ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಕಿಂಗ್‌ಪಿನ್‌ಗಳಾದ ಕದಿರೇಶ್ ಸಹೋದರಿ ಮಾಲಾ ಮತ್ತು ಆಕೆಯ ಪುತ್ರ ಅರುಳ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಮಧ್ಯೆ ಪ್ರಕರಣದ ಮಾಸ್ಟರ್ ಮೈಂಡ್ “ಕ್ಯಾಪ್ಟಲ್ ಅಲಿಯಾಸ್ ಸೆಂಥಿಲ್ ‘ಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಮಾಲಾ, ಆಕೆಯ ಪುತ್ರ ಅರುಳ್ ಪಾತ್ರ ಬಹುತೇಕ ಸಾಬೀತಾಗಿದ್ದು, ಸೂಕ್ತ ಸಾಕ್ಷಾಧಾರಗಳು ಸಿಕ್ಕಿವೆ. ಹಣಕಾಸು ಮತ್ತು ರಾಜಕೀಯ ಕಾರಣಕ್ಕಾಗಿ ಪೀಟರ್ ಮತ್ತು ಆತನ ಸಹಚರರನ್ನುಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ.
ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ರೇಖಾ ಕದಿರೇಶ್ ಸಿದ್ಧವಾಗಿದ್ದರು. ಬಿಜೆಪಿಯಿಂದ ಟಿಕೆಟ್ ಕೂಡ ಖಚಿತವಾಗಿತ್ತು. ಆದರೆ, ಕದಿರೇಶ್ ಸಹೋದರಿ ಮಾಲಾ, ಬಿಎಸ್‌ಪಿಯಿಂದ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದಳು. ಒಂದು ತನಗೆ ಟಿಕೆಟ್ ಸಿಗದಿದ್ದರೆ, ಪುತ್ರಿ ಕಸ್ತೂರಿ ಅಥವಾ ಅರುಳ್ ಪತ್ನಿ ಪೂರ್ಣಿಮಾಳನ್ನು ಚುನಾವಣೆಗೆ ನಿಲ್ಲಿಸಲು ಸಿದ್ಧತೆ ನಡೆಸಿದ್ದಳು. ಆದರೆ, ದಿನೇ ದಿನೆ ವಾರ್ಡ್‌ನಲ್ಲಿ ರೇಖಾ ಜನಪ್ರಿಯತೆ, ವರ್ಚಸ್ಸು ಹೆಚ್ಚಾಗುತ್ತಿತ್ತು. ಜತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ರೇಖಾ ಮನ್ನಣೆ ಪಡೆದುಕೊಂಡಿದ್ದರು. ಹೀಗಾಗಿ ತನ್ನ ಹಾಗೂ ತನ್ನ ಕುಟುಂಬದ ಭವಿಷ್ಯಕ್ಕೆ ರೇಖಾ ಅಡಿಯಾಗುತ್ತಿದ್ದಾಳೆ ಎಂದು ನಿಶ್ಚಯಿಸಿದ್ದ ಮಾಲಾ, ಪುತ್ರ ಅರುಳ್ ಜತೆ ಸೇರಿಕೊಂಡು ರೇಖಾ ಹತ್ಯೆಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ನಡೆಸಿದ್ದರು.
ಹಂತಕರ ಸಂಪರ್ಕ: ಸುಮಾರು 25 ವರ್ಷಗಳ ಹಿಂದೆ ಕಳ್ಳಭಟ್ಟಿ ಸಾರಾಯಿ ದಂಧೆ ನಡೆಸುತ್ತಿದ್ದ ಮಾಲಾ, ಸಾರಾಯಿ ನಿಷೇಧಿಸುತ್ತಿದ್ದಂತೆ ಗಾಂಜಾ ದಂಧೆ ನಡೆಸುತ್ತಿದ್ದಳು. ಹೀಗಾಗಿ ಒಂದೆರಡು ಬಾರಿ ತನ್ನ ಹಳೇ ಸಂಪರ್ಕದಲ್ಲಿದ್ದ ನಗರದ ಕೆಲ ರೌಡಿಗಳು, ಜತೆಗೆ ಕದಿರೇಶ್ ಹತ್ಯೆಗೈದ ಶೋಭನ್ ಗ್ಯಾಂಗ್ ನ ಕೆಲ ರೌಡಿಗಳು, ಸುಪಾರಿ ಹಂತಕರನ್ನು ಸಂಪರ್ಕಿಸಿದ್ದಳು ಎಂದು ಹೇಳಲಾಗಿದೆ. ಆದರೆ, ಅವರು ಯಾರು ಒಪ್ಪಿಕೊಂಡಿರಲಿಲ್ಲ. ಮತ್ತೂಂದೆಡೆ ಪೀಟರ್ ಇರುವವರೆಗೂ ರೇಖಾ ಹತ್ಯೆ ಸಾಧ್ಯವಿಲ್ಲ ಎಂದ ಮಾಲಾ ಅಂದುಕೊಂಡಿದ್ದಳು.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…