Featured

ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್ – Vishwanews24

ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

ಬೆಂಗಳೂರು: ನಮ್ಮ ರಾಜ್ಯದಲ್ಲಿ ಯೋಗಿ  ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ ಎಂದು ಸರಣಿ ಪ್ರಶ್ನೆಗಳೊಂದಿಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ನಾಯಕರ ವಿರುದ್ಧ ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.

ಹತ್ರಾಸ್  ಉನ್ನಾವೋ ಅತ್ಯಾಚಾರ ಘಟನೆ ಮಾಸುವ ಮುುುನ್ನವೇ ಉ.ಪ್ರದೇಶದಲ್ಲಿ ಮತ್ತೊಂದು ಜೋಡಿ ಅತ್ಯಾಚಾರ ಹಾಗೂ ಹತ್ಯೆಯ ಘಟನೆ ನಡೆದಿದೆ. ಯೋಗಿ ಮಾದರಿ, ಯೋಗಿ ಮಾದರಿ ಎಂದು ಬಾಯಿ ಬಡಿದುಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಯೋಗಿ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಏನು ರಕ್ಷಣೆಯಿದೆ? ಅನಾಗರಿಕ ಯೋಗಿ ಮಾದರಿ ಆಡಳಿತ ನಮಗೆ ಬೇಕೆ?

ತೊಂದರೆಗಳಿಂದ ಮುಕ್ತಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಯೋಗಿ ಆಡಳಿತದಲ್ಲಿ ಉ.ಪ್ರದೇಶ ( ಅನಾಗರಿಕರ ನಾಡಾಗಿದೆ. ಕೊಲೆ, ಅತ್ಯಾಚಾರ ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಇಂತಹ ಗೂಂಡಾ ರಾಜ್ಯ ನಮ್ಮ ರಾಜ್ಯ ಬಿಜೆಪಿ ನಾಯಕರಿಗೆ ಮಾದರಿ ಅಂತಾ ಅನ್ನಿಸಿದಾದರೂ ಹೇಗೆ? ಯೋಗಿ ಮಾದರಿ ಎಂದು ಕನವರಿಸುವ ಬಿಜೆಪಿಯವರಿಗೆ ನಮ್ಮ ರಾಜ್ಯ ದಕ್ಷಿಣದ ಉ.ಪ್ರದೇಶವಾಗಬೇಕೆ? ಉ.ಪ್ರದೇಶದಂತೆ ಕರ್ನಾಟಕ  ಅತ್ಯಾಚಾರಿಗಳ ಸ್ವರ್ಗವಾಗಬೇಕೆ?

ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ?

ಹತ್ರಾಸ್ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಶವವನ್ನು ಪೋಷಕರಿಗೂ ತಿಳಿಯದಂತೆ ಕದ್ದುಮುಚ್ಚಿ ಉ.ಪ್ರದೇಶ ಪೊಲೀಸರು ಅಂತ್ಯಸಂಸ್ಕಾರ ನಡೆಸುತ್ತಾರೆ. ಯೋಗಿ ಆಡಳಿತದಲ್ಲಿ ಮಾತ್ರ ಇಂತಹ ಭೀಭತ್ಸ್ಯ ಕೃತ್ಯಗಳು ನಡೆಯಲು ಸಾಧ್ಯ. ಯೋಗಿ ಮಾದರಿ ಎಂದು ಬೊಬ್ಬಿರಿಯುವ ರಾಜ್ಯ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲೂ ತರಲು ಹೊರಟಿರಯವುದು ಈ ಮಾದರಿಯನ್ನೇ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷ ಸೇರ್ಪಡೆ ಕಾರ್ಯಕ್ರಮ..

Vishwa News 24

Recent Posts

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ – vishwanews24

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…

17 hours ago

ರೇಷನ್ ಕಾರ್ಡ್​ ಇ-ಕೆವೈಸಿ ದಿನಾಂಕ ವಿಸ್ತರಣೆ: ಸರ್ಕಾರದಿಂದ ಮಹತ್ವದ ಆದೇಶ – vishwanews24

ರಾಜ್ಯ ಸರ್ಕಾರ ಪಡಿತರ ಕಾರ್ಡ್​ದಾರರಿಗೆ ಬಿಗ್ ಗುಡ್​ ನ್ಯೂಸ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ…

17 hours ago

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ : ಇನ್ಸ್‌ಪೆಕ್ಟರ್‌ ಯಾವುದೇ ತಪ್ಪು ಮಾಡಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24

ಇನ್ಸ್‌ಪೆಕ್ಟರ್‌ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ  ತಪ್ಪೇ ಮಾಡದ ಇನ್ಸ್‌ಪೆಕ್ಟರ್‌ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…

18 hours ago

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ – vishwanews24

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…

18 hours ago

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ – vishwanews24

'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…

19 hours ago

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ  : ಚಾಲಕನ ನಿಯಂತ್ರಣ…

20 hours ago