ಬೆಂಗಳೂರು : ನಾನು ಕಂಡಂತೆ ಖಾಸಗಿ ಆಸ್ಪತ್ರೆಗಳಲ್ಲಿ ದೇವಸ್ಥಾನ ಸ್ಥಾಪನೆ ಅಥವಾ ದೇವರ ಮೂರ್ತಿ ಇಡಲಾಗಿರುತ್ತದೆ. ಈ ಮೂಲಕ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಇದೇ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸರ್ವಧರ್ಮೀಯ ದೇವಸ್ಥಾನ ಅಥವಾ ಪ್ರಾರ್ಥನಾ ಸ್ಥಳವನ್ನು ನಿರ್ಮಿಸಬೇಕು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಸಲಹೆ ಮಾಡಿದ್ದಾರೆ.
ನಗರದ ವಿಕಾಸ ಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು, ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಿತ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಇನ್ನೂ ಇದೇ ವೇಳೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೇವಸ್ಥಾನ ನಿರ್ಮಿಸಿ, ಅದು ಹಿಂದೂ, ಮುಸ್ಲೀಂ, ಕ್ರೈಸ್ತ ಅಥವಾ ಜೈನ ಧರ್ಮದ್ದಾದರೂ ಸರಿ, ಇದರಿಂದ ರಚನಾತ್ಮಕ( ಪಾಸಿಟಿವ್ ಎನರ್ಜಿ) ಬರಲಿದೆ. ನಾನು ನೋಡಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹೀಗೆ ದೇವಸ್ಥಾನಗಳನ್ನು ನಿರ್ಮಾನ ಮಾಡಲಾಗಿದೆ ಎಂದು ಸಲಹೆ ಮಾಡಿದರು.
ಈ ವೇಳೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು, ಎಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಕನಿಷ್ಠ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ಮಾದರಿ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು. ಹೀಗೆ ಅಭಿವೃದ್ಧಿ ಪಡಿಸಿದ ಮಾದರಿ ಪ್ರಾಥಮಿಕ ಕೇಂದ್ರಗಳಿಗೆ 3 ಲಕ್ಷ, 2 ಲಕ್ಷ ಮತ್ತು 1 ಲಕ್ಷದಂತೆ ನಗದು ಬಹುಮಾನ ನೀಡಾಲಾಗುತ್ತದೆ ಎಂದು ಘೋಷಿಸಿದರು.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…