ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನೇ ದಿನೇ ಕಾವು ಹೆಚ್ಚಾಗ್ತಿದೆ. ಮುಂದಿನ ಎರಡು ತಿಂಗಳು ರಾಜ್ಯ ಬಿಜೆಪಿಗೆ ಮಹತ್ವಪೂರ್ಣ ಕಾಲಾವಧಿಯಾಗಿದೆ.
ಪ್ರಧಾನಿ ಮೋದಿಯವರು ಮುಂದಿನ ಎರಡು ತಿಂಗಳು ಮಹತ್ವದ ರಾಜ್ಯ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ. ಚುನಾವಣೆ ಘೋಷಣೆಗೆ ಮೊದಲು ಪ್ರಧಾನಿ ಕೈಗೊಳ್ಳುತ್ತಿರುವ ಪ್ರವಾಸದಲ್ಲಿ ವಿಕಾಸದ ಕಾರ್ಯಸೂಚಿಯೇ ಮುನ್ನೆಲೆಯಲ್ಲಿರಲಿದೆ. ಅದಕ್ಕಾಗಿಯೇ ಸಾಲು- ಸಾಲು ಕಾರ್ಯಕ್ರಮಗಳಿಗೆ ಪ್ರಧಾನಿ ಅವರನ್ನೇ ಆಹ್ವಾನಿಸಲಾಗ್ತಿದೆ.
ಪ್ರಧಾನಿಯವರು ಯಾವಾಗ ಭೇಟಿ ನೀಡಿದರೂ ಅಭಿವೃದ್ಧಿಯ ಅಜೆಂಡಾ ಹಿಡಿದುಕೊಂಡೇ ಬರುತ್ತಾರೆ. ಮುಂದುವರಿದ ಭಾಗವಾಗಿ ಜನವರಿ, ಫೆಬ್ರವರಿಯಲ್ಲಿ ಮತ್ತಷ್ಟು ಯೋಜನೆಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಈ ಅವಧಿಯಲ್ಲಿ ಡಬಲ್ ಇಂಜಿನ್ ಸರ್ಕಾರಗಳ ಹಲವು ಜನಪರ, ಜನಪ್ರಿಯ ಯೋಜನೆ, ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.
ಇದೇ ತಿಂಗಳ ಜನವರಿ 19ರಂದು ಕಲಬುರಗಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಲಂಬಾಣಿ ಸಮಾಜದ ಫಲಾನುಭವಿಗಳಿಗೆ ಪ್ರಧಾನಿ ಅವರು ಹಕ್ಕು ಪತ್ರ ವಿತರಿಸಲಿದ್ದಾರೆ. ಫೆಬ್ರವರಿ 12ರಂದು ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ.
ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಏರೋ ಇಂಡಿಯಾ-2023ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಧಾರವಾಡ ಐಐಟಿ ಉದ್ಘಾಟನೆಗೂ ಪ್ರಧಾನಿ ಆಗಮಿಸಲಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಉದ್ಘಾಟನೆಗೂ ಪ್ರಧಾನಿ ಬರುತ್ತಿದ್ದು ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಅಭಿವೃದ್ಧಿ ಯೋಜನೆಗಳ ಬಳಿಕ ಮುಂದಿನ ಹಂತದಲ್ಲಿ ಪ್ರಚಾರ ಸಭೆ, ರ‍್ಯಾಲಿ, ರೋಡ್ ಶೋಗಳ ಆಯೋಜನೆಗೆ ಪ್ಲಾನ್ ರೂಪಿಸಲಾಗುತ್ತದೆ. ಈ ಎರಡೂ ಸಂದರ್ಭಗಳಲ್ಲೂ ಪ್ರಖ್ಯಾತ ಮಠ, ದೇವಸ್ಥಾನಗಳಿಗೂ ಭೇಟಿ ಕೊಡಲು ಪ್ರಧಾನಿ ಪ್ಲಾನ್ ಮಾಡ್ಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಅಧಿಸೂಚನೆ ಪ್ರಕಟವಾಗೋವರೆಗೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಭರಾಟೆ ಇರಲಿದೆ.
Join our Whatsapp group by clicking the below link 👇👇
ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ ರಾಷ್ಟ್ರೀಯ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ದರ್ಶನ್ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…
ದ. ಕ, ಉಡುಪಿ ಸೇರಿದಂತೆ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …
ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…
ಮಂಗಳೂರು: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…