Featured

ರೈತರೇ ಗಮನಿಸಿ : ಪಿಎಂ ಕುಸುಮ್ ಯೋಜನೆ ಯಡಿ ಸೌರ ಚಾಲಿತ ಕೃಷಿ ಪಂಪ್ ಸೆಟ್ ಗಳಿಗಾಗಿ ಅರ್ಜಿ ಆಹ್ವಾನ – Vishwanews24

ರೈತರೇ ಗಮನಿಸಿ : `ಪಿಎಂ ಕುಸುಮ್ ಯೋಜನೆ’ಯಡಿ ಸೌರ ಚಾಲಿತ ಕೃಷಿ ಪಂಪ್ ಸೆಟ್ ಗಳಿಗಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಲು ಅರ್ಹ ರೈತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್. ಅಧಿಕೃತ ಜಾಲತಾಣ ವೆಬ್‍ಸೈಟ್ www.kredl.karnataka.gov.in ನಲ್ಲಿ ನೀಡಲಾಗಿದೆ.

ಮಾನದಂಡಗಳು: ರೈತರ ಜಮೀನಿನಲ್ಲಿ ಬಾವಿಯನ್ನು ಕೊರೆಸಿ ಸಿದ್ದವಿರಬೇಕು. ಹೊಸ ಕೃಷಿ ಪಂಪ್‍ಸೆಟ್‍ಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್‍ಸೆಟ್‍ಗಳು ಅರ್ಹವಿರುವುದಿಲ್ಲ). ಅರ್ಜಿದಾರರು ಒಂದು ಸೌರ ಪಂಪ್‍ಸೆಟ್‍ಗೆ ಮಾತ್ರ ಅರ್ಜಿ ಸಲ್ಲಿಸುವುದು. ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‍ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ. ಅರ್ಜಿದಾರರು ಅವರ ವಂತಿಗೆಯನ್ನು ಡಿ.ಡಿ ಮೂಲಕವೇ ಸಲ್ಲಿಸುವುದು. ಚೆಕ್ ಅಥವಾ ಇತರೆ ಆನ್‍ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ ಮತ್ತು ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷಚೇತನ ವರ್ಗದವರ ವಂತಿಗೆಯನ್ನು ಪಾವತಿಸಲಾಗುವುದು. ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka.gov.in ನಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ನೊಂದಾಯಿಸಿಕೊಳ್ಳಬಹುದಾಗಿದೆ.

ಅರ್ಜಿದಾರರು ಪಾವತಿಸಬೇಕಾದ ವಂತಿಗೆಗಳು: 3 ಹೆಚ್.ಪಿ ಸಾಮಥ್ರ್ಯದ ಪಂಪ್‍ಸೆಟ್‍ಗೆ ಸಾಮಾನ್ಯ ವರ್ಗದವರು ಘಟಕದ ವೆಚ್ಚ ಶೇ.40ರಷ್ಟು 71,422 ರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಘಟಕದ ವೆಚ್ಚ ಶೇ.20ರಷ್ಟು 35,711ರೂ. ಪಾವತಿಸಬೇಕು. 5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,01,056, ಪ.ಜಾತಿ ಮತ್ತು ಪ.ಪಂಗಡದವರು ರೂ.50,528, 7.5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,45,710, ಪ.ಜಾತಿ ಮತ್ತು ಪ.ಪಂಗಡದವರು ರೂ.72856, 10ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.2,50,292, ಪ.ಜಾತಿ ಮತ್ತು ಪ.ಪಂಗಡದವರು ರೂ.1,77,438 ಪಾವತಿಸಬೇಕು.

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.80ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತ ಬಾಂಧವರಿಗೆ ಶೇ.60ರಷ್ಟು ಸಬ್ಸಿಡಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಕೆ.ಆರ್.ಇ.ಡಿ.ಎಲ್. ಪ್ರಾದೇಶಿಕ ಕಚೇರಿ ಅಥವಾ ಮೊ.9986025252, 9742310108 ಗೆ ಸಂಪರ್ಕಿಸಬಹುದು.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

3 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

4 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

4 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

4 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

5 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

5 hours ago