ಬೆಂಗಳೂರು: ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ ಎಂದು ಸರಣಿ ಪ್ರಶ್ನೆಗಳೊಂದಿಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ನಾಯಕರ ವಿರುದ್ಧ ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.
ಹತ್ರಾಸ್ ಉನ್ನಾವೋ ಅತ್ಯಾಚಾರ ಘಟನೆ ಮಾಸುವ ಮುುುನ್ನವೇ ಉ.ಪ್ರದೇಶದಲ್ಲಿ ಮತ್ತೊಂದು ಜೋಡಿ ಅತ್ಯಾಚಾರ ಹಾಗೂ ಹತ್ಯೆಯ ಘಟನೆ ನಡೆದಿದೆ. ಯೋಗಿ ಮಾದರಿ, ಯೋಗಿ ಮಾದರಿ ಎಂದು ಬಾಯಿ ಬಡಿದುಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಯೋಗಿ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಏನು ರಕ್ಷಣೆಯಿದೆ? ಅನಾಗರಿಕ ಯೋಗಿ ಮಾದರಿ ಆಡಳಿತ ನಮಗೆ ಬೇಕೆ?
ತೊಂದರೆಗಳಿಂದ ಮುಕ್ತಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಯೋಗಿ ಆಡಳಿತದಲ್ಲಿ ಉ.ಪ್ರದೇಶ ( ಅನಾಗರಿಕರ ನಾಡಾಗಿದೆ. ಕೊಲೆ, ಅತ್ಯಾಚಾರ ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಇಂತಹ ಗೂಂಡಾ ರಾಜ್ಯ ನಮ್ಮ ರಾಜ್ಯ ಬಿಜೆಪಿ ನಾಯಕರಿಗೆ ಮಾದರಿ ಅಂತಾ ಅನ್ನಿಸಿದಾದರೂ ಹೇಗೆ? ಯೋಗಿ ಮಾದರಿ ಎಂದು ಕನವರಿಸುವ ಬಿಜೆಪಿಯವರಿಗೆ ನಮ್ಮ ರಾಜ್ಯ ದಕ್ಷಿಣದ ಉ.ಪ್ರದೇಶವಾಗಬೇಕೆ? ಉ.ಪ್ರದೇಶದಂತೆ ಕರ್ನಾಟಕ ಅತ್ಯಾಚಾರಿಗಳ ಸ್ವರ್ಗವಾಗಬೇಕೆ?
ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ?
ಹತ್ರಾಸ್ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಶವವನ್ನು ಪೋಷಕರಿಗೂ ತಿಳಿಯದಂತೆ ಕದ್ದುಮುಚ್ಚಿ ಉ.ಪ್ರದೇಶ ಪೊಲೀಸರು ಅಂತ್ಯಸಂಸ್ಕಾರ ನಡೆಸುತ್ತಾರೆ. ಯೋಗಿ ಆಡಳಿತದಲ್ಲಿ ಮಾತ್ರ ಇಂತಹ ಭೀಭತ್ಸ್ಯ ಕೃತ್ಯಗಳು ನಡೆಯಲು ಸಾಧ್ಯ. ಯೋಗಿ ಮಾದರಿ ಎಂದು ಬೊಬ್ಬಿರಿಯುವ ರಾಜ್ಯ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲೂ ತರಲು ಹೊರಟಿರಯವುದು ಈ ಮಾದರಿಯನ್ನೇ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…