ಉಡುಪಿ: ನಿರ್ಧಿಷ್ಟ ಕಾಲಮಿತಿಯೊಳಗೆ ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾಮಗಾರಿ ಮುಗಿಸದಿದ್ದಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಅವರು ನವಯುಗ ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಅವರು, ನವಯುಗ ಕಂಪನಿ ಟೋಲ್ ಸಂಗ್ರಹ ಮಾಡಿದ ಹಣದಲ್ಲಿ ರಸ್ತೆಯನ್ನು ಕೂಡಾ ನಿರ್ವಹಣೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಹೊಂಡ ಗುಂಡಿಯಿಂದ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ರಸ್ತೆ ನಿರ್ವಹಣೆಗೆ ಕಾಲಮಿತಿ ನಿಗದಿ ಮಾಡುತ್ತೇವೆ. ಅಷ್ಟರೊಳಗೆ ಸರಿಪಡಿಸದಿದ್ದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು
ಇದೇ ವೇಳೆ ಅಧಿಕಾರಿಗಳು ಸಭೆಗೆ ಗೈರಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಗೈರಾಗುತ್ತಿರುವುದು ಸಹ್ಯವಲ್ಲ. ಯಾವುದೇ ಅಧಿಕಾರಿ ಇರಲಿ ಸಭೆಗೆ ಬಾರದೇ ಇದ್ದಲ್ಲಿ ಹೇಗೆ ಬರಿಸಬೇಕು ಎಂಬುದು ನಮಗೆ ಗೊತ್ತು. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕಾರಿಗಳ ಗೈರಿನ ಕುರಿತು ವರದಿ ಮಾಡುತ್ತೇವೆ. ಸಚಿವರಿಗೂ ಮಾಹಿತಿ ನೀಡುತ್ತೇವೆ. ಸ್ವಲ್ಪ ಕಾದು ನೋಡಿ ಏನು ಕ್ರಮ ಅಂತ ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಆಗಸ್ಟ್ 1ರಿಂದ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ ಬೆಂಗಳೂರು: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು…
ಉಡುಪಿ: ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ :…
ಪಡುಬಿದ್ರಿ : ಬೈಕ್ ಕಳವು ಪ್ರಕರಣ - ಓರ್ವನ ಬಂಧನ ಪಡುಬಿದ್ರಿ,: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು…
ಉಡುಪಿ: ಹಠಾತ್ತನೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಅರಣ್ಯ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರು ಉಡುಪಿ: ಜಿಲ್ಲೆಯ ಹಾವಂಜೆ…
ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ…
ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ ಉಡುಪಿ:…