಶಿಕ್ಷೆಗೆ ಅವಕಾಶ ಇದೆ. ಪ್ಲೇನ್ ಕಾಟನ್ ಕ್ಯಾಂಡಿ ತಯಾರಿ ಮಾಡಬಹುದು. ಆದರೆ ಕಲರ್ ಕಾಟನ್ ಕ್ಯಾಂಡಿ ಮಾತ್ರ ಮಾರಾಟ ಮಾಡುವಂತಿಲ್ಲ ಎಂದು ಗುಂಡೂರಾವ್ ತಿಳಿಸಿದರು.

Vishwa News 24

Recent Posts

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

33 minutes ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

42 minutes ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

58 minutes ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

1 hour ago

ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು – vishwanews24

ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…

1 hour ago

ರಾಮಮಂದಿರ ದೇಣಿಗೆ ಅವ್ಯವಹಾರ: SIT ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ : ಪೇಜಾವರ ಶ್ರೀ – vishwanews24

ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…

2 hours ago