Featured

ರಾಜ್ಯ ರಾಜಕೀಯದ ಮೇಲೆ ಚಂದ್ರಗ್ರಹಣದ ಎ‍ಫೆಕ್ಟ್ ; ಹೆಚ್ ಡಿ ರೇವಣ್ಣ ಗೆ ಮುಖ್ಯಮಂತ್ರಿ ಯೋಗ : ಕೋಡಿ ಶ್ರೀ ಗಳ ಭವಿಷ್ಯ

ಹಾಸನ: ಶುಕ್ರವಾರ ಸಂಭವಿಸಲಿರುವ ಚಂದ್ರ ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದ್ದು, ಎಚ್.ಡಿ.ರೇವಣ್ಣನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಅರ್ಥವಿರುವ ಭವಿಷ್ಯವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ.

ತಾಳೆಗರಿ ನೋಡಿ ಭವಿಷ್ಯ ಹೇಳುವ ಶ್ರೀಗಳು `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭಾತೃ ಬೆಂಕಿ ಹಿಡಿದಾನು’ ಎಂದು ಒಗಟಾಗಿ ತಿಳಿಸಿದ್ದಾರೆ. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಭವಿಷ್ಯ ಅರ್ಥ ಮೂಡಿಸುತ್ತದೆ.

ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ “ಬಿತ್ತಿದ ಬೆಳಸು ಪೈರು ಕುಯ್ದಾರು, ಬಿತ್ತಿದ ಬೀಜ ಒಂದು ಬೆಳೆದ ಪೈರೋಂದು” ಎಂದು ಭವಿಷ್ಯ ನುಡಿದಿದ್ದರು. ಅಂದರೆ ಮುಂದಿನ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಯಾರೋ ಹಾಕಿದ ಶ್ರಮದ ಫಲವನ್ನ ಇನ್ನೊಬರು ಅನುಭವಿಸಲಿದ್ದಾರೆ. ಹಾಗೇ ಅನಿರೀಕ್ಷಿತ ಅಧಿಕಾರ ಚುಕ್ಕಾಣಿ ಹಿಡಿಯುವ ಸನ್ನಿವೇಶಗಳಿವೆ ಅನ್ನೊದನ್ನ ಹೇಳಿದ್ದಾರೆ.

 

Vishwa News 24

Recent Posts

ಸುಳ್ಯ: ಮನೆಯ ಅಂಗಳಕ್ಕೆ ಮುರಿದು ಬಿದ್ದ ತೆಂಗಿನ ಮರ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ – vishwanews24

ಸುಳ್ಯ: ಮನೆಯ ಅಂಗಳಕ್ಕೆ ಮುರಿದು ಬಿದ್ದ ತೆಂಗಿನ ಮರ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ ಸುಳ್ಯ: ಮನೆಯ ಮುಂಭಾಗದಲ್ಲಿದ್ದ ತೆಂಗಿನ…

7 minutes ago

ಮಂಗಳೂರು: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ – vishwanews24

ಮಂಗಳೂರು: ಸೋಮೇಶ್ವರದಲ್ಲಿ 16 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಂಗಳೂರು : 16 ವರ್ಷದ ಪ್ರಥಮ ವರ್ಷದ ಪಿಯುಸಿ (ಪಿಯುಸಿ)…

18 minutes ago

ಇನ್ಮುಂದೆ ವೈದ್ಯರ ಶಿಫಾರಸು ಇಲ್ಲದೇ ಮೆಡಿಕಲ್‌ನಲ್ಲಿ ಯಾವುದೇ ಸಿರಪ್‌ಗಳನ್ನು ಖರೀದಿಸುವಂತಿಲ್ಲ : ಕೇಂದ್ರ ಆದೇಶ – vishwanews24

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ…

29 minutes ago

ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ; ವನ ಮಹೋತ್ಸವ ಕಾರ್ಯಕ್ರಮ – vishwanews24

ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ; ವನ ಮಹೋತ್ಸವ ಕಾರ್ಯಕ್ರಮ ಪಟ್ಲ: ರೂರಲ್ ಎಜುಕೇಶನ್ ಸೊಸೈಟಿ (ರಿ.),…

39 minutes ago

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

20 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

20 hours ago