Featured

ಲಂಚ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ – Vishwanews24

ಲಂಚ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧನದ ಭೀತಿಯಲ್ಲಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ಅವರ ಪರ ವಕೀಲರು ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಮಂಗಳವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.

40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಗುರುವಾರ ತಡ ರಾತ್ರಿ ಬೆಂಗಳೂರು ತಲುಪಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಬಳಿಕ ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ಹಲವು ತಂಡಗಳಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಮೊದಲನೇ ಆರೋ‍ಪಿಯಾಗಿದ್ದು, ಅವರಿಗಾಗಿ ಲೋಕಾಯುಕ್ತ ಪೊಲೀಸರು ವಿವಿಧೆಡೆ ಶೋಧ ನಡೆಸುತ್ತಿದ್ದಾರೆ.

Vishwa News 24

Recent Posts

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ – vishwanews24

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ ಬೆಳಗಾವಿ : ಜಮೀರ್ ಅಹ್ಮದ್ ಅವರು ನಮ್ಮ…

10 minutes ago

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ – vishwanews24

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ ಮಂಗಳೂರು: ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು…

43 minutes ago

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ – vishwanews24

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಾಶೋತ್ಸವದ ಪ್ರಯುಕ್ತ…

3 hours ago

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ – vishwanews24

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ ಸುರಪುರ : ಬಸ್ ಮತ್ತು ಕಾರಿನ…

3 hours ago

ಚಿಕನ್ ಪ್ರಿಯರೇ ಎಚ್ಚರ : ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ – vishwanews24

ಚಿಕನ್ ಪ್ರಿಯರೇ ಎಚ್ಚರ : ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ಬೆಂಗಳೂರು: ಚಿಕನ್ ಪ್ರಿಯರೇ ಎಚ್ಚರವಾಗೀರಿ. ರಾಜ್ಯಕ್ಕೆ H5N1 ವೈರಸ್…

4 hours ago

ಕಾಪು : ಕಾರು-ಲಾರಿ ಮಧ್ಯೆ ಭೀಕರ ಅಪಘಾತ  – ಓರ್ವ ಸಾವು, ಇಬ್ಬರು ಗಂಭೀರ – vishwanews24

ಕಾಪು : ಕಾರು-ಲಾರಿ ಮಧ್ಯೆ ಭೀಕರ ಸ್ತೆ  ಅಪಘಾತ  - ಓರ್ವ ಸಾವು, ಇಬ್ಬರು ಗಂಭೀರ ಕಾಪು: ಮಂಗಳೂರು-ಉಡುಪಿ ರಾಷ್ಟ್ರೀಯ…

4 hours ago