ರಾಯಚೂರು: ರಾಜ್ಯ ಸರ್ಕಾರ ಮುಸ್ಲಿಮರ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ ಎಂದು ಹೇಳುವಾಗ ಇನ್ನೂ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಚಿಂತಕ, ಯುವ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲ ಪೂಜಿಸುವ ಗೋವಿನ ಕೆಚ್ಚಲು ಕತ್ತರಿಸಿದವನಿಗೆ ಹುಚ್ಚ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಆ ಹುಚ್ಚನಿಗೆ ಗೋವಿನ ಕೆಚ್ಚಲನ್ನೆ ಯಾಕೆ ಕಡಿಯಬೇಕು ಎನಿಸಿತು. ನಾಯಿಯದ್ದೊ ಮತ್ಯಾವುದೋ ಪ್ರಾಣಿಯದ್ದು ಯಾಕೆ ಕಡಿಯಬೇಕು ಎನಿಸಿಲಿಲ್ಲ. ಆತನಿಗೆ ಈ ಆಲೋಚನೆ ಬಂದಿದ್ದು ಯಾವ ಪ್ರಾರ್ಥನಾ ಮಂದಿರದಿಂದ ಎನ್ನುವುದನ್ನು ಸರ್ಕಾರ ತಿಳಿಸಬೇಕು ಎಂದು ತಾಕೀತು ಮಾಡಿದರು.
ಮುಸ್ಲಿಮರು ತಪ್ಪು ಮಾಡಿದರೆ ಅವರು ಹುಚ್ಚರು, ದಡ್ಡರಾಗಿರುತ್ತಾರೆ. ಅದೆ ಬೇರೆ ಧರ್ಮಿಯರು ಮಾಡಿದಾಗ ವ್ಯವಸ್ಥಿತವಾಗಿ ಮಾಡಿರುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಹಿಂದು ಧರ್ಮದ ಆರಾಧನೆಗಳಿಗೆ ಅಪಮಾನ ಮಾಡಿದವರಿಗೆ ಹುಚ್ಚರೆಂಬ ಸಮಜಾಯಿಷಿ ಕೊಡುತ್ತೀರಿ ಎಂದರೆ ಸರ್ಕಾರ ಯಾವ ಮನಸ್ಥಿತಿಯಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಮುಸ್ಲಿಮರು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಪ್ರಮುಖ ಅಜೆಂಡಾದಲ್ಲಿದ್ದಾರೆ. ಅವರಲ್ಲಿ ತಮ್ಮಿಂದ ಸಮಾಜಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾಳಜಿ ಕಾಣುವುದಿಲ್ಲ. ಕೊರೊನಾ ವೇಳೆ ಎಲ್ಲರೂ ಮನೆಯಲ್ಲಿದ್ದರೆ ಅವರು ಮಾತ್ರ ನಾವು ಸಾಮೂಹಿಕ ಪ್ರಾರ್ಥನೆ ಮಾಡಿಯೇ ಸಿದ್ಧ ಎನ್ನುತ್ತಿದ್ದರು. ಮತಾಂತರ ಮಾಡುವುದು, ಅನ್ಯಧರ್ಮಿಯರ ಮಹಿಳೆಯರನ್ನು ಮದುವೆಯಾಗಿ ಜನಸಂಖ್ಯೆ ವೃದ್ಧಿಸಿಕೊಳ್ಳುವ ಕೆಲಸದಲ್ಲಿದ್ದಾರೆ. ದೇಶದಲ್ಲಿ 8-10 ಕೋಟಿ ಬಾಂಗ್ಲಾ ಮುಸ್ಲಿಮರಿದ್ದಾರೆ ಎಂದು ಆ ದೇಶದವರೇ ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ವ್ಯವಸ್ಥೆ ವಿರುದ್ಧವೇ ಹೋರಾಡುತ್ತಾರೆ. ವಿರೋಧಿ ದೇಶದ ನಾಯಕರು ನೀಡಬೇಕಾದ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡುತ್ತಾರೆ. ಅವರ ಅಂತರಂಗದ ಹೇಳಿಕೆ ಹೊರಬಿದ್ದಂತಾಗಿದೆ. ಚೀನಾದ ಫಂಡ್ ಪಡೆದು ಫೌಂಡೇಶನ್ ನಡೆಸುವವರ ಬಗ್ಗೆ ನಾವು ಹೆಚ್ಚಿಗೆ ಏನು ಹೇಳಲಾಗದು ಎಂದರು.
ಡಾ.ಅಂಬೇಡ್ಕರ್ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬೆಳಕು ಹೊಳಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿಂದು ಧರ್ಮದ ಬುಡ ಅಲ್ಲಾಡಿಸಿದವರು ಡಾ.ಅಂಬೇಡ್ಕರ್ ಅವರು. ಅದನ್ನು ಸ್ವೀಕರಿಸಿ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲಾಗುತ್ತದೆ. ಅವರು ಕೇವಲ ಹಿಂದು ಧರ್ಮವನ್ನು ಮಾತ್ರವಲ್ಲದೇ ಕಾಂಗ್ರೆಸ್ ಬಗ್ಗೆಯೂ ಕಟು ಟೀಕೆ ಮಾಡಿದರು. ಸ್ವಾಭಿಮಾನ ಕಳೆದುಕೊಳ್ಳಕಾದರೆ ಕಾಂಗ್ರೆಸ್ ಸೇರಿರಿ ಎಂದಿದ್ದರು. ಕಮ್ಯುನಿಸ್ಟರ್ ಬಗ್ಗೆಯೂ ಬಹಳ ಕಟುವಾಗಿ ಟೀಕಿಸಿದ್ದರು. ಡಾ.ಅಂಬೇಡ್ಕರ್ ಮಹಾಮಾನವತಾವಾದಿ. ಅವರ ವಿಚಾರಗಳನ್ನು ಜನರಿಗೆ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…