Featured

ರಾಜ್ಯ ಸರ್ಕಾರದಿಂದ ದೈವಚಾಕರಿ ನಡೆಸುವವರಿಗೂ ಅರ್ಚಕರ ಸವಲತ್ತುಗಳು ; ಇದು ತುಳುನಾಡಿನ ಜನತೆಗೆ ಸಂದ ಗೌರವ: ದಿನೇಶ್‌ ಕುಂಪಲ – Vishwanews24

ರಾಜ್ಯ ಸರ್ಕಾರದಿಂದ ದೈವಚಾಕರಿ ನಡೆಸುವವರಿಗೂ ಅರ್ಚಕರ ಸವಲತ್ತುಗಳು ; ಇದು ತುಳುನಾಡಿನ ಜನತೆಗೆ ಸಂದ ಗೌರವ: ದಿನೇಶ್‌ ಕುಂಪಲ

ಉಳ್ಳಾಲ: ಕೇರಳ ಮಾದರಿಯಲ್ಲಿ ಜಿಲ್ಲೆಯ ದೈವಸ್ಥಾನದ ದೈವ ಚಾಕರಿ ವರ್ಗದವರಿಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಿಗುವಂತಹ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸಿಗಲಿದ್ದು, ಫೆ.20 ರ ಅಧಿವೇಶನದಲ್ಲಿ ಸ್ಪೀಕರ್‌ ಖಾದರ್‌ ಅವರ ಮತುವರ್ಜಿಯಂತೆ ಹಲವು ವರ್ಷಗಳ ಬೇಡಿಕೆ ಕಾರ್ಯಗತಗೊಂಡಿದೆ, ಇದು ತುಳುನಾಡಿನ ಜನತೆಗೆ ಸಂದ ಗೌರವವಾಗಿದೆ ಎಂದು ದಿನೇಶ್‌ ಕುಂಪಲ ಹೇಳಿದ್ದಾರೆ.

ತೊಕ್ಕೊಟ್ಟು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಫೆ.20 ರ ಕಲಾಪದಲ್ಲಿ ಮಹತ್ವದ ಕಾರ್ಯಕ್ರಮ ಜಾರಿ ಮಾಡಿದೆ. ಹಿಂದೂ ದೇವಾಲಯ, ದೈವಸ್ಥಾನಗಳಲ್ಲಿ ಇರುವ ಕೆಲವು ಸಮಸ್ಯೆಗಳಿಗೆ ತಿದ್ದುಪಡಿ ತಂದಿದೆ. ದೈವ ಚಾಕರಿ ಮಾಡುವವರಿಗೆ ವಿಶೇಷ ಒತ್ತು ನೀಡಿ ಅರ್ಚಕರಿಗೆ ಇರುವ ಸ್ಥಾನಮಾನ, ಸಂಭಾವನೆ, ಗೌರವಧನ ದೈವ ಚಾಕರಿ ಮಾಡುವವರಿಗೂ ಮುಂದಿನ ದಿನಗಳಲ್ಲಿ ಸಿಗಲಿದೆ . ಪರಂಪರಾಗತವಾಗಿ ದೈವಸ್ಥಾನದ ಬಳೆ, ಬಟ್ಟೆ ಹಾಕದೆ ಆಚಾರಪಟ್ಟವರು ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಸಣ್ಣ ಸಂಭಾವನೆ ಮಾತ್ರ ಸಿಗುತಿತ್ತು. ಈ ಕುರಿತು ಅಂದು ಶಾಸಕರಾಗಿದ್ದ ಯು.ಟಿ ಖಾದರ್‌ ಅವರು ಕೇರಳ ಮಾದರಿಯಲ್ಲಿ ದೈವಚಾಕರಿ ನಡೆಸುವವರಿಗೂ ಸರಕಾರ ಸವಲತ್ತುಗಳನ್ನು ನೀಡಬೇಕೆಂದು ಅಂದಿನ ಸರಕಾರದ ಗಮನ ಸೆಳೆದಿದ್ದರು. ಇದೀಗ ಧಾರ್ಮಿಕ ದತ್ತಿ ಸಚಿವರಾದ ರಾಮಲಿಂಗರೆಡ್ಡಿ ದೇವಸ್ಥಾನಗಳ ಕುರಿತು ಪ್ರಸ್ತಾಪವನ್ನು ಅಧಿವೇಶನದಲ್ಲಿ ಇಡುತ್ತಿದ್ದಂತೆ, ತುಳುನಾಡಿನ ದೈವ ಚಾಕರಿಯವರ ವಿಚಾರವನ್ನು ಮುಂದಿಟ್ಟಿರುವುದು ಹಿಂದುಳಿದ ವರ್ಗ ಸೇರಿದಂತೆ ತುಳುನಾಡಿನ ಸಮಸ್ತ ಜನರಿಗೆ ಕೊಟ್ಟಂತಹ ಸಂತಸದ ವಿಚಾರವಾಗಿದೆ.

ಎ ಗ್ರೇಡ್‌ ದೇವಸ್ಥಾನಗಳಲ್ಲಿ ಸಹಾಯಕ ಆಯುಕ್ತರಿಗೆ ರೂ. 25 ಲಕ್ಷ ಸೀಮಿತವಿದ್ದ ಖರ್ಚನ್ನು ರೂ.1 ಕೋಟಿವರೆಗೆ ಬಿಡುಗಡೆಗೊಳಿಸುವ ಅವಕಾಶ, ಜಿಲ್ಲಾಧಿಕಾರಿಗಳಿಗೂ ಆಯಾಯ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ರೂ.1 ಕೋಟಿಯಿಂದ ರೂ. 5 ಕೋಟಿವರೆಗೂ ಖರ್ಚು ಮಾಡುವ ಅವಕಾಶವನ್ನು ತಿದ್ದುಪಡಿ ಮಾಡಲಾಗಿದೆ. ಸಿ ಗ್ರೇಡ್‌ ದೇವಸ್ಥಾನಗಳಿಗೂ ಈ ಮೂಲಕ ಅನುದಾನ ಸಿಗಲಿದೆ. ರೂ. 5,000 ದಿಂದ 50,000 ಅರ್ಚಕರ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಸ್ಕಾಲರ್ ಶಿಪ್ ನೀಡುವ ಕೆಲಸವಾಗಿದೆ.ದೇವಸ್ಥಾನ ಕಟ್ಟಲು, ಮೂರ್ತಿ ಕಟ್ಟುವ ವಿಶ್ವಕರ್ಮ ಸಮಾಜ, ದೇವಸ್ಥಾನದ ಸಂಬಂಧ ಇರಬೇಕು ಅನ್ನುವ ಉದ್ದೇಶದಿಂದ ಎಲ್ಲಾ ಧಾರ್ಮಿಕ ದತ್ತಿಗೆ ಒಳಪಡುವ ಎಲ್ಲಾ ಆಡಳಿತ ಸಮಿತಿಯಲ್ಲಿ ಸಮಾಜದ ಒಬ್ಬರಿಗೆ ಮೀಸಲಾತಿಯನ್ನು ನೀಡಲಾಗಿದೆ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿರುವುದು ಖುಷಿಯ ಅಂಗತಿ ಅರ್ಚಕರು, ದೈವ ಚಾಕರಿಯವರಿಗೆ ಆರೋಗ್ಯ ವಿಮೆಯನ್ನು ನೀಡುವ ಕಾಯಕಕ್ಕೆ ಸರಕಾರ ಕೈ ಹಾಕಿದೆ. 10 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದರೂ, ಹಿಂದೂ ಧರ್ಮಕ್ಕಾಗಿ ಯಾವುದೇ ಕೆಲಸವನ್ನು ಮಾಡದೇ , ಜನರ ಮನಸ್ಸನ್ನು ಹಿಂದೂ ವಿರೋಧಿ ಕಾಂಗ್ರೆಸ್ ಅನ್ನುವ ಅಚ್ಚು ಕೊಡಲು ಟ್ರೋಲ್ ಮೂಲಕ ಪ್ರಯತ್ನಿಸುತ್ತಿದೆ.

ದ.ಕ.ಜಿಲ್ಲೆಗೆ ಅಧಿಕ ಶಾಸಕರಿದ್ದರೂ ಹಿಂದೂ ದೇವಸ್ಥಾನಗಳ ಅಭಿವೃದ್ಧಿ ವಿಚಾರದಲ್ಲಿ ಕೈ ಜೋಡಿಸದೇ ಇರುವುದು ವಿಪರ್ಯಾಸ. ದೈವಸ್ಥಾನಕ್ಕೆ ಭೇಟಿ ಕೊಡುವ ಖಾದರ್‌ ಅವರಿಗೆ ದೈವಪಾತ್ರಿಗಳು ಪ್ರಸಾದ ನೀಡುವುದನ್ನು ಟೀಕಿಸಿದ್ದ ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಭಟ್‌ ಅವರ ಮಾತನ್ನು ಗಣನೆಗೆ ಪಡೆಯದ ಖಾದರ್‌ ಇಂದು ಅದೇ ದೈವಸ್ಥಾನಗಳಿಗೆ, ಅಲ್ಲಿ ಕೆಲಸ ಮಾಡುವ ವರ್ಗದವರಿಗೆ ಗೌರವ ನೀಡಿರುವುದು ಇಡೀ ಹಿಂದೂ ಸಮಾಜ ಗೌರವಿಸುವ ಕಾರ್ಯ ಎಂದರು.

ಸುದ್ಧಿಗೋಷ್ಠಿಯಲ್ಲಿ ಡಿಸಿಸಿ ಸದಸ್ಯ ಸುರೇಶ್‌ ಭಟ್ನಗರ , ಬ್ಲಾಕ್‌ ಉಪಾಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರು, ಬ್ಲಾಕ್‌ ಇಂಟೆಕ್‌ ಅಧ್ಯಕ್ಷ ವಿಶಾಲ್‌ ಕೊಲ್ಯ ಉಪಸ್ಥಿತರಿದ್ದರು

Vishwa News 24

Recent Posts

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ – vishwanews24

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ ಮಂಗಳೂರು/ಉಡುಪಿ:…

12 minutes ago

ಉಡುಪಿ: ಮೀನುಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ – vishwanews24

ಉಡುಪಿ: ಮೀನುಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ ಉಡುಪಿ: ಜಿಲ್ಲೆಯ ಅರ್ಹ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ…

27 minutes ago

ಜೂ. 24ರಿಂದ 26ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ – vishwanews24

ಜೂ. 24ರಿಂದ 26ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ…

33 minutes ago

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ – vishwanews24

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ ಮಂಗಳೂರು: ಬಜಪೆಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ…

38 minutes ago

ಪುತ್ತೂರು: ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ – vishwanews24

ಪುತ್ತೂರು: ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ ಪುತ್ತೂರು: ಇಲ್ಲಿನ ಕಬಕ ಸಮೀಪದ ಪೋಳ್ಯ ನಿವಾಸಿ,…

43 minutes ago

ಕಾಂಗ್ರೆಸ್ ಪಕ್ಷ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು , ಶೀಘ್ರದಲ್ಲೇ ಹೊಸ ಜಿಲ್ಲಾಅಧ್ಯಕ್ಷರ ನೇಮಕಾತಿ :ಬಿ.ಕೆ. ಹರಿಪ್ರಸಾದ್ – vishwanews24

ಕರ್ನಾಟಕದಲ್ಲಿ ಯಾವುದೇ ರೀತಿಯ ಹಿಂಸೆಗೆ ಅವಕಾಶ ನೀಡುವುದಿಲ್ಲ :  ಬಿ.ಕೆ. ಹರಿಪ್ರಸಾದ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು…

55 minutes ago