ರಾಜ್ಯ ನ್ಯೂಸ್

ರಾಷ್ಟ್ರದ ಜನತೆ ಮತ್ತೊಮ್ಮೆ ಬಯಸುತ್ತಿದೆ ಮೋದಿ ಸರ್ಕಾರವನ್ನು…

ಸರಿಯಾಗಿ ನಾಲ್ಕು ವರ್ಷದ ಹಿಂದೆ ಇದೇ ದಿನ ಭಾರತದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ನರೇಂದ್ರ ಮೋದಿ ಎಂಬ ನಾಯಕನ ನೇತೃತ್ವದಲ್ಲಿ ಮೂವತ್ತು ವರ್ಷಗಳ ಬಳಿಕ ಭಾರತದಲ್ಲಿ ಸ್ವಂತ ಬಲದ ಮೇಲೆ ಪಕ್ಷವೊಂದು ಅಧಿಕಾರಕ್ಕೇರಿತ್ತು. ನರೇಂದ್ರ ಮೋದಿ ಎಂಬ ಚಾಣಕ್ಯ ನಾಯಕ ಇಡೀ ದೇಶದ ಜನರ ಮನಗೆದ್ದಿದ್ದರು. ಇಡೀ ದೇಶದ ಜನತೆಯ ಆಶಾಕಿರಣವಾಗಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ಇಡೀ ವಿಶ್ವದ ಗಮನ ಸೆಳೆದಿದ್ದ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ದೇಶದ ಜನತೆ, ಅದರಲ್ಲಿಯೂ ಯುವಜನತೆ ಮೋದಿಯವರ ಪರ ನಿಂತಿದ್ದರು. ಆ ಐತಿಹಾಸಿಕ ಸರ್ಕಾರಕ್ಕೆ ಇದೀಗ ನಾಲ್ಕು ವರ್ಷ ಕಳೆದು ಹೋಗಿದೆ. ಐದನೇ ವರ್ಷಕ್ಕೆ ಮೋದಿ ಸರ್ಕಾರ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದೆ. ಅಂದು ರಾಷ್ಟ್ರ ರಾಜಕಾರಣದಲ್ಲಿ ಅನುಭವವೇ ಇಲ್ಲದ ಗುಜರಾತ್ ಮುಖ್ಯಮಂತ್ರಿ ಪ್ರಧಾನಿ ಪಟ್ಟಕ್ಕೇರಿದ್ದರು. ಇಂದು ಅವರು ವಿಶ್ವ ನಾಯಕನಾಗಿ ಬೆಳೆದು ನಿಂತಿದ್ದಾರೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಇಂದು ಭಾರತ ವಿವಿಧ ಕ್ಷೇತ್ರಗಳಲ್ಲಿ ವಿಶ್ವದೆಲ್ಲೆಡೆ ರಾರಾಜಿಸುತ್ತಿದ್ದರೆ ಎಂದರೆ ಅದಕ್ಕೆ ನರೇಂದ್ರ ಮೋದಿಯವರೇ ಕಾರಣ. ವಿಶ್ವ ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ದೇಶದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ದಿನ ಬೆಳಗಾದರೆ ಹಗರಣಗಳನ್ನೇ ನೋಡುತ್ತಿದ್ದ ದೇಶದಲ್ಲಿ ನಾಲ್ಕು ವರ್ಷ ಕಳೆದರೂ ಒಂದೇ ಒಂದು ಹಗರಣಗಳು ನಡೆಯದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರವನ್ನು ಹಿಡಿತದಲ್ಲಿಟ್ಟಿದ್ದಾರೆ.  ಹಲವಾರು ದಿಟ್ಟ ನಿರ್ಧಾರಗಳು, ಸವಾಲುಗಳು, ಅಡೆತಡೆಗಳನ್ನು ಸಮರ್ಥವಾಗಿ ನರೇಂದ್ರ ಮೋದಿಯವರು ನಿಭಾಯಿಸಿದ್ದಾರೆ. ಇಡೀ ದೇಶದ ಜನತೆ ಮೋದಿಯವರ ನಿರ್ಧಾರದ ಜೊತೆಗಿದ್ದೇವೆ ಎಂಬುದನ್ನು ಪದೇ ಪದೇ ನಡೆದಂತಹ ಚುನಾವಣೆಗಳಲ್ಲಿ ಜನರು ಸಾಬೀತು ಪಡಿಸಿದ್ದಾರೆ. ಮೋದಿಯವರಿಗೆ ಮತ್ತಷ್ಟು ಶಕ್ತಿ ತುಂಬುತ್ತಿದ್ದಾರೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಹಲವಾರು ಮಹತ್ವದ ಭರವಸೆಗಳನ್ನು ನೀಡಿದ್ದರು. ಅವುಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.

ಅಧಿಕಾರಕ್ಕೆ ಬಂದ ಮೊದಲ ದಿನವೇ ಕಪ್ಪು ಹಣ ತರಲು ವಿಶೇಷ ತನಿಖಾ ತಂಡವನ್ನು ನೇಮಿಸಿದ್ದರು. ಸತತ ಪ್ರಯತ್ನಗಳನ್ನು ಮಾಡಿದರು. ಕಾನೂನುಗಳನ್ನು ಬಿಗಿಗೊಳಿಸಿದರು. ಪರಿಣಾಮವಾಗಿ ಸಾವಿರಾರು ಕೋಟಿ ಕಪ್ಪು ಹಣವನ್ನು ಕಪ್ಪು ಕುಳಗಳು ಸ್ವಯಂ ಘೋಷಿಸುವಂತಾಯಿತು. ಇನ್ನು ವಿದೇಶದಲ್ಲಿರುವ ಕಪ್ಪು ಹಣವನ್ನು ತರಲು ಮೋದಿ ಅವರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಬಹುತೇಕ ಅದು ಕೂಡ ಯಶಸ್ವಿಯಾಗುವ ಹಾದಿಯಲ್ಲಿದೆ. ಇನ್ನು ರಾತ್ರೋರಾತ್ರಿ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಕಳ್ಳರು, ಕದಿಯುವವರು ಗಳ ಬೆಂಡೆತ್ತಿದ್ದರು. ನಕಲಿ ದಂಧೆಗಳನ್ನು ಮಟ್ಟ ಹಾಕಿದ್ದರು. ಅತ್ಯಂತ ಮಹತ್ವದ ಮತ್ತು ಖಡಕ್ ನಿರ್ಧಾರಗಳಲ್ಲಿ ಅದು ಒಂದಾಗಿತ್ತು.ದೇಶದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಪ್ರಧಾನಿಯನ್ನು ನಾವು ಕಾಣುತ್ತಿದ್ದು ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಆಗಲಿ, ಮಯನ್ಮಾರ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸೆದೆ ಬಡಿದಿದ್ದಾಗಲೀ, ಎಲ್ಲವೂ ನರೇಂದ್ರ ಮೋದಿಯವರ ಕಿರೀಟಕ್ಕೆ ಅಂಟಿದ ಗರಿಗಳಾಗಿವೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನವನ್ನು ಯಶಸ್ವಿಯಾಗಿ ಬೆತ್ತಲೆ ಗೊಳಿಸುವಲ್ಲಿ ಮೋದಿ ಸಫಲರಾಗಿದ್ದಾರೆ. ಹೋದಲ್ಲೆಲ್ಲ ಪಾಕಿಸ್ತಾನದ ಷಡ್ಯಂತ್ರಗಳನ್ನು ಬಿಚ್ಚಿಡುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಪಾಕಿಸ್ತಾನ ಬಹುತೇಕ ಒಬ್ಬಂಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಹಾಗೂ ಇನ್ನಿತರರ ನೇತೃತ್ವದ ವಿದೇಶಾಂಗ ಇಲಾಖೆಯ ತಂಡ ಅತ್ಯಂತ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳನ್ನು ಆಹ್ವಾನಿಸಿದ್ದ ಮೋದಿ, ಇತ್ತೀಚೆಗೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಸಿಯಾನ್ ರಾಷ್ಟ್ರಗಳನ್ನು ಆಹ್ವಾನಿಸಿದ್ದರು. ಆ ಮೂಲಕ ಏಷ್ಯಾದ ಒಂದೊಂದೇ ರಾಷ್ಟ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಾ ಚೀನಾಗೆ ಸಡ್ಡು ಹೊಡೆದು ಬೆಳೆದು ನಿಂತರು. ಇಡೀ ಏಷ್ಯಾಗೆ ಭಾರತವನ್ನು ಅಧಿಪತಿ ಮಾಡುವ ಹಂಬಲದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನುಗ್ಗುತ್ತಿದ್ದಾರೆ. ಅದರಲ್ಲಿ ಬಹುತೇಕ ಯಶಸ್ವಿಯೂ ಆಗುತ್ತಿದ್ದಾರೆ.

ವಿವಿಧ ಅಂತರರಾಷ್ಟ್ರೀಯ ವರದಿಗಳು, ವಿಶ್ವಸಂಸ್ಥೆ, ಎಕನಾಮಿಕ್ ಫೋರಂ ಮುಂತಾದವುಗಳ ವರದಿಗಳು ಭಾರತದ ಸರ್ಕಾರದ ಸಾಧನೆಗಳನ್ನು ಕೊಂಡಾಡುತ್ತಿದೆ. ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ವರದಿಗಳು ಸಾರಿ ಹೇಳುತ್ತಿವೆ. ಚೀನಾದ ಆರ್ಥಿಕತೆಯನ್ನು ಹಿಂದಿಕ್ಕಿ ಭಾರತದ ಆರ್ಥಿಕತೆಯನ್ನು ನಂಬರ್ ಒನ್ ಮಾಡಿದ ಶ್ರೇಯ ಈ ಚಾಯ್ ವಾಲಾ ಪ್ರಧಾನಿಗೆ ಸಲ್ಲಬೇಕು. ಬಹುತೇಕ ವಿರೋಧ ಪಕ್ಷದ ನಾಯಕರು, ರಾಷ್ಟ್ರದ ಎಲ್ಲಾ ಮಾಧ್ಯಮಗಳು ಸಂಘ ಸಂಸ್ಥೆಗಳ ಕಣ್ಣು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಮೇಲಿತ್ತು. ಯಾವುದಾದರೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಮೋದಿ ಸರ್ಕಾರವನ್ನು ಸಿಕ್ಕಿ ಹಾಕಿಸಬೇಕೆಂದು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದರಲ್ಲಿ ವಿರೋಧಿಗಳು ಇಂದಿಗೂ ಯಶಸ್ವಿಯಾಗಿಲ್ಲ.

ಇಡೀ ದೇಶದ ರಾಜಕೀಯ ವಿರೋಧಿಗಳೆಲ್ಲರೂ ಒಗ್ಗೂಡಿದರು. ಎಲ್ಲರನ್ನೂ ಮೋದಿಯವರು ಸಿಂಹದಂತೆ ಒಬ್ಬಂಟಿಯಾಗಿ ಎದುರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ದಿನೇ ದಿನೇ ಭಾರತದ ಘನತೆಯನ್ನು ಹೆಚ್ಚಿಸುವಂತೆ ಮಾಡುತ್ತಿದ್ದಾರೆಯೇ ಹೊರತು, ಎಂದು ಭಾರತ ತಲೆ ತಗ್ಗಿಸುವಂತೆ ಮಾಡಿಲ್ಲ. ಮೇಕ್ ಇನ್ ಇಂಡಿಯಾದಿಂದ ಡಿಜಿಟಲ್ ಇಂಡಿಯಾ ವರೆಗೆ, ಬುಲೆಟ್ ಪ್ರೂಫ್ ಜಾಕೆಟ್ ನಿಂದ ಬುಲೆಟ್ ಟ್ರೈನ್ ವರೆಗೆ, ಸ್ವಚ್ಛ ಭಾರತದಿಂದ ಫಸಲ್ ಭೀಮಾ ಯೋಜನೆ ವರೆಗೆ ನೂರಕ್ಕೂ ಅಧಿಕ ಯಶಸ್ವಿ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಜಾರಿಗೆ ತಂದಿದ್ದಾರೆ.ದೇಶದ ಹಳ್ಳಿ ಹಳ್ಳಿಗಳಿಗೂ ವಿದ್ಯುತ್ ತಲುಪಿಸಿ ವಿದ್ಯುತ್ ಇಲ್ಲದೇ ಇರುವ ಹಳ್ಳಿಗಳೇ ಇಲ್ಲ ಎಂದು ಘಂಟಾಘೋಷವಾಗಿ ಸಾರುವಂತೆ ಮಾಡಿದ್ದು ಇದೇ ಪ್ರಧಾನಿ ನರೇಂದ್ರ ಮೋದಿ. ಸ್ವಚ್ಛ ಭಾರತವನ್ನು ಚಿಕ್ಕ ಚಿಕ್ಕ ಮಕ್ಕಳ ಮನಸ್ಸಿನಲ್ಲಿಯೂ ಮೂಡುವಂತೆ ಮಾಡಿದ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ದೇಶದ ಒಳಗೆ ಒಂದೇ ಒಂದು ಭಯೋತ್ಪಾದಕ ದಾಳಿಗಳು ನಡೆಯದಂತೆ ನೋಡಿಕೊಂಡಿದ್ದು ಮೋದಿಯವರಿಗೆ ಸಲ್ಲಬೇಕಾದ ಶ್ರೀಗಳಲ್ಲಿ ಒಂದು.

ಮೋದಿಯವರ ನಡವಳಿಕೆಗಳು, ಆ ವ್ಯಕ್ತಿತ್ವ-ನಾಯಕತ್ವ ಗುಣ ಎಂತಹವರಲ್ಲಿಯೂ ಭಾರತದ ಪ್ರಧಾನಿಯ ಬಗ್ಗೆ ಅಭಿಮಾನವನ್ನು ಮೂಡಿಸುತ್ತದೆ. ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ದೇಶದ ಜನತೆಯ ಹಾತೊರೆಯುತ್ತಾರೆ. ದೇಶದ ಸಾಲವನ್ನು ತೀರಿಸುತ್ತಾ ಮತ್ತೊಂದೆಡೆ, ದೇಶವನ್ನು ಸದೃಢವಾಗಿ ನಿಲ್ಲುವಂತೆ ಮಾಡುತ್ತಾ ಮೋದಿ ಹೆಜ್ಜೆ ಇಡುತ್ತಿದ್ದಾರೆ. ಮೋದಿಯವರು ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ತಾವು ಅಧಿಕಾರ ಕಳೆದುಕೊಳ್ಳಬೇಕಾಗಬಹುದು ಎಂಬುದನ್ನ ಲೆಕ್ಕಿಸದೆ ಹಲವಾರು ಕಠಿಣ ಸವಾಲುಗಳಿಗೆ ಕೈ ಹಾಕಿದ್ದಾರೆ

ಅದು ಸರ್ಜಿಕಲ್ ಸ್ಟ್ರೈಕ್ ಆಗಿರಲಿ, ಜಿ.ಎಸ್.ಟಿ ಜಾರಿಯೇ ಆಗಿರಲಿ, ಡಿಮಾನಿಟೈಸೇಷನ್ ಆಗಿರಲಿ, ತ್ರಿಪಲ್ ತಲಾಕ್ ನಿಷೇಧಿಸಿದ್ದಾಗಲೀ, ಗೋಹತ್ಯೆ ವಿರುದ್ಧ ಕಠಿಣ ಕಾನೂನನ್ನು ರೂಪಿಸಿದ್ದಾಗಲೀ, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಸಾವಿರಾರು ಎನ್.ಜಿ.ಒಗಳಿಗೆ ವಿದೇಶದಿಂದ ಹರಿದು ಬರುತ್ತಿದ್ದ ದೇಣಿಗೆಯನ್ನು ತಡೆದಿದ್ದಾಗಲೀ ಅಥವಾ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವಂತಹ ಕಾನೂನು ರೂಪಿಸಿದ್ದಾಗಲೀ ಎಲ್ಲವೂ ಮೋದಿಯವರ ದಿಟ್ಟ ನಿರ್ಧಾರಗಳಿಗೆ ಸಾಕ್ಷಿ.

ಪ್ರತಿ ವರ್ಷ ಪ್ರಧಾನಿ ಮೋದಿಯವರು ಗಡಿಭಾಗದ ಯುದ್ಧ ಭೂಮಿಯಲ್ಲಿ ಸೈನಿಕರ ಜತೆ ದೀಪಾವಳಿ ಆಚರಿಸುತ್ತಾರೆ. ಯೋಧರು ಗಳಿಗೆ ಬುಲೆಟ್ ಪ್ರೂಫ್ ಜಾಕೆಟ್ ನಿಂದ ಒ.ಆರ್.ಒ.ಪಿ ಯಂತಹ ಪ್ರಮುಖ ಯೋಜನೆಗಳನ್ನು ಸಾಕಾರಗೊಳಿಸಿದ್ದು ಇದೆ ಪ್ರಧಾನಿ ಮೋದಿ. ಯೋಧರಿಗೆ ನೀಡಿದ ಸ್ವಾತಂತ್ರ್ಯದ ಫಲವಾಗಿ ಇಂದು ಯಶಸ್ವಿಯಾಗಿ ಭಾರತೀಯ ಸೇನೆ ವಿರೋಧಿಗಳ ಹೆಡಮುರಿ ಕಟ್ಟುತ್ತಿದೆ. ದೇಶಭಕ್ತ ಸರ್ಕಾರದ ರಾಷ್ಟ್ರೀಯವಾದಿ ನಾಯಕರು ಗಳಿಂದಾಗಿ ದೇಶದ ಸೇನೆ ಸದೃಢವಾಗಿ ಬೆಳೆಯುತ್ತದೆ.

ಒಂದೆಡೆ ದೇಶ ಕಾಯುವ ಯೋಧನ ಬೆನ್ನಿಗೆ ಮೋದಿ ಸರ್ಕಾರ ನಿಂತಿದ್ದರೆ, ಮತ್ತೊಂದೆಡೆ ದೇಶದ ಅನ್ನದಾತರಿಗೆ ಹಲವು ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಫಸಲ್ ಭೀಮಾ ಯೋಜನೆಯೇ ಇರಲಿ, ಮಣ್ಣಿನ ಕಾರ್ಡ್ ಗಳ ವಿತರಣೆಯಾಗಲಿ, ರಸಗೊಬ್ಬರಗಳ ಸಮರ್ಪಕ ಪೂರೈಕೆಯಾಗಲಿ, ಬೆಂಬಲ ಬೆಲೆಗಳ ಘೋಷಣೆ ಯಂತಹ ಹಲವಾರು ಮಹತ್ವದ ಯೋಜನೆಗಳ ಮೂಲಕ ಅನ್ನದಾತರಿಗೆ ಮೋದಿ ಸರಕಾರ ಬೆನ್ನೆಲುಬಾಗಿ ನಿಂತಿದೆ.ಇನ್ನು ದೇಶದ ಯುವಜನತೆಗಾಗಿಯೂ ಹಲವು ಕೊಡುಗೆಗಳನ್ನು ಮೋದಿ ಸರ್ಕಾರ ನೀಡಿದೆ. ಸ್ಕಿಲ್ ಇಂಡಿಯಾ ಆಗಿರಲಿ, ಸ್ಟಾರ್ಟ್ಅಪ್ ಇಂಡಿಯಾ ಆಗಿರಲಿ ದೇಶದ ಯುವಜನತೆ ಬೇರೊಬ್ಬರ ಮೇಲೆ ಅವಲಂಬಿತವಾಗದೆ ತನ್ನ ಕಾಲ ಮೇಲೆ ತಾನೇ ನಿಲ್ಲಲು ಮೋದಿ ಸರ್ಕಾರ ಶ್ರಮಿಸುತ್ತಿದೆ. ಇನ್ನು ಮುದ್ರಾ ದಂತಹ ಯಶಸ್ವಿ ಯೋಜನೆಗಳ ಮೂಲಕ ಕೋಟ್ಯಂತರ ಜನ ಸಾಲ ಪಡೆದು ತಾವೇ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಸದ್ಯ ದೇಶದ ಹೆದ್ದಾರಿಗಳು, ರಸ್ತೆಗಳ ನಿರ್ಮಾಣ ಕಳೆದ ಬಾರಿಗಿಂತ ಮೂರು ಪಟ್ಟು ಅತ್ಯಂತ ವೇಗವಾಗಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿ, ಅಮೃತ್ ನಂತಹ ಮಹತ್ವದ ಯೋಜನೆಗಳ ಫಲವಾಗಿ ಪ್ರತಿ ನಗರಗಳಿಗೂ ಕೋಟಿ ಕೋಟಿ ಹಣ ಕೇಂದ್ರ ಸರ್ಕಾರದಿಂದ ಬರುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡುವ ಮೂಲಕ ಇಡೀ ವಿಶ್ವವನ್ನು ಯೋಗದ ಹೆಸರಿನಲ್ಲಿ ಒಗ್ಗೂಡಿಸಿದ ಕೀರ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಸಂಬಂಧವನ್ನು ವೃದ್ಧಿಸುತ್ತಾ, ಭಾರತಕ್ಕೆ ಲಾಭವಾಗುವಂತಹ ಯೋಜನೆಗಳನ್ನು ಒಪ್ಪಂದಗಳನ್ನು ಮೋದಿಯವರು ಅನುಷ್ಠಾನಗೊಳಿಸುತ್ತಿದ್ದಾರೆ. ಮಹಿಳೆಯರು, ತಾಯಂದಿರ ರಕ್ಷಣೆಗಾಗಿ ಹಲವು ಯೋಜನೆಗಳು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಯೋಜನೆಗಳು, ವಿಕಲಚೇತನರು ದಿವ್ಯಾಂಗರು ಗಳ ಬದುಕನ್ನು ಬದಲಾಯಿಸುವತ್ತ ಹಲವಾರು ದಿಟ್ಟ ಕ್ರಮಗಳನ್ನು ಮೋದಿ ಸರ್ಕಾರ ಕೈಗೊಂಡಿದೆ. ಭಾರತದ ಸಾಂಸ್ಕೃತಿಕ ಪರಂಪರೆಗಳನ್ನು ರಕ್ಷಿಸಲು ಮೋದಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ.

ಹಲವು ಸಾಧನೆಗಳ ನಡುವೆಯೂ ಮೋದಿ ಸರ್ಕಾರಕ್ಕೆ ಕೆಲವೊಂದು ಕಂಟಕಗಳು ಅಂಟಿಕೊಳ್ಳಬೇಕಾಯಿತು. ಹಿಂದಿನ ಯುಪಿಎ ಸರ್ಕಾರ ಮಾಡಿದ್ದ ಎಡವಟ್ಟುಗಳು ಮೋದಿ ಸರ್ಕಾರ ಜವಾಬ್ದಾರಿ ಆಗಬೇಕಾಯಿತು. ಅದು ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯರಂತಹ ಪ್ರಕರಣಗಳು. ಈ ಎಲ್ಲರಿಗೂ ಯುಪಿಎ ಸರ್ಕಾರ ದೂರದೃಷ್ಟಿ ಇಲ್ಲದೆ ಸಾವಿರಾರು ಕೋಟಿ ಹಣ ಸಾಲವನ್ನು ನೀಡಿತ್ತು. ಮೋದಿ ಸರ್ಕಾರ ಯಾವಾಗ ಕಠಿಣ ಕಾನೂನುಗಳನ್ನು ರೂಪಿಸುತ್ತಿರುವುದು, ಭಾರತದಲ್ಲಿ ನಮ್ಮಂಥವರಿಗೆ ಬದುಕಲು ಸಾಧ್ಯವಿಲ್ಲ ಎನ್ನುವುದು ಅರಿವಾಗಿತ್ತೋ ಅಂದೇ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದರು.ಆದರೆ ಅವರಿಗೆ ಸೇರಿದ ಬಹುತೇಕ ಆಸ್ತಿಗಳನ್ನು ಮೋದಿ ಸರ್ಕಾರ ವಶಕ್ಕೆ ತೆಗೆದುಕೊಂಡಿದೆ. ಇನ್ನೆಂದೂ ಈ ರಾಷ್ಟ್ರದಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಮೋದಿ ಸರ್ಕಾರ ಸಮರ್ಥವಾದ ಕಾನೂನುಗಳನ್ನು ರೂಪಿಸಿದೆ. ಪರಿಣಾಮವಾಗಿ ಸಾವಿರಾರು ಕಂಪನಿಗಳು ಇಂದು ತಾವೇ ಮುಂದೆ ಬಂದು ಸಾಲವನ್ನು ಮರುಪಾವತಿ ಮಾಡುತ್ತಿವೆ. ಬಹುಶಃ ಇಂತಹ ದೂರದೃಷ್ಟಿ ಈ ಹಿಂದೆ ಆಳಿದ ನಾಯಕರಿಗಿದ್ದಿದ್ದರೆ ಭಾರತದಲ್ಲಿ ಇಂತಹ ಪ್ರಕರಣಗಳೇ ನಡೆಯುತ್ತಿರಲಿಲ್ಲ.

ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರ ನಂತರ ಯಾರು ದೇಶವನ್ನು ಆಳಬಹುದು ಎಂಬ ಪ್ರಶ್ನೆ ರಾಷ್ಟ್ರದ ಜನತೆಗೆ ಕಾಡಲಾರಂಭಿಸಿದೆ. ಅಂತಹ ಶ್ರೇಷ್ಠ ವ್ಯಕ್ತಿತ್ವ-ನಾಯಕತ್ವ ಯಾರಲ್ಲಿದೆ ಎನ್ನುವುದು ಉತ್ತರಿಸಲಾಗದ ಪ್ರಶ್ನೆಯಾಗಿ ನಿಂತಿದೆ. ದೇಶದ ಬಹುಪಾಲು ಜನತೆಗೆ ಈಗಲೂ ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿಯಾಗಬೇಕು ಎಂಬುದು ಬಯಕೆಯಾಗಿದೆ. ಇದು ಆಗಾಗ್ಗೆ ವಿವಿಧ ಸಂಸ್ಥೆಗಳು ನಡೆಸುವ ಸಮೀಕ್ಷೆಗಳಲ್ಲಿ ಬಯಲಾಗಿದೆ.

ಈಗಲೂ ರಾಷ್ಟ್ರದ ಬಹುಪಾಲು ಜನತೆಯ ಅಚ್ಚುಮೆಚ್ಚಿನ ನಾಯಕನಾಗಿ ಮೋದಿಯವರೇ ನಿಂತುಕೊಂಡಿದ್ದಾರೆ. ವಿರೋಧಿಗಳು ಅದೆಷ್ಟೇ ಟೀಕಿಸಿ, ಅದೆಷ್ಟೇ ವಿರೋಧಿಸಿದರು ರಾಷ್ಟ್ರದ ಜನ ಮಾನಸದಲ್ಲಿ ಮೋದಿಯವರು ಅಚ್ಚಳಿಯದೆ ನಿಂತುಬಿಟ್ಟಿದ್ದಾರೆ. ಮತ್ತೊಂದು ಅವಧಿಗೆ ಮೋದಿಯವರು ರಾಷ್ಟ್ರದ ಪ್ರಧಾನಿಯಾಗಬೇಕು, ರಾಷ್ಟ್ರವನ್ನು ಮತ್ತೊಮ್ಮೆ ಸರ್ವತೋಮುಖ ಅಭಿವೃದ್ಧಿ ಅಡುಗೆ ಕೊಂಡೊಯ್ಯಬೇಕು. ಇಲ್ಲದಿದ್ದರೆ ಮತಾಂಧರು, ತುಕಡೆ ಗ್ಯಾಂಗ್ ನವರ ಹಾವಳಿಯಿಂದ ದೇಶದ ಭವಿಷ್ಯ ಮತ್ತೆ ಮಂಕಾಗುವುದು ನಿಶ್ಚಿತ.

ಮೋದಿ ಸರ್ಕಾರಕ್ಕೂ ಹಿಂದಿನ ಅವಧಿಯಲ್ಲಿ ನಡೆದಂತಹ ಬ್ರಹ್ಮಾಂಡ ಭ್ರಷ್ಟಾಚಾರಗಳು ಇಂದಿಗೂ ದೇಶದ ಜನತೆ ಮರೆತಿಲ್ಲ. ಮೋದಿಯವರ ಆಡಳಿತಕ್ಕೂ ಹಿಂದಿನ ಸರ್ಕಾರಗಳ ಆಡಳಿತಕ್ಕೂ ಇಂಚಿಂಚೂ ತುಲನೆ ಮಾಡಿ ಅಳೆಯಲಾಗುತ್ತಿದೆ. ಎಲ್ಲಾ ವಿಭಾಗಗಳಲ್ಲಿಯೂ ಮೋದಿ ಸರ್ಕಾರವೇ ನಂಬರ್ ಒನ್ ಆಗಿದೆ. ಹಾಗಾಗಿಯೇ ದೇಶದ ಜನತೆಯ ಆಯ್ಕೆಯೂ ಮುಂದಿನ ಬಾರಿ ಮೋದಿ ಸರ್ಕಾರವೇ ಆಗಿರುತ್ತದೆ. ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ದೇಶಭಕ್ತ ನಾಯಕನಿಗೆ ಅಭಿನಂದನೆಗಳು. ಮೋದಿ ಸರ್ಕಾರಕ್ಕೆ ಶುಭವಾಗಲಿ. ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸೋಣ. ಸಂಕಲ್ಪ ಮಾಡೋಣ.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

12 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

16 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

16 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

16 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

17 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

17 hours ago