Featured

ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ -vishwanews24

ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಗಾದ್ರೂ ಮಾಡಿ ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸಬೇಕೆಂದು ಸಂಚು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಶುದ್ಧೀಕರಣ’ ಹೇಳಿಕೆ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಸ್ಸಿ-ಎಸ್ಟಿ ಕಾಯ್ಡೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಜಾಗವನ್ನ ಉತ್ತರಖಂಡದವರು ಶುದ್ಧೀಕರಣ ಮಾಡಿದ್ದಾರೆ. ಸಂವಿಧಾನ ಅಸ್ಪೃಶ್ಯತೆಯನ್ನ ರದ್ದು ಮಾಡಿದೆ. ಆದ್ರೆ ದೇಶಕ್ಕೆ ಸ್ವಾತಂತ್ರ‍್ಯ ಬಂದು 80 ವರ್ಷಗಳಾಗುತ್ತಿದ್ದರೂ ಈ ರೀತಿ ಮಾಡಿರೋದು ಸಂವಿಧಾನದ ಆಶಯ ವಿರೋಧ ಮಾಡಿದಂತೆ. ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಮಾಡಿದ ಅಪಮಾನವಲ್ಲ, ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಏನು ತಪ್ಪು ಮಾಡಿದ್ದಾರೆ? ಇದರ ವಿರುದ್ಧ ನಾವೆಲ್ಲ ಪ್ರತಿಭಟನೆ ಮಾಡಬೇಕು” ಎಂದು ಹೇಳಿದರು.

“ಉತ್ತರಾಖಂಡದವರು ಮಾಡಿದ ತಪ್ಪನ್ನ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಾನೂನಿನ ಪ್ರಕಾರ ಯಾರು ಶುದ್ಧೀಕರಣ ಮಾಡಿದ್ದಾರೋ ಅವರ ವಿರುದ್ಧ ಎಸ್ಸಿ -ಎಸ್ಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಬೇಕು. ಆದ್ರೆ ಯಾವ ತಪ್ಪು ಮಾಡದ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಸಂವಿಧಾನದ ಪರ ಇರುವವರು, ಅಸ್ಪೃಶ್ಯತೆಯ ವಿರುದ್ಧ ಇರುವವರು” ಎಂದರು.

“ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಹೀಗೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಗಾದ್ರೂ ಮಾಡಿ ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸಬೇಕೆಂದು ಸಂಚು ಮಾಡಿದೆ. ಈ ಹಿಂದೆಯೂ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಟೀಕಿಸಿದ್ದಾಗ ಲೋಕಸಭೆಗೆ ರಾಹುಲ್ ಗಾಂಧಿ ಬರದಂತೆ ಮಾಡಲು ಅವರ ಸದಸ್ಯತ್ವವನ್ನೇ ರದ್ದು ಮಾಡಿದ್ರು. ಸುಪ್ರೀಂ ಕೋರ್ಟ್‌ನಲ್ಲಿ ಹೋಗಿ ರಾಹುಲ್ ಗಾಂಧಿ ಅವರು ಸದಸ್ಯತ್ಯ ವಾಪಸ್ ಪಡೆದುಕೊಳ್ಳಬೇಕಾಯ್ತು. ಇಂತಹ ಕಾನೂನು ಬಾಹಿರ ಕ್ರಮವನ್ನ ಕೇಂದ್ರ ಸರ್ಕಾರ ಮಾಡುತ್ತಾ ಬಂದಿದೆ” ಎಂದು ಕಿಡಿಕಾರಿದರು.

 

Vishwa News 24

Recent Posts

ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ನೇಮಕ -vishwanews24

ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ನೇಮಕ ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ…

8 minutes ago

ಕುಂದಾಪುರ: ಗಂಗೊಳ್ಳಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ -vishwanews24

ಕುಂದಾಪುರ: ಗಂಗೊಳ್ಳಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ ಕುಂದಾಪುರ : ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ಬೋಟ್‌ವೊಂದು…

55 minutes ago

ರಾಜ್ಯಾದ್ಯಂತ ಆಹಾರ ತಯಾರಿಕಾ ಕೇಂದ್ರಗಳ ತಪಾಸಣೆ: ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ -vishwanews24

ರಾಜ್ಯಾದ್ಯಂತ ಆಹಾರ ತಯಾರಿಕಾ ಕೇಂದ್ರಗಳ ತಪಾಸಣೆ: ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ ಮಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು…

4 hours ago

ಉಡುಪಿ : ಯುವತಿ ನಾಪತ್ತೆ  -vishwanews24

ಉಡುಪಿ : ಯುವತಿ ನಾಪತ್ತೆ  ಉಡುಪಿ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಈಶ್ವರಿ (18) ಎಂಬ ಯುವತಿ…

4 hours ago

ಮಂಗಳೂರು : ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ ; 3 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ -vishwanews24

ಮಂಗಳೂರು : ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ ; 3 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು :…

5 hours ago

ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ -vishwanews24

ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ ಕೋಲಾರ: ಸಾಲ  ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ …

5 hours ago