ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳ ಸೇವಾಶುಲ್ಕ ಸದ್ದಿಲ್ಲದೇ ಏರಿಕೆಯಾಗಿದ್ದು, ಇನ್ಮೇಲೆ ದೇವರ ಸೇವೆ ಭಕ್ತಾದಿಗಳ ಜೇಬು ಸುಡಲಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರ ದೇವಾಲಯಗಳಿದ್ದು, ಈ ದೇವಾಲಯಗಳ ಪೈಕಿ 9 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಅಕ್ಟೋಬರ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಕಳೆದ 4-5 ವರ್ಷದಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ, ಯಾವ ದೇವಾಲಯಗಳು ಸೇವಾಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದವೋ ಆ ದೇವಾಲಯಗಳ ಸೇವಾಶುಲ್ಕವನ್ನ, ಆಗಮ ಪಂಡಿತರ ಪರಿಶೀಲನೆ ನಂತರ 5-10% ವರೆಗೂ ಮುಜರಾಯಿ ಇಲಾಖೆ ಆಯುಕ್ತರು ಏರಿಕೆ ಮಾಡಿದ್ದಾರೆ. ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲವೆಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಯಾವ್ಯಾವ ದೇವಸ್ಥಾನಗಳಲ್ಲಿ ಶುಲ್ಕ ಏರಿಕೆ?
ಬೆಂಗಳೂರು ನಗರ
* ಯೋಗ ನರಸಿಂಹಸ್ವಾಮಿ ದೇವಾಲಯ, ಮಲ್ಲೇಶ್ವರಂ
* ನಂದಿ ತೀರ್ಥ ದೇವಾಲಯ, ಮಲ್ಲೇಶ್ವರಂ
* ಮಹಾಗಣಪತಿ ದೇವಾಲಯ, ಮಲ್ಲೇಶ್ವರಂ
ಚಿಕ್ಕಬಳ್ಳಾಪುರ
* ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ
* ವೆಂಕಟರಮಣ ದೇವಾಲಯ, ತಲಕಾಯ ಬೆಟ್ಟ
ದಕ್ಷಿಣ ಕನ್ನಡ
* ಮಹಾಲಿಂಗೇಶ್ವರ ದೇವಾಲಯ, ಪುತ್ತೂರು
* ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
* ಸೌತಡ್ಕ ಮಹಾಗಣಪತಿ ದೇವಾಲಯ
* ಸೂರ್ಯನಾರಾಯಣ ಸ್ವಾಮಿ ದೇವಾಲಯ, ಮರೋಳಿ
ಇನ್ನೂ ನಾಗಾರಾಧನೆ, ದೈವರಾಧನೆಗೆ ಹೆಸರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಇದೀಗ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ 400 ರೂಪಾಯಿ, ಪರಿಷ್ಕೃತ ದರ 500 ರೂ.ಗೆ ಏರಿಕೆಯಾಗಿದೆ. ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಆದರೆ ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ಭಾರೀ ಹೆಚ್ಚಳ ಮಾಡಲಾಗಿದೆ.
ದರ್ಶನ್ ಪುತ್ರನಿದ್ದ ಕಾರು ಅಪಘಾತ : ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…
ಆಗುಂಬೆ ಘಾಟಿ : ಭಾರಿ ವಾಹನಗಳ ಸಂಚಾರ ನಿಷೇಧ ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ –…
ಉಡುಪಿ : ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹರಿಗೆ ತಲುಪಲು ಪರಿಣಾಮಕಾರಿ ಕೆಲಸ ಮಾಡಿ : ರಮೇಶ್ ಕಾಂಚನ್ ಉಡುಪಿ :…
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…