Featured

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಂಡ ಅಮರ್ ಜವಾನ್ ಜ್ಯೋತಿ – Vishwanews24

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಂಡ ಅಮರ್ ಜವಾನ್ ಜ್ಯೋತಿ

ಕಳೆದ ಐವತ್ತು ವರ್ಷಗಳಿಂದ ಇಂಡಿಯಾ ಗೇಟ್ ಬಳಿ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ..

ಜ್ಯೋತಿಯನ್ನು ಆರಿಸುತ್ತಿಲ್ಲ ಇದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ –  ಕೇಂದ್ರ ಸ್ಪಷ್ಟನೆ

ಅಮರರಾದ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ ..

ನವದೆಹಲಿ: 50 ವರ್ಷಗಳ ಬಳಿಕ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿ ಜ್ವಾಲೆಯನ್ನು ಇಂದು ನಂದಿಸಲಾಗುತ್ತದೆ. ಗಣರಾಜ್ಯೋತ್ಸವದ ಮುನ್ನಾದಿನದಂದು ಪಕ್ಕದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಜ್ವಾಲೆಯೊಂದಿಗೆ ಇದು ವಿಲೀನಗೊಳ್ಳಲಿದೆ.

ಸಮಾರಂಭದಲ್ಲಿ ಸಂಯೋಜಿತ ರಕ್ಷಣಾ ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಧಾ ಕೃಷ್ಣ ಅವರು ಎರಡು ಜ್ವಾಲೆಗಳನ್ನು ವಿಲೀನಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮರಾದ ಸೈನಿಕರ ಸ್ಮರಣಾರ್ಥ ನಿರ್ಮಾಣ: ಇಂಡಿಯಾ ಗೇಟ್ ಸ್ಮಾರಕವನ್ನು ಬ್ರಿಟಿಷ್ ಸರ್ಕಾರ 1914-1921ರ ನಡುವೆ ಹುತಾತ್ಮರಾದ ಬ್ರಿಟಿಷ್ ಭಾರತೀಯ ಸೈನಿಕರ ನೆನಪಿಗಾಗಿ ನಿರ್ಮಿಸಿತ್ತು. ಅಮರ್ ಜವಾನ್ ಜ್ಯೋತಿ ಎಂದು ಕರೆಯಲ್ಪಡುವ ಶಾಶ್ವತ ಜ್ವಾಲೆಯನ್ನು 1971ರ ಇಂಡೋ – ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ಇಂಡಿಯಾ ಗೇಟ್ ಕಮಾನಿನ ಕೆಳಗೆ 1972 ರಲ್ಲಿ ನಿರ್ಮಿಸಲಾಗಿತ್ತು.

 

2 ವರ್ಷಗಳ ಹಿಂದೆ ರಾಷ್ಟ್ರೀಯ ಯುದ್ಧ ಸ್ಮಾರಕ ಅಸ್ತಿತ್ವಕ್ಕೆ ಬಂದ ನಂತರ ಅಮರ್ ಜವಾನ್ ಜ್ಯೋತಿಯ ಅಸ್ತಿತ್ವವನ್ನು ಪ್ರಶ್ನಿಸಲಾಯಿತು. ಈ ಹಿಂದೆ, ಅಮರ್ ಜವಾನ್ ಜ್ಯೋತಿ ದೇಶದ ಇತಿಹಾಸದ ಅವಿಭಾಜ್ಯ ಭಾಗವಾಗಿರುವುದರಿಂದ ಅಮರ್ ಜವಾನ್ ಜ್ಯೋತಿ ಮುಂದುವರಿಯುತ್ತದೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿತ್ತು.

ಆದರೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹೊಸ ಶಾಶ್ವತ ಜ್ವಾಲೆ ಮತ್ತು ಸ್ಮಾರಕದಲ್ಲಿ ಎಲ್ಲ ಗೊತ್ತುಪಡಿಸಿದ ದಿನಗಳಲ್ಲಿ ಪುಷ್ಪಾರ್ಚನೆ ಸಮಾರಂಭವನ್ನು ನಡೆಸುವುದರೊಂದಿಗೆ, ಸೇನಾ ಪಡೆ ಈಗ ಅಮರ್ ಜವಾನ್ ಜ್ಯೋತಿಯನ್ನು ಇದರೊಂದಿಗೆ ವಿಲೀನಗೊಳಿಸುತ್ತಿದೆ. ಸ್ವಾತಂತ್ರ್ಯಾ ನಂತರ ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲ ವೀರರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

176 ಕೋಟಿ ರು ವೆಚ್ಚದಲ್ಲಿ 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಫೆಬ್ರವರಿ 2019 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಇಂಡಿಯಾ ಗೇಟ್‌ನಲ್ಲಿ ನಡೆಯುತ್ತಿದ್ದ ಎಲ್ಲಾ ಮಿಲಿಟರಿ ಸಮಾರಂಭಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು.

 

ತಪ್ಪು ಗ್ರಹಿಕೆಗೆ ಕೇಂದ್ರದ ಸ್ಪಷ್ಟೀಕರಣ: ಅಮರ್ ಜವಾನ್ ಜ್ಯೋತಿಯನ್ನು ಆರಿಸಲಾಗುತ್ತಿದೆ ಎನ್ನುವ ತಪ್ಪುಗ್ರಹಿಕೆಗೆ ಕೇಂದ್ರ ಸ್ಪಷ್ಟೀಕರಣ ನೀಡಿದ್ದು, ಇದನ್ನು ಯುದ್ಧಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಹೇಳಿದೆ. 1971 ಹಾಗೂ ಇತರ ಕೆಲವು ಯುದ್ಧಗಳಲ್ಲಿ ಮಡಿದ ಸೈನಿಕರ ಹೆಸರು ಮಾತ್ರವೇ ಅಮರ್ ಜವಾನ್ ಜ್ಯೋತಿಯ ಬಳಿಯಲ್ಲಿದೆ. ಆದರೆ, ಯುದ್ಧ ಸ್ಮಾರಕದಲ್ಲಿ ಈವರೆಗೂ ಎಲ್ಲಾ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಹೆಸರುಗಳಿದೆ. ಆ ಕಾರಣದಿಂದಾಗಿ ಜ್ಯೋತಿ ಅಲ್ಲಿರುವುದೇ ಸೂಕ್ತ ಎಂದು ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದೆ. ತಾನು ಅಧಿಕಾರದಲ್ಲಿದ್ದ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವ ಯೋಚನೆಯನ್ನೇ ಹೊಂದಿರದ, 7 ದಶಕಗಳ ಕಾಲ ಸುಮ್ಮನೆ ಕುಳಿತಿದ್ದ ಪಕ್ಷದಿಂದ ನಾವು ಕಲಿಯುವ ಅಗತ್ಯವಿಲ್ಲ ಎಂದು ಹೇಳಿದೆ.

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

6 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

6 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

7 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

7 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

7 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

8 hours ago