Featured

ರೀಲ್ಸ್‌ಗೆ ಗಂಡನ ವಿರೋಧ : ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ – vishwanews24

ರೀಲ್ಸ್‌ಗೆ ಗಂಡನ ವಿರೋಧ : ಪ್ರಿಯಕರನ ಜೊತೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತ್ನಿ

ನವದೆಹಲಿ: ವಿವಾಹಿತ ಮಹಿಳೆ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ಮಹಿಳೆಯ ಪತಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಹರ್ಯಾಣದ ಹಿಸ್ಸಾರ್‌ನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ
32 ವರ್ಷದ ರವೀನಾ ಹಾಗೂ ಸುರೇಶ್‌ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರು ಜೊತೆಯಾಗಿ ರೀಲ್ಸ್ ಮಾಡಲು ಶುರು ಮಾಡಿದ್ದಾರೆ. ಆದರೆ ಇದಕ್ಕೆ ರವೀನಾಳ ಗಂಡ ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧವನ್ನು ಕ್ಯಾರೇ ಮಾಡದೇ ಕಳೆದ ಒಂದೂವರೆ ವರ್ಷದಿಂದಲೂ ಇವರು ಜೊತೆಯಾಗಿ ಕಂಟೆಂಟ್ ಕ್ರಿಯೇಟ್ ಮಾಡುವುದನ್ನು ಮುಂದುವರೆಸಿದ್ದಾರೆ.

ಶಾರ್ಟ್ ವಿಡಿಯೋಗಳು ಹಾಗೂ ಡಾನ್ಸ್ ರೀಲ್ಸ್‌ನಿಂದಾಗಿ ಈಕೆಗೆ ಇನ್ಸ್ಟಾಗ್ರಾಮ್‌ನಲ್ಲಿ 34,000 ಫಾಲೋವರ್ಸ್‌ಗಳಿದ್ದರು.ಅಲ್ಲದೇ ಇತರ ಕಲಾವಿದರ ಜೊತೆಗೆ ಸೇರಿ ಆಕೆ ಡಾನ್ಸ್ ಮಾಡಿದ್ದು ಅವುಗಳ ಹಲವು ವೀಡಿಯೋಗಳು ಯೂಟ್ಯೂಬ್‌ನಲ್ಲೂ ಇದ್ದವು. ರೀಲ್ಸ್ ಮಾಡುವ ಹುಚ್ಚು ಹಿಡಿಸಿಕೊಂಡಿದ್ದ ರವೀನಾ ಕುಟುಂಬದ ವಿರೋಧದ ನಡುವೆಯ ತನ್ನ ಇಷ್ಟದ ರೀಲ್ಸ್ ಕೆಲಸವನ್ನು ಮುಂದುವರೆಸಿದ್ದಳು. ಇದೇ ವಿಚಾರವಾಗಿ ಈಕೆಗೂ ಗಂಡನಿಗೂ ಆಗಾಗೇ ಜಗಳಗಳು ಆಗುತ್ತಿದ್ದವು.

ಇತ್ತ ಜೊತೆಯಾಗಿ ರೀಲ್ಸ್‌ ಮಾಡಿ ಮಾಡಿ ರವೀನಾ ಹಾಗೂ ಸುರೇಶ್‌ ಮಧ್ಯೆ ಅಗತ್ಯಕ್ಕಿಂತ ಹೆಚ್ಚೇ ಬಾಂಧವ್ಯ ಬೆಳೆದಿದೆ. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಇದರಿಂದ ಗಂಡ ಹೆಂಡತಿ ನಡುವಣ ಜಗಳ ತಾರಕಕ್ಕೇರಿದೆ. ಇದಾದ ನಂತರ ಇಬ್ಬರೂ ಸೇರಿ 35 ವರ್ಷದ ಪ್ರವೀಣ್‌ನನ್ನು ಶಾಲಿನಿಂದ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಇತ್ತ ಪ್ರವೀಣ್ ಮನೆಯವರು ರವೀನಾ ಬಳಿ ಪತಿಯ ಬಗ್ಗೆ ಕೇಳಿದಾಗ ಆಕೆ ತನಗೆ ಏನೂ ಗೊತ್ತಿಲ್ಲ ಎಂಬುವಂತೆ ನಾಟಕವಾಡಿದ್ದಾಳೆ.

ಇದಾದ ನಂತರ ಅದೇ ದಿನ ರಾತ್ರಿ 2.30ರ ಸುಮಾರಿಗೆ ಇಬ್ಬರು ಸೇರಿ ಪ್ರವೀಣ್ ದೇಹವನ್ನು ಬೈಕ್‌ನಲ್ಲಿ ಇರಿಸಿಕೊಂಡು ಹೋಗಿ ಮನೆಯಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಚರಂಡಿಗೆ ಎಸೆದಿದ್ದಾರೆ. ಇತ್ತ ಮಾರ್ಚ್‌ 28ರಂದು ಪ್ರವೀಣ್‌ ಶವ ಕೊಳೆತ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸುತ್ತಮುತ್ತಲ ಹಾಗೂ ರಸ್ತೆ ಬದಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕಂಡು ಬಂದ ಸುಳಿವುಗಳು ಪೊಲೀಸರನ್ನು ಸೀದಾ ರವೀನಾ ಮನೆ ಮುಂದೆಯೇ ಬಂದು ನಿಲ್ಲುವಂತೆ ಮಾಡಿದೆ.

ಆಕೆಯ ಮನೆಗೆ ಹೋಗುವ ರಸ್ತೆಗಳ ಸಿಸಿಟಿವಿ ದೃಶ್ಯಗಳಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಬೈಕ್ ಬಿಡುತ್ತಿದ್ದರೆ ರವೀನಾ ಮುಖ ಮುಚ್ಚಿಕೊಂಡು ಹಿಂಬದಿ ಕುಳಿತು ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಪ್ರವೀಣ್ ಮೃತದೇಹ ಬೈಕ್ ರೈಡರ್ ಮತ್ತು ಹಿಂಬದಿ ಸವಾರರ ಮಧ್ಯದಲ್ಲಿತ್ತು. ಸುಮಾರು ಎರಡು ಗಂಟೆಗಳ ನಂತರ, ಆಕೆ ಅದೇ ಸವಾರನೊಂದಿಗೆ ಅದೇ ಬೈಕ್‌ನಲ್ಲಿ ಹಿಂಬದಿ ಕುಳಿತು ಮನೆಗೆ ಮರಳಿದ್ದಳು. ಈ ಸಮಯದಲ್ಲಿ, ಮಧ್ಯದಲ್ಲಿರುವ ಶವ ಕಾಣೆಯಾಗಿತ್ತು.

ನಂತರ ಪೊಲೀಸರು ರವೀನಾ ಮತ್ತು ಸುರೇಶ್ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹಿಳೆ ರವೀನಾ ಮತ್ತು ಪ್ರವೀಣ್ ಅವರಿಗೆ ಆರು ವರ್ಷದ ಮಗನಿದ್ದು, ಈಗ ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಅವರೊಂದಿಗೆ ವಾಸಿಸುತ್ತಿದ್ದಾನೆ. ಅಮ್ಮ ಮಾಡಿದ ಕೃತ್ಯದಿಂದಾಗಿ ಈಗ ಆರು ವರ್ಷದ ಮಗ ಅತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೇ ತಬ್ಬಲಿಯಾಗಿದ್ದಾನೆ. ಇತ್ತೀಚೆಗೆ ವಿವಾಹಿತರ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ಪತಿ ಪತ್ನಿಯನ್ನು ಪತ್ನಿ ಪತಿಯನ್ನು ಕೊಲ್ಲುವಂತಹ ಕೀಳು ಮಟ್ಟಕ್ಕೆ ಇಳಿಯುತ್ತಿರುವುದು ಅಲ್ಲಲ್ಲಿ ನಡೆಯುತ್ತಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago