Featured

ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ-  ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ  ; ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ – Vishwanews24

ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ-  ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ  ; ಕರಾವಳಿ

ಭಾಗಕ್ಕೆ ಯೆಲ್ಲೋ ಅಲರ್ಟ್

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರಿಸುವ ಲಕ್ಷಣಗಳಿದ್ದು, ಮುಂದಿನ ಐದು ದಿನಗಳಲ್ಲಿ ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿ ಸಮುದ್ರಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ರಾಜ್ಯದಲ್ಲಿ ಮುಂಗಾರು ಮಾರುತಗಳು ಸಕ್ರಿಯವಾಗಿವೆ.

ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆ.26ರವರೆಗೆ ಸಾಧಾರಣದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದ ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

 

ಅದೇ ರೀತಿ ದಕ್ಷಿಣ ಒಳನಾಡಿನ ಭಾಗದಲ್ಲಿ ಮುಂದಿನ ಎರಡು ದಿನಗಳ ನಂತರ ಅಂದರೆ ಆ.23ರ ನಂತರ ಮಳೆ ಮುಂದುವರಿಯುವ ಲಕ್ಷಣಗಳು ಇವೆ. ಆ.24 ಹಾಗೂ ಆ.25ರಂದು ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಕೊಡಗು ಜಿಲ್ಲೆಗಳ ವಿವಿಧೆಡೆ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದ್ದು, ಇಷ್ಟು ಜಿಲ್ಲೆಗಳಿಗೆ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಆ. 24ರ ಬಳಿಕ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ನಾನು ಮಾಂಸಹಾರಿ , ಮಾಂಸ ತಿನ್ನುವೆ ತಪ್ಪೇನು? ..ಇಂತಹದ್ದೇ ತಿನ್ನು ಎಂದು ದೇವರು ಹೇಳಿದ್ದಾರೆಯೇ?..

 

 

 

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

9 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

10 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

10 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

13 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

13 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

14 hours ago