Featured

ರೈಲ್ವೆ ಕಾಮಗಾರಿ ಹಿನ್ನಲೆ : ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ – vishwanews24

ರೈಲು ಪ್ರಯಾಣಿಕರ ಗಮನಕ್ಕೆ: ರೈಲ್ವೆ ಕಾಮಗಾರಿ ಹಿನ್ನಲೆ – ಪ್ರಮುಖ ರೈಲುಗಳ ಸಮಯ ಬದಲಾವಣೆ

ಬೆಂಗಳೂರು:ರೈಲ್ವೆ ಕಾಮಗಾರಿ ಹಿನ್ನೆಲೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಆಗಮನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಆಯಾ ರೈಲುಗಳ ಮುಂದೆ ನಮೂದಿಸಲಾದ ಪ್ರಯಾಣ ಆರಂಭದ ದಿನಾಂಕದಿಂದ ಈ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಶವಂತಪುರ–ಹಾಸನ ಮಾರ್ಗದ ರೈಲು:

ಹಾಸನ ನಿಲ್ದಾಣಕ್ಕೆ ಈ ಹಿಂದೆ ರಾತ್ರಿ 21:05 (9:05 PM) ಕ್ಕೆ ಆಗಮಿಸುತ್ತಿದ್ದ ಈ ರೈಲು, ಪರಿಷ್ಕೃತ ವೇಳಾಪಟ್ಟಿಯಂತೆ ರಾತ್ರಿ 21:20 (9:20 PM) ಕ್ಕೆ ತಲುಪಲಿದೆ (ಯಶವಂತಪುರದಿಂದ ಶಾಂತಿಗ್ರಾಮದವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ)

ರೈಲು ಸಂಖ್ಯೆ: 16572 ಬೀದರ್–ಯಶವಂತಪುರ ಎಕ್ಸ್‌ಪ್ರೆಸ್:
ಜಾರಿ ದಿನಾಂಕ : ನವೆಂಬರ್ 23, 2026 ರಿಂದ

ಯಶವಂತಪುರ ಕ್ಕೆ ಹಳೆಯ ಸಮಯ ಬೆಳಗ್ಗೆ 07:40 ಅಗಮಿಸುತ್ತಿತ್ತು. ಇದೀಗ ಬದಲಾವಣೆಯಾದ ಸಮಯ ಬೆಳಗ್ಗೆ 07:55 (ಬೀದರ್–ಯಲಹಂಕ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 16528 ಕಣ್ಣೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 07:50 . ಬದಲಾವಣೆಯಾದ ಸಮಯ ಬೆಳಗ್ಗೆ 08:05 (ಕಣ್ಣೂರು–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ).

ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್:

ಜಾರಿ ದಿನಾಂಕ: ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:05 | ಬದಲಾವಣೆಯಾದ ಸಮಯ ಬೆಳಗ್ಗೆ 08:15 (ಸಿಂಧನೂರು–ಚಿಕ್ಕಬಾಣಾವರ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ–ಯಶವಂತಪುರ ವಾರದ ಡುರೊಂಟೊ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 23, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ದೆಹಲಿ–ಗುಂತಕಲ್ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 16574 ಪಾಂಡಿಚೇರಿ–ಯಶವಂತಪುರ ವಾರದ ಎಕ್ಸ್‌ಪ್ರೆಸ್:

ಜಾರಿ ದಿನಾಂಕ: ನವೆಂಬರ್ 21, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ಬದಲಾವಣೆಯಾದ ಸಮಯ ಬೆಳಗ್ಗೆ 08:25 (ಪಾಂಡಿಚೇರಿ–ಬಾಣಸವಾಡಿ ನಡುವೆ ಸಮಯ ಬದಲಾವಣೆ ಇಲ್ಲ)

ರೈಲು ಸಂಖ್ಯೆ 12735 ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್:

ಜಾರಿ ದಿನಾಂಕ : ನವೆಂಬರ್ 22, 2026 ರಿಂದ

ಯಶವಂತಪುರ ಆಗಮನ: ಹಳೆಯ ಸಮಯ ಬೆಳಗ್ಗೆ 08:20 | ನೂತನ ಸಮಯ ಬೆಳಗ್ಗೆ 08:25 (ಚರ್ಲಪಲ್ಲಿ–ಹಿಂದೂಪುರ ನಡುವೆ ಸಮಯ ಬದಲಾವಣೆ ಇಲ್ಲ),

Vishwa News 24

Recent Posts

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ – vishwanews24

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ ಮಂಗಳೂರು : ಶತಮಾನಕ್ಕೂ ಅಧಿಕ…

35 minutes ago

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ – vishwanews24

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ ಶ್ರೀನಗರ: ಕುಲ್ಗಾಮ್‌ನ ಸಿಆರ್‌ಪಿಎಫ್‌ ಚೆಕ್‌ ಪೋಸ್ಟ್‌ ಮೇಲೆ ದಾಳಿ…

23 hours ago

ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  – vishwanews24

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  ಬೆಂಗಳೂರು: ಮಾಸಿಕ…

24 hours ago

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ 5ನೇ…

1 day ago

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು – vishwanews24

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು ಬ್ರಹ್ಮಾವರ,:ಒಣ ಹುಲ್ಲು…

1 day ago

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ – vishwanews24

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮೊಟ್ಟೆ…

2 days ago