Featured

ರಾಜ್ಯದಲ್ಲಿ ಬರ ಪರಿಸ್ಥಿತಿ : ಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿ : ಮೋದಿಗೆ ಡಿಕೆಶಿ ಪತ್ರ – vishwanews24

ರಾಜ್ಯದಲ್ಲಿ ಬರ ಪರಿಸ್ಥಿತಿ : ಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿ : ಮೋದಿಗೆ ಡಿಕೆಶಿ ಪತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ತುರ್ತಾಗಿ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್‌  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ನಷ್ಟದ ಸಮಗ್ರ ಮೌಲ್ಯಮಾಪನ ಪೂರ್ಣಗೊಳ್ಳುವ ಮೊದಲೇ ತುರ್ತಾಗಿ ಮನವಿ ಮೊತ್ತದ ಶೇ.50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡುವಂತೆ ಪತ್ರ ಬರೆದು ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.

ರಾಜ್ಯ ಸರ್ಕಾರವು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ನೆರವಾಗುವಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯ (SDRF) ಎರಡನೇ ಕಂತಿನ ಕೇಂದ್ರ ಸರ್ಕಾರದ ಪಾಲನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಪ್ರಧಾನಿಯವರನ್ನು ಸಿಎಂ ಒತ್ತಾಯಿಸಿದ್ದಾರೆ.

 

 

 

 

 

Vishwa News 24

Recent Posts

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ – vishwanews24

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ ಮಂಗಳೂರು : ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸರ ವಶದಿಂದ…

49 seconds ago

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ  – vishwanews24

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ  ನಮ್ಮ ಊರು ಸ್ವಚ್ಛವಾಗಿರಲು, ನಮ್ಮ ಪರಿಸರ ಆರೋಗ್ಯಕರವಾಗಿರಲು ಪ್ರತಿದಿನವೂ ಮೌನವಾಗಿ ಶ್ರಮಿಸುವ ಪೌರಕಾರ್ಮಿಕರ…

5 minutes ago

ಚಲಿಸುತ್ತಿದ್ದಾಗಲೇ ಸ್ಲೀಪರ್‌ ಬಸ್‌ನಲ್ಲಿ ಬೆಂಕಿ : 9 ಮಂದಿ ಸಜೀವ ದಹನ – vishwanews24

ಲಕ್ನೋ: ಚಲಿಸುತ್ತಿದ್ದಾಗಲೇ ಸ್ಲೀಪರ್‌ ಬಸ್‌ನಲ್ಲಿ ಬೆಂಕಿ : 9 ಮಂದಿ ಸಜೀವ ದಹನ ಲಕ್ನೋ: ಚಲಿಸುತ್ತಿದ್ದಾಗಲೇ ಸ್ಲೀಪರ್‌ ಬಸ್‌ನಲ್ಲಿ ಬೆಂಕಿ…

10 minutes ago

ಪುತ್ತೂರು: ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ ; ಆರ್ಯಾಪು ಗ್ರಾ.ಪಂ. ಪಿಡಿಒ ಅಮಾನತು – vishwanews24

ಪುತ್ತೂರು: ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ- ಆರ್ಯಾಪು ಗ್ರಾ.ಪಂ. ಪಿಡಿಒ ಅಮಾನತು ಪುತ್ತೂರು: ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪದ…

15 minutes ago

ಬೆಳ್ತಂಗಡಿ: ಪತ್ನಿ ಕೆರೆಯಲ್ಲಿ ಶವವಾಗಿ ಪತ್ತೆಯಾದ ಬೆನ್ನಲ್ಲೇ ಪತಿ ಆತ್ಮಹತ್ಯೆಗೆ ಶರಣು – vishwanews24

ಬೆಳ್ತಂಗಡಿ: ಪತ್ನಿ ಕೆರೆಯಲ್ಲಿ ಶವವಾಗಿ ಪತ್ತೆಯಾದ ಬೆನ್ನಲ್ಲೇ ಪತಿ ಆತ್ಮಹತ್ಯೆಗೆ ಶರಣು ಬೆಳ್ತಂಗಡಿ : ಪತ್ನಿಯ ಮೃತದೇಹ ತೋಟದ ಕೆರೆಯಲ್ಲಿ…

22 minutes ago

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ: ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತೀಕ್ಷಾ (18) ಎನ್ನುವ ಯುವತಿಯು ಆಗಸ್ಟ್…

17 hours ago