Featured

ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದಲ್ಲಿ ಜೆಡಿಎಸ್ ನಾಯಕಿಯ ಪುತ್ರಿ ಅರೆಸ್ಟ್ – Vishwanews24

ಬೆಂಗಳೂರು: ಹಾಡ ಹಗಲೇ ನಡೆದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣದಲ್ಲಿ ಸುಂದರಿಯೊಬ್ಬಳ ಕೈವಾಡವಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.
ಲಕ್ಷ್ಮಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜೆಡಿಎಸ್ ನಾಯಕಿಯ ಪುತ್ರಿ ವರ್ಷಿಣಿ ಸೇರಿದಂತೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದು,  ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್, ಆರು ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.ಮಾರ್ಚ್ 7ರಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಾಡಹಗಲೇ ರೌಡಿ ಲಕ್ಷ್ಮಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೇವರಾಜ್, ಹೇಮಂತ್, ಕ್ಯಾಟ್ ರಾಜ, ರೂಪೇಶ್ ಚೇತನ್ ಹಾಗೂ ವರ್ಷಿಣಿಯನ್ನು ಕಳೆದ ರಾತ್ರಿ ಬಂಧಿಸಿದ್ದರು.ಲಕ್ಷ್ಮಣ ಕೊಲೆಯ ಹಿಂದೆ ವರ್ಷಿಣಿ ಕೈವಾಡ ಇದ್ದಿರುವುದನ್ನು ಪೊಲೀಸರು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ.

ಈ ವರ್ಷಿಣಿ ರೌಡಿಶೀಟರ್ ಮೋಟೆ ಹರೀಶ್ ಮಗಳು ಎಂದು ತಿಳಿದುಬಂದಿದ್ದು, ವರ್ಷಿಣಿ ತಾಯಿ ಪದ್ಮ ಸ್ಥಳೀಯ ಜೆಡಿಎಸ್ ಘಟಕದ ಅಧ್ಯಕ್ಷೆಯಾಗಿದ್ದಾರೆ.ವರ್ಷಿಣಿ ರೂಪೇಶ್ ಜೊತೆಗೆ ಪ್ರೀತಿಸುತ್ತಿದ್ದಳು. ಆದರೆ ಆಕೆಯ ತಾಯಿ ಆತನನ್ನು ದೂರ ಮಾಡಿದ್ದಳು. ಅದಕ್ಕೆ ಲಕ್ಷ್ಮಣ ಸಹಾಯ ಕೋರಿದ್ದಳು. ಈ ರೂಪೇಶ್ ಸಣ್ಣ ಪುಟ್ಟ ಕಳ್ಳತನ ಪ್ರಕರಣ ಮಾಡಿಕೊಂಡು ರೌಡಿ ಶೀಟರ್ ಲಕ್ಷ್ಮಣ ಗ್ಯಾಂಗ್ ನಲ್ಲಿದ್ದ ಹುಡುಗನಾಗಿದ್ದ.
ವರ್ಷಿಣಿಯನ್ನು ರೂಪೇಶ್ ನಿಂದ ದೂರ ಮಾಡಿದ ಮೇಲೆ ಲಕ್ಷ್ಮಣ ಆಕೆಯೊಂದಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದ. ಆಕೆ ಆತನನ್ನು ನಂಬಿಸಿ ಬಲೆಗೆ ಹಾಕಿ ರೂಪೇಶ್ ಹಾಗೂ ತಂಡದವರಿಂದ ಆತನನ್ನು ಮುಗಿಸಲು ಸಂಚು ರೂಪಿಸಿದ್ದಳು.

ಎಂಬಿಬಿಎಸ್ ಓದಿ ಎಂಎಸ್ ಓದಲು ಲಂಡನ್ ಗೆ ಹೋಗಿದ್ದ ವರ್ಷಿಣಿ ರೌಡಿ ಲಕ್ಷ್ಮಣ್ ಗೆ ಬರಲು ಹೇಳಿ ಆ ಮಾಹಿತಿಯನ್ನು ರೂಪೇಶ್ ಗೆ ನೀಡಿ ಮಟಾಷ್ ಮಾಡಿಸಿದ್ದಾಳೆ. ಲಂಡನ್ ನಲ್ಲಿಯೇ ಇದ್ದು ಪ್ರಿಯತಮನ ಸಹಾಯದಿಂದ ಕೊಲೆ ಮಾಡಿಸಿದ್ದಾಳೆ.
ಇದೀಗ ವರ್ಷಿಣಿ ಹಾಗೂ ಆಕೆಯ ಪ್ರಿಯತಮ ರೂಪೇಶ್ ಸೇರಿ, ಕೊಲೆ ಪ್ರಮುಖ ಆರೋಪಿಗಳಾದ ಕ್ಯಾಟ್ ರಾಜಾ, ದೇವರಾಜ್, ಹೇಮಂತ್, ಚೇತನ್ ಸೇರಿ ಹಲವರನ್ನು ಬಂ‍‍ಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago