Featured

ರುಚಿಯಾದ ಬೀಟ್ ರೂಟ್ ಹಲ್ವಾ ಮಾಡುವ ವಿಧಾನ – Vishwanews24

ಮನೆಯಲ್ಲಿ ಹಲ್ವಾ ಮಾಡುವಾಗ ತಕ್ಷಣ ನೆನಪಿಗೆ ಬರುವುದು ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಆದರೆ ಬೀಟ್ ರೂಟ್ ನಿಂದಲೂ ಸವಿರುಚಿಯ ಹಲ್ವಾ ತಯಾರಿಸಬಹುದು ಗೊತ್ತಾ? ಈ ಬೀಟ್ ರೂಟ್ ಹಲ್ವಾವನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತಯಾರಿಸಬಹುದು. ಮಕ್ಕಳಿಗಂತೂ ಇದರ ಬಣ್ಣ ಮತ್ತು ರುಚಿ ತುಂಬಾ ಇಷ್ಟವಾಗುವುದು.

ಬೇಕಾಗುವ ಸಾಮಾಗ್ರಿಗಳು :

  • 2 ಬಟ್ಟಲು ಹಾಲು
  • 4 ಬೀಟ್ ರೂಟ್
  • ಅರ್ಧ ಬಟ್ಟಲು ಸಕ್ಕರೆ
  • ಏಲಕ್ಕಿ ಪುಡಿ
  • ತುಪ್ಪ
  • ಗೋಡಂಬಿ
  • ಬಾದಾಮಿ
  • ಕೋವಾ
  • ಹಾಲು
  • ಒಣ ದ್ರಾಕ್ಷಿ

ಮಾಡುವ ವಿಧಾನ…

  • ಮಾಡುವ ವಿಧಾನ: * ಬೀಟ್ ರೂಟ್ ನ ಸಿಪ್ಪೆ ಸುಲಿದು ಅದನ್ನು ತುರಿಯಿರಿ.
  • ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ಹಾಕಿ ಅದರ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕ-ಚಿಕ್ಕ ಪೀಸ್ ಮಾಡಿ.
  • ಪ್ಯಾನ್ ಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3 ನಿಮಿಷ ಫ್ರೈ ಮಾಡಿ ಬದಿಯಲ್ಲಿ ತೆಗೆದಿಡಿ.
  • ನಂತರ ಗೋಡಂಬಿ ಫ್ರೈ ಮಾಡಿದ ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಮಾಡಿ, ನಂತರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. * ನಂತರ ಎರಡು ಕಪ್ ಹಾಲು ಮತ್ತು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಬೆಂದು ಮೆತ್ತಗಾಗಿ, ಹಾಲು ಬತ್ತುವವರೆಗೆ ಬೇಯಿಸಿ, ಆಗಾಗ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು, ಇಲ್ಲದಿದ್ದರೆ ಅಡಿ ಹಿಡಿಯುವುದು.
  • ಈಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸುರಿದು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ, ಗೋಡಂಬಿ ಬಾದಾಮಿಯಿಂದ ಅಲಂಕರಿಸಿ ತಣ್ಣಗಾಗಲು ಇಡಿ.
  • ಬೇಕಾದರೆ khoaವನ್ನು ಮೇಲೆ ಹಾಕಬಹುದು. ಇಷ್ಟು ಮಾಡಿದರೆ ಸವಿರುಚಿಯ ಬೀಟ್ ರೂಟ್ ಹಲ್ವಾ ರೆಡಿ.

    khoa ಮಾಡುವುದು ಹೇಗೆ? ಇದು ರೆಡಿ ಮೇಡ್ ಸಿಗುತ್ತದೆ, ಮಾಡುವುದಾದರೆ ದೊಡ್ಡ ಪಾತ್ರೆಗೆ 1 ಕಪ್ ಹಾಲು ಹಾಕಿ, ಹಾಲು ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಬೇಕು. (ಇದನ್ನು ಹಲ್ವಾದ ಮೇಲೆ ಹಾಕಿದರೆ ಹಲ್ವಾದ ರುಚಿ ಹೆಚ್ಚುವುದು).

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago