Featured

ರೈತ ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆ.ಡಿ.ಎಸ್‌. ಬೆಂಬಲಿಸಿ : ಎಚ್‌.ಡಿ. ಕುಮಾರಸ್ವಾಮಿ

ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ..

ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ ಮೂಲ ಮಂತ್ರ..

ರಟ್ಟೀಹಳ್ಳಿ :  ಬಡವರು, ದೀನ ದಲಿತರು ಹಿಂದುಳಿದ ವರ್ಗದವರು ನಮ್ಮ ಪಕ್ಷದ ಜೀವಾಳವಾಗಿದ್ದು ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ ಮೂಲ ಮಂತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಹೊಸ ಬಸ್‌ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹಾವೇರಿಗೆ ಜಿಲ್ಲೆಯಲ್ಲೇ 75 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಧಿಕಾರಕ್ಕೆ ಬಂದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬಗಳನ್ನು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗಿದೆ.

ನಾಡಿನ ಸಮಸ್ತ ರೈತ ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆ.ಡಿ.ಎಸ್‌. ಬೆಂಬಲಿಸಿ. ಮುಂದಿನ ಉಜ್ವಲ ಕರ್ನಾಟಕದ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳ ಆಶಯ ಹೊಂದಿದ್ದು, ಎಲ್‌.ಕೆ.ಜಿ ಯಿಂದ 12ನೇ ತರಗತಿಯ ವರೆಗೆ ಎಲ್ಲ ಜಾತಿಯ ಮಕ್ಕಳಿಗೂ ಉಚಿತ ಗುಣಾತ್ಮಕ ಶಿಕ್ಷಣ ದೊರಕಿಸುವದು. ನಾಡಿನ ಬಡಕುಟುಂಬದ ಜನರಿಗೆ ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ರಾಜ್ಯದ ಪ್ರತಿ ಗ್ರಾಪಂನಲ್ಲಿ 30 ಬೆಡ್‌ನ ಆಸ್ಪತ್ರೆ ನಿರ್ಮಿಸುವ ಮೂಲಕ ಉಚಿತ ಆರೋಗ್ಯ ಸೇವೆ ನೀಡುವದು. ರೈತರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು. ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದು, ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವದು, ಋುಣಮುಕ್ತ ಕಾಯಿದೆ ಮೂಲಕ ಸರ್ವ ಜನಾಂಗದ ಅಭಿವೃದ್ಧಿ ನನ್ನ ಆಡಳಿತದ ಮೂಲ ಮಂತ್ರವಾಗಿದೆ ಎಂದರು.

ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ. ಸಮಾಜ ಒಡೆದು ಅಧಿಕಾರ ನಡೆಸುವುದು ಆ ಪಕ್ಷಗಳ ಕೆಲಸ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ(BJP) ಪಕ್ಷದ ನೀತಿಯನ್ನು ಟೀಕಿಸಿದರು.

ಕೇವಲ ಮತ ಪಡೆಯೋಕೆ ಇಲ್ಲಿ ಹಲವು ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಇದಕ್ಕೆ ಮತದಾರರು ಅವಕಾಶ ನೀಡಬಾರದು. ನನ್‌ ಹತ್ತಿರ ಶ್ರೀಮಂತರು ಬರುವುದಿಲ್ಲ. ಗ್ರಾಮೀಣ ಪ್ರದೇಶದ ಜನ ಮಾತ್ರ ಬರುತ್ತಾರೆ. ನಾನು ಎಂದಿಗೂ ಗ್ರಾಮೀಣ ಜನರೊಂದಿಗೆ ಬೆರೆತಿರುವವನು. ತಾವು ತೋರಿಸೋ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತೀನಿ ಅಂತಾನೆ, ಎಲ್ಲಿದೆ ದುಡ್ಡು ಅಂತ ವಿಡಂಬನೆ ಮಾಡಿದರು. ಬೇರೆ ಪಕ್ಷದವರೇ ನಮ್ಮ ಜೊತೆ ಸರ್ಕಾರ ಮಾಡಲು ಬಂದಾಗ ನಾನು ರೈತರ ಹಿತದೃಷ್ಟಿಯಿಂದ ಒಪ್ಪಿಕೊಂಡು ಸಿಎಂ ಆದೆ. 14 ತಿಂಗಳಲ್ಲಿ .25000 ಕೋಟಿ ಹೊಂದಿಸಿ ರೈತರ ಸಾಲ ಮನ್ನಾ ಮಾಡಿದೆ. ಹಿರೇಕೆರೂರು ತಾಲೂಕಿನಲ್ಲಿ ರೈತರ .100 ಕೋಟಿಗೂ ಅಧಿಕ ಸಾಲಮನ್ನಾ ಆಗಿದೆ ಎಂದರು.

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

24 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

2 days ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago