Featured

ರಿಯಾದ್ : ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ – vishwanews24

ರಿಯಾದ್ : ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ ; ಹೌತಿ ಡ್ರೋನ್‌ ಹೊಡೆದುರುಳಿಸಿದ ಸೌದಿ ಅರೇಬಿಯಾ

ರಿಯಾದ್ : ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ‘ವಾಯುದಾಳಿ ಎಚ್ಚರಿಕೆ’  ನೀಡಿ ಸೈರನ್ ಬಜಾಯಿಸಲಾಗಿದೆ.

ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ, ಜಿದ್ದಾ ಹಾಗೂ ತಾಯಿಫ್ ಸೇರಿದಂತೆ ಪಶ್ಚಿಮ ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಜಾಗರೂಕರಾಗಿರುವಂತೆ ತುರ್ತು ಎಚ್ಚರಿಕೆ ನೀಡಿತು. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ‘ಮಕ್ಕಾ ನಗರದಲ್ಲಿನ ಅಪಾಯ ದೂರವಾಗಿದೆ’ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿತು.

ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಸಾಮಾಜಿಕ ಜಾಲತಾಣ ‘X’ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಹೊರಾಂಗಣದಲ್ಲಿ ಗುಂಪುಗೂಡುವುದು ಮತ್ತು ವೀಡಿಯೊ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡಬೇಕೆಂದು ಖಡಕ್ ಸೂಚನೆ ನೀಡಿದೆ.

ಯೆಮೆನ್‌ನಿಂದ ಹೌದಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದ ಸೌದಿಯ ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ 73 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯಾದ ಖಮಿಸ್ ಮುಶೈತ್‌ನಲ್ಲಿರುವ ‘ಕಿಂಗ್ ಖಾಲಿದ್ ವಾಯುನೆಲೆ’ ಮೇಲೆ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಬಳಸಿ ಬೃಹತ್ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ.

ದಾಳಿಯ ಭೀತಿಯಿಂದಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

Vishwa News 24

Recent Posts

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ – vishwanews24

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ ಉಡುಪಿ:…

12 minutes ago

ಮಂಗಳೂರು: ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ ಪರಿಶೀಲನೆ – vishwanews24

ಮಂಗಳೂರು: ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ ಪರಿಶೀಲನೆ ಮಂಗಳೂರು: ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ರ…

16 minutes ago

ವೀಸಾ ಅವಧಿ ಮುಗಿದು 7 ತಿಂಗಳಾದರೂ ಅಕ್ರಮ ವಾಸ : ಇಸ್ರೇಲ್ ಪ್ರಜೆಯನ್ನ ವಶಕ್ಕೆ ಪಡೆದ ಹೊನ್ನಾವರ ಪೊಲೀಸರು – vishwanews24

ವೀಸಾ ಅವಧಿ ಮುಗಿದು 7 ತಿಂಗಳಾದರೂ ಅಕ್ರಮ ವಾಸ : ಇಸ್ರೇಲ್ ಪ್ರಜೆಯನ್ನ ವಶಕ್ಕೆ ಪಡೆದ ಹೊನ್ನಾವರ ಪೊಲೀಸರು ಕಾರವಾರ:…

21 minutes ago

ಮಂಗಳೂರು: ಸಚಿವ ಸಂಪುಟ ಸಭೆ ಘೋಷಣೆಗಳಿಗೆ ಮಾತ್ರ ಸೀಮತವಾಗಿರದೆ ಜಿಲ್ಲೆಯ ಅಭಿವೃದ್ಧಿಗೆ ಪ್ರಯೋಜನವಾಗಬೇಕು : ಸತೀಶ್ ಕುಂಪಲ  – vishwanews24

ಮಂಗಳೂರು: ಸಚಿವ ಸಂಪುಟ ಸಭೆ ಘೋಷಣೆಗಳಿಗೆ ಮಾತ್ರ ಸೀಮತವಾಗಿರದೆ ಜಿಲ್ಲೆಯ ಅಭಿವೃದ್ಧಿಗೆ ಪ್ರಯೋಜನವಾಗಬೇಕು : ಸತೀಶ್ ಕುಂಪಲ  ಮಂಗಳೂರು: ಮಂಗಳೂರಿನಲ್ಲಿ…

40 minutes ago

ಕರಾವಳಿಯಲ್ಲಿ ಸಚಿವ ಸಂಪುಟ ಸಭೆ : ಮುಖ್ಯಮಂತ್ರಿ ಅವರದ್ದು ದಿಟ್ಟ ಮತ್ತು ಮಹತ್ವದ ಹೆಜ್ಜೆ : ರಮೇಶ್ ಕಾಂಚನ್ – vishwanews24

ಕರಾವಳಿಯಲ್ಲಿ ಸಚಿವ ಸಂಪುಟ ಸಭೆ : ಮುಖ್ಯಮಂತ್ರಿ ಅವರದ್ದು ದಿಟ್ಟ ಮತ್ತು ಮಹತ್ವದ ಹೆಜ್ಜೆ : ರಮೇಶ್ ಕಾಂಚನ್ ಉಡುಪಿ: ಕಡಲನಗರಿ…

46 minutes ago

ಮೋದಿ ಸಾರ್ವಜನಿಕ ಸೇವೆಗೆ 25 ವರ್ಷ : ಸೆ.17 ರಿಂದ ದೇಶಾದ್ಯಂತ “ಸೇವಾ ಸಂಕಲ್ಪ ಅಭಿಯಾನ”: ಜೆ. ಪಿ. ನಡ್ಡಾ – vishwanews24

ಮೋದಿ ಸಾರ್ವಜನಿಕ ಸೇವೆಗೆ 25 ವರ್ಷ : ಸೆ.17 ರಿಂದ ದೇಶಾದ್ಯಂತ "ಸೇವಾ ಸಂಕಲ್ಪ ಅಭಿಯಾನ': ಜೆ. ಪಿ. ನಡ್ಡಾ…

1 hour ago